ಬೆಂಗಳೂರು: ಕರ್ನಾಟಕದ ಗಡಿಭಾಗ ಬೆಳಗಾವಿಯಲ್ಲಿ ಶಿವಸೇನೆ ಕಾರ್ಯಕರ್ತರು ಕನ್ನಡ ಧ್ವಜ ಸುಟ್ಟು ಪುಂಡಾಟಿಕೆ ನಡೆಸಿ ರಾಜ್ಯದ ಕೆಂಗಣ್ಣಿಗೆ ಗುರಿಯಾಗಿದ್ದರು.ಇದೀಗ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೀಡಿದ್ದ ಹೇಳಿಕೆಗೆ ಯಡಿಯೂರಪ್ಪ ಕೆಂಡಮಂಡಲವಾಗಿದ್ದಾರೆ. ಕಾರವಾರ ಹಾಗೂ ಬೆಳಗಾವಿಯ ಕೆಲ ಪ್ರದೇಶಗಳು ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ ಎಂದು ದೇವೇಂದ್ರ ಫಡ್ನವಿಸ್ ಹೇಳಿದ್ರು,ಇದಕ್ಕೆ ಸಂಬಧಿಸಿದಂತೆ ಮಾತನಾಡಿದ ಯಡಿಯೂರಪ್ಪ ಕರ್ನಾಟಕದ ಒಂದಿಚೂ ಜಾಗವನ್ನು ಬಿಡುವುದಿಲ್ಲ ಎಂದು ಫಡ್ನವಿಸ್ಗೆ ತೀರುಗೇಟು ಕೊಟ್ಟಿದ್ದಾರೆ.ಮಹಾಜನ್ ವರದಿಯಂತೆ ರಾಜ್ಯಗಳಿಗೆ ಪ್ರದೇಶಗಳು ಸೇರ್ಪಡೆಯಾಗಿದೆ, ಯಾವ ಪ್ರದೇಶ ಯಾವ ರಾಜ್ಯಕ್ಕೆ ಸೇರಬೇಕೆಂಬುದು ಈಗಾಗಲೇ ತೀರ್ಮಾವಗಿರುವ ವಿಚಾರ. ಈ ಬಗ್ಗೆ ವಿವಾದ ಸೃಷ್ಟಿಸುವುದು ಸರಿಯಲ್ಲ. ರಾಜಕೀಯ ಬೇಳೆ ಬೆಯಿಸಿಕೊಳ್ಳಲು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಸಿಎಂ ಯಡಿಯೂರಪ್ಪ ವಾಗ್ದಳಿ ನಡೆಸಿದ್ದಾರೆ. ಅಲ್ಲದೆ ಗಡಿ ಭಾಗದ ಕನ್ನಡಿಗರಿಗೆ ಶಾಂತಿ ಕಾಪಾಡಿಕೊಳ್ಳಲು ಮನವಿ ಮಾಡಿದ್ದಾರೆ.
ಕರ್ನಾಟಕದ ಒಂದಡಿ ಜಾಗವನ್ನು ಬಿಡಲ್ಲ ಅಂತ ಸಿಡಿದ ಯಡಿಯೂರಪ್ಪ!
Date: