ಈ ಬಾರಿಯ ಕನ್ನಡ ಕೋಗಿಲೆ ಕಾರ್ಯಕ್ರಮದಲ್ಲಿ ಎಲ್ಲರ ಗಮನವನ್ನು ಸೆಳೆದಿದ್ದು ಗಾಯಕ ಖಾಸಿಂ ಅಲಿ. ತನ್ನ ಉತ್ತಮ ಕಂಠದಿಂದ ಎಂತಹ ಹಾಡನ್ನು ಸಹ ತುಂಬ ಲೀಲಾಜಾಲವಾಗಿ ಹಾಡುತ್ತಾ ಎಲ್ಲರ ಮನಸ್ಸನ್ನು ಗೆದ್ದ ಖಾಸಿಂ ಅಲಿ ರಾಜ್ಯಾದ್ಯಂತ ಪ್ರಸಿದ್ಧಿಯನ್ನು ಪಡೆದರು.
ಇನ್ನು ರಾಜ್ಯವೇ ಹೆಮ್ಮೆ ಪಡುವಂತಹ ಖಾಸಿಂ ಅಲಿ ಅವರಿಗೆ ಅವರ ಹುಟ್ಟೂರಿನವರೇ 25 ಸಾವಿರ ರೂಪಾಯಿ ದಂಡ ಹಾಕಿದ್ದಾರೆ ಎನ್ನಲಾಗುತ್ತಿದೆ. ಹೌದು ಕನ್ನಡ ಕೋಗಿಲೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಖಾಸಿಂ ಅಲಿ ಅವರು ತಮ್ಮ ಊರಿನ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ ಎಂಬ ಕಾರಣಕ್ಕೆ ಈ ರೀತಿಯಾಗಿ ಮಾಡಲಾಗಿದೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ ರೈತರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂಬ ಕಾರಣವನ್ನು ಸೇರಿಸಿ ಖಾಸಿಂ ಅಲಿ ಅವರಿಗೆ 25 ಸಾವಿರ ರೂಪಾಯಿಯನ್ನು ಹಾಕಲಾಗಿದೆ ಎನ್ನಲಾಗಿದೆ.