ವಿಕಾಸಸೌಧದಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ”ನಮ್ಮ ಕಾರ್ಗೋ” ಪಾರ್ಸಲ್ ಸೇವೆಗಳನ್ನು ನಾಳೆಯಿಂದ ಅಧಿಕೃತ ಚಾಲನೆ ಆಗಲಿದೆ
ಈಗಾಗಲೇ ಖಾಸಗಿ ಸಾರಿಗೆ ಬಸ್ ಗಳು ಕಾರ್ಗೋ ಮತ್ತು ಕೋರಿಯರ್ ಸೇವೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಕೆಎಸ್ ಆರ್ ಟಿಸಿ ,ಡಬ್ಲ್ಯುಎಸ್ಆರ್ ಟಿಸಿ,ಈವೆಎಸ್ ಆರ್ ಟಿಸಿ ಗಳ ಕಾರ್ಯಾಚರಣೆ ನಡೆಯಲಿದೆ. ೧೦೯ ಸ್ಥಳಗಳಲ್ಲಿ ಸೇವೆಯನ್ನು ಆರಂಭಿಸಲಿದೆ.
ಕರಾರಸಾಸಂಸ್ಥೆ- ೩೫
ವಾಕರಸಾ ಸಂಸ್ಥೆ -೨೬
ಈಕರಸಾ ಸಂಸ್ಥೆ-೨೭
ಅಂತರ ರಾಜ್ಯ -೨೧
ಕಾರ್ಗೋ ಮತ್ತು ಕೊರಿಯರ್ ಸೇವೆಯ ಮೂಲಕ ೭೦-೮೦ ಕೋಟಿ ರೂ ಆದಾಯ ನಿರೀಕ್ಷಿಸಲಾಗಿದೆ. ಕೋವಿಡ್ ಹಾಗೂ ಇತರೆಲ್ಲಾ ಸೇರಿ ಒಟ್ಟು ೪೦೦೦ ಕೋಟಿ ರೂ ಆದಾಯ ಕೊರತೆಯಾಗಿದೆ.
ಒಟ್ಟು ನಾಲ್ಕು ನಿಗಮಗಳಿಂದ ಆದ ನಷ್ಟ ೨೭೧೦ ಕೋಟಿ ರೂ.
ಕೋವಿಡ್ ಸಂದರ್ಭದಲ್ಲಿ ಸಿಬ್ಬಂದಿ ವೇತನ ಪಾವತಿಗಾಗಿ ಸರ್ಕಾರದಿಂದ ೧೭೮೦ ಕೋಟಿ ರೂ ಅನುದಾನ ಪಡೆದು ೧.೩೦ ಲಕ್ಷ ಸಿಬ್ಬಂದಿಗೆ ವೇತನ ಪಾವತಿಸಿದ್ದೇವೆ ಡಿಸಿಎಂ ಲಕ್ಷ್ಮಣ್ ಸವದಿ ಹೇಳಿಕೆ ನೀಡಿದ್ದಾರೆ.