ಕಳೆದ 50 ವರ್ಷದಲ್ಲಿ ಮೋದಿಯಂತಹ ಪ್ರಧಾನಿಯನ್ನು ನಾನು ನೋಡೆ ಇಲ್ಲ..!

admin
1 Min Read

ಶಿವಮೊಗ್ಗದ ಉಂಬ್ಳೇಬೈಲುನಲ್ಲಿ ನಡೆದ ಜೆಡಿಎಸ್- ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಕುರಿತು ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು ಕಳೆದ 50 ವರ್ಷದಲ್ಲಿ ಮೋದಿಯಷ್ಟು ಕೀಳುಮಟ್ಟದ ಪ್ರಧಾನಿಯನ್ನು ನಾನೆಂದೂ ನೋಡಿಲ್ಲ ಎಂದು ಹೇಳಿದ್ದಾರೆ.

ಈ 5 ವರ್ಷಗಳಲ್ಲಿ ಪ್ರಧಾನಿ ರೈತರ ಬಗ್ಗೆ ಒಂದೂ ಮಾತನಾಡಲಿಲ್ಲ. ಕಳೆದ ಬಾರಿ ನಾನು ಹೇಳಿದ್ದೆ ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸೋದಿಲ್ಲಾ ಅಂತಾ. ಆದ್ರೆ ಈ ರಾಷ್ಟ್ರಕ್ಕೆ ನಿಮ್ಮ ಅವಶ್ಯಕತೆ ಇದೆ ಎಂದು ಹಲವು ನಾಯಕರು ಹೇಳಿದ್ದರು ಅದಕ್ಕಾಗಿ ಮತ್ತೆ ನಿಂತಿರುವೆ ಆದರೆ ಕಳೆದ 50 ವರ್ಷದಲ್ಲಿ ಮೋದಿಯಷ್ಟು ಕೀಳುಮಟ್ಟದಲ್ಲಿ ಯಾವ ಪ್ರಧಾನಿಯೂ ನಡೆದುಕೊಂಡ ಪ್ರಧಾನಿಯನ್ನು ನಾನು ನೋಡೆ ಇಲ್ಲ ಎಂದು ಹೇಳಿದ್ದಾರೆ.

ಮೋದಿ ತಮ್ಮ ಕೀಳುಮಟ್ಟದ ಭಾಷಣ ಮಾಡುತ್ತಾರೆ. ಅವರ ಭಾಷೆ ನೋಡಿದರೆ ಅವರು ಯೋಗ್ಯರಲ್ಲ. ಈ ಮನುಷ್ಯ ಮಾಡಬಾರದನ್ನು ಮಾಡಿದ್ದಾರೆ,

ನಾನು ಒಮ್ಮೆ ಮೋದಿಯ ಬಳಿ ನಮ್ಮ ರೈತರು ಕಷ್ಟದಲ್ಲಿದ್ದಾರೆ ಏನಾದ್ರು ಕೊಡಪ್ಪ ಅಂದ್ರೆ ಆ ಮನುಷ್ಯ ಏನನ್ನೂ ಕೊಡಲಿಲ್ಲ ಈ ಮನುಷ್ಯನಿಗೆ ಕಿಂಚಿತ್ತಾದ್ರೂ ಕರುಣೆ ಇದ್ದಿದ್ರೆ ರೈತರ ಬಗ್ಗೆ ಯೋಚನೆ ಮಾಡ್ತಿದ್ರು ಅಂತಾ ಕಿಡಿಕಾರಿದ ದೇವೇಗೌಡ

ಈ ದೇಶ ಉಳಿಸಬೇಕೆಂದು ನಾನೂ-ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ 20 ವರ್ಷಗಳ ನಂತರ ಭಾಷಣ ಮಾಡಿದ್ದೇವೆ ಇದರಲ್ಲಿ ಯಾವುದೇ ವೈಯಕ್ತಿಕ ಲಾಭವಿಲ್ಲ ಎಂದು ಮಧು ಬಂಗಾರಪ್ಪ ಪರ ಶಿವಮೊಗ್ಗದಲ್ಲಿ ಪ್ರಚಾರ ಮಾಡುವ ಸಮಯದಲ್ಲಿ ಹೇಳಿದ್ದಾರೆ.

Share This Article
Leave a Comment