ಕರ್ನಾಟಕದ ಕೋಳಿಗಳಲ್ಲೂ ಹಕ್ಕಿ ಜ್ವರ: ಸಂಡೂರಿನಲ್ಲಿ 2,000 ಕೋಳಿಗಳು ಸಾವು
ಬಳ್ಳಾರಿ: ರಾಜ್ಯದಲ್ಲಿ ಹಕ್ಕಿ ಜ್ವರ ಭೀತಿಕಾಡಿದೆ. ಚಿಕ್ಕಬಳ್ಳಾಪುರದ ವರದಹಳ್ಳಿ ಗ್ರಾಮದಲ್ಲಿ ಹಕ್ಕ ಜ್ವರ ದೃಢಪಟ್ಟಿದ್ದು ಅಲ್ಲಿನ ಫಾರಂಗಳಲ್ಲಿ ನೂರಾರು ಕೋಳಿಗಳನ್ನು ಕೊಲ್ಲಲಾಗಿತ್ತು. ಇದೀಗ ಬಳ್ಳಾರಿಯ ಸಂಡೂರು ತಾಲ್ಲೂಕಿನಲ್ಲಿ ಹಕ್ಕಿ ಜ್ವರದಿಂದ 2400 ಕೋಳಿಗಳು ಸಾವನ್ನಪ್ಪಿವೆ. ಪ್ರಯೋಗಾಲಯ ವರದಿ ಇದನ್ನು ದೃಢಪಡಿಸಿದೆ.
ಸರ್ಕಾರ ಕುರೇಕುಪ್ಪ ಗ್ರಾಮದ ಸುತ್ತ ಒಂದು ಕಿಮೀ ಅಪಾಯಕಾರಿ ವಲಯ ಮತ್ತು 10 ಕಿಮೀ ಕಣ್ಣಗಾವಲು ವಲಯವನ್ನಾಗಿ ಗುರುತಿಸಿದೆ. ಚಿಕ್ಕಬಳ್ಳಾಪುರದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಕೋಳಿಗಳನ್ನು ನಾಶಪಡಿಸುವ ಮೂಲಕ ಸೋಂಕು ಹರಡುವುದನ್ನು ತಡೆಯಲು ಪ್ರಯತ್ನಿಸಲಾಗುತ್ತಿದೆ.
ಹಕ್ಕಿ ಜ್ವರ ದೃಢ ಹಿನ್ನೆಲೆಯಲ್ಲಿ ಬಳ್ಳಾರಿ ಜನರು ಆತಂಕಗೊಂಡಿದ್ದಾರೆ. ಇನ್ನು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಜಿಲ್ಲೆಯಲ್ಲಿ ಅಗತ್ಯ ಕ್ರಮ ಕೈಗೊಂಡಿದೆ. ಕುರೇಕುಪ್ಪ ಗ್ರಾಮದ ಸುತ್ತಲಿನ ಒಂದು ಕಿಮೀ ದೂರವನ್ನ ಅಪಾಯಕಾರಿ ವಲಯ ಎಂದು ಗುರುತು ಮಾಡಲಾಗಿದೆ.