ಹಿರಿಯ ತಬಲಾ ಮಾಂತ್ರಿಕ 73 ವರ್ಷದ ಜಾಕೀರ್ ಹುಸೇನ್ ವಿಧಿವಶರಾಗಿದ್ದಾರೆ.ಕಳೆದ ಎರಡು ವಾರಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನ, ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದರು.
ಜಾಕೀರ್ ಹುಸೇನ್ ಆಪ್ತ ರಾಕೇಶ್ ಚೌರಾಸಿಯಾ ಅವರು ಕೆಲವೇ ಗಂಟೆಗಳ ಹಿಂದೆ ಮಾಧ್ಯಮದ ಮುಂದೆ ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದರು. ಸಂಗೀತ ಲೋಕದಲ್ಲಿ ತಮ್ಮದೆ ಆದ ಛಾಪು ಮೂಡಿಸಿದ ಅವರು ಸಂಗೀತ ಲೋಕದ ಅಮೂಲ್ಯ ರತ್ನ ಕಳಚಿದಂತಾಗಿದೆ.