ಕಸದ ಸಮಸ್ಯೆಗೆ ಅಂತ್ಯ ಹಾಡಲು ಪಣ ತೊಟ್ಟಿರೋ ಇಂಥಾ ಸಂಸ್ಥೆ ಮತ್ತೊಂದಿಲ್ಲ!

Date:

ಕಸದ ಸಮಸ್ಯೆಗೆ ಅಂತ್ಯ ಹಾಡಲು ಪಣ ತೊಟ್ಟಿರೋ ಇಂಥಾ ಸಂಸ್ಥೆ ಮತ್ತೊಂದಿಲ್ಲ!

ಭಾರತದಲ್ಲಿ ದಿನೇ ದಿನೇ ಜೆಟ್ ವೇಗದಲ್ಲಿ ಜನಸಂಖ್ಯೆ ಹೆಚ್ಚುತ್ತಲೇ ಇದೆ.. ಜನಸಂಖ್ಯೆಯ ದುಪ್ಪಟ್ಟು ಕಸ ಹೆಚ್ಚಾಗುತ್ತಿದೆ. ತನ್ನ ಸೌಂದರ್ಯ, ವಿಶೇಷತೆಗಳಿಂದ ನಾನಾ ಹೆಸರುಗಳಿಂದ ಕರೆಸಿಕೊಳ್ಳುತ್ತಿದ್ದ ಭಾರತದ ಕೆಲವು ನಗರಗಳು ಇದೀಗ ಗಾರ್ಬೇಜ್ ಸಿಟಿ ಎಂದು ಖ್ಯಾತಿ ಪಡೆದುಕೊಳ್ಳುತ್ತಿವೆ..
ಇಡೀ ಭಾರತವೇ ಕಸದ ಸಮಸ್ಯೆಯಿಂದ ಕಂಗೆಟ್ಟು ಕೂತಿದೆ.. ಆದ್ರೆ ಈ ಕಸದ ಸಮಸ್ಯೆಗೆ ಶಾಶ್ವತವಾಗಿ ಮುಕ್ತಿ ನೀಡಲು ಒಂದು ಸಂಸ್ಥೆ ಶ್ರಮಿಸುತ್ತಿದೆ. ಹೌದು.. ಬನ್ಯನ್ ಯಾರ ಹಂಗು ಇಲ್ಲದೆ, ಯಾವುದೇ ಸುದ್ದಿ ಇಲ್ಲದೆ ಕಸದ ಸಮಸ್ಯೆಗೆ ಮುಕ್ತಿ ನೀಡುವ ಪ್ರಯತ್ನ ಮಾಡುತ್ತಿದೆ.
ಹೈಟೆಕ್ ಟೆಕ್ನಾಲಜಿಯನ್ನು ಬಳಿಸಿಕೊಂಡು, ಕಸದ ಮರುಬಳಕೆಯ ವೈಜ್ಞಾನಿಕ ರೀತಿಯನ್ನು ತಿಳಿಸಿಕೊಡುವ ಕೆಲಸ ಮಾಡುತ್ತಿದೆ. ಕಸದಿಂದ ರಸ ತೆಗೆಯುವ ಪ್ರಯತ್ನದಲ್ಲಿ ಆಗೋ ಲಾಭ ಮತ್ತು ಸದ್ಭಳಕೆಯ ಬಗ್ಗೆ ಬನ್ಯನ್ ಸಂಸ್ಥೆ ಸರಳವಾಗಿ ತಿಳಿಸಿಕೊಡುತ್ತಿದೆ. ಈ ಸಂಸ್ಥೆಯ ಸಹಸಂಸ್ಥಾಪಕ ಮತ್ತು ಕಸ ಮುಕ್ತ ಭಾರತ ಕನಸಿನ ರುವಾರಿಯೇ ಮಣಿ ವಾಜಿಪೇಯಿ.
ಮಣಿ ವಾಜಿಪೇಯಿಯವರು ಒಮ್ಮೆ ಭಾರತದ ಪ್ರವಾಸದಲ್ಲಿದ್ದಾಗ ಪ್ರವಾಸದ ಅನುಭವಕ್ಕಿಂತ ಹೆಚ್ಚಾಗಿ ಕಸದಿಂದಾಗಿ ಹುಟ್ಟಿಕೊಂಡ ಬೇಜಾರೇ ಹೆಚ್ಚಾಗಿ ಕಾಣುತ್ತಿತ್ತು. ಇದನ್ನೆಲ್ಲಾ ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡ ಮಣಿಯವರು ವೈಜ್ಞಾನಿಕವಾಗಿ ಕಸದ ಮರು ಬಳಕೆ ಮಾಡುಲು ಇಲ್ಲಿ ಅವಕಾಶವಿದೆ ಅನ್ನೋದನ್ನ ಅರಿತುಕೊಂಡರು.

ಕಸ ನಿವಾರಣೆಗೆ ಎಲ್ಲಿಂದಲೋ ಕೆಲಸ ಆರಂಭಿಸುವ ಬದಲು ಸಮಸ್ಯೆ ಎಲ್ಲಿ ಹುಟ್ಟಿಕೊಂಡಿತೋ ಅಲ್ಲಿಂದಲೇ ಕೆಲಸ ಆರಂಭಿಸಬೇಕು ಅಂತ ನಿರ್ಧಾರ ಮಾಡಿಬಿಟ್ರು. ಆರಂಭದಲ್ಲಿ ಇವರೊಬ್ಬರೇ ಕೆಲಸ ಮಾಡಲು ಆರಂಭಿಸಿದ್ರು. ಮಣಿಯ ಈ ಕೆಲಸಕ್ಕೆ 6 ತಿಂಗಳ ನಂತರ ರಾಜ್ ಮದನ್ಗೋಪಾಲ್ ಅನ್ನೋ ಟೆಕ್ಕಿಯ ಸಹಾಯವೂ ಸಿಕ್ಕಿತ್ತು. ಮದನ್ ಗೋಪಾಲ್ ಭಾರತದಲ್ಲಿದ್ದ ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುವ ಪ್ಲಾನ್ಗಳ ಮೇಲೆ ಕೆಲಸ ಮಾಡುತ್ತಿದ್ದರು.
2013ರ ಜುಲೈನಲ್ಲಿ ಮಣಿ ಮತ್ತು ರಾಜ್ ಮದನ್ಗೋಪಾಲ್ ತಮ್ಮ ಕೆಲಸಗಳಿಗೆ ರಾಜಿನಾಮೆ ನೀಡಿ ಭಾರತದಲ್ಲಿ ಬನ್ಯನ್ ಅನ್ನೋ ವೈಜ್ಞಾನಿಕ ವೇಸ್ಟ್ ಮ್ಯಾನೆಜ್ಮೆಂಟ್ ಯೂನಿಟ್ ಅನ್ನು ಹುಟ್ಟಿಹಾಕಿದ್ರು. ಭಾರತದಲ್ಲಿ ಕಸ ತೆಗೆಯಲು ಬರೋ ಟೆಂಡರ್ಗಳ ಬಗ್ಗೆ ಮೊದಲು ಅರಿತುಕೊಂಡ್ರು. ಆನಂತ್ರ ಫ್ರಾನ್ಸಿಸ್ಕೋದ ಬಯೋಗ್ಯಾಸ್ ಎನರ್ಜಿ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡು ರೂರ್ಕೆಲಾದ ಸ್ಟೀಲ್ ಪ್ಲಾಂಟ್ನ ಟೆಂಡರ್ ಪಡೆದುಕೊಂಡ್ರು. ಇಲ್ಲಿಂದ ಆರಂಭವಾಯಿತು ಮಣಿ ಮತ್ತು ರಾಜ್ರ ಬನ್ಯನ್ ಸಂಸ್ಥೆಯ ಯಾತ್ರೆ.
ಬನ್ಯನ್ ಸಂಸ್ಥೆ ಸರ್ಕಾರದ ನೆರವಿಲ್ಲದೆ, ಸ್ಥಳೀಯ ಆಡಳಿತ ಸಂಸ್ಥೆಗಳನ್ನು ದೂರವಿಟ್ಟು ಕೆಲಸ ಶುರುಮಾಡಿತು. ಮಾಡಲು ಆರಂಭಿಸಿತ್ತು. ಆದಾಯದ ಮೂಲವೂ ಬನ್ಯನ್ಗೆ ಸಿಕ್ಕಿತ್ತು. ಭಾರತದಲ್ಲಿ ವರ್ಷವೊಂದಕ್ಕೆ 6.7 ಮಿಲಿಯನ್ ಟನ್ ಪುನರ್ ಬಳಕೆ ಮಾಡಬಲ್ಲ ಕಸದ ವಿಲೇವಾರಿ ನಡೆಯುತ್ತಿದೆ. ಇದರಿಂದ ಬರುವ ಅಂದಾಜು ಮೊತ್ತವೇ 19000 ಕೋಟಿ ರೂಪಾಯಿ ಅಂದ್ರೆ ನಿಜಕ್ಕೂ ನಂಬಲೇ ಬೇಕು.
ಕಸದ ಪುನರ್ ಬಳಕೆ ಸುಲಭವಾಗಿಲ್ಲ ಅನ್ನೋದನ್ನ ತಿಳಿದ ಮೇಲೂ ಬನ್ಯನ್ ಇದೇ ವಿಷಯದಲ್ಲಿ ಸಾಕಷ್ಟು ಬೆಳೆದು ನಿಂತಿದೆ. ಬನ್ಯನ್ ಆಂಡ್ರಾಯ್ಡ್ ಮತ್ತು ಇತರೆ ಅನೌಪಚಾರಿಕ ಫ್ಲಾಟ್ ಫಾರ್ಮ್ ಮೂಲಕ ಆ್ಯಪ್ನ್ನು ಕೂಡ ಡೆವಲಪ್ ಮಾಡಿದೆ. ಎಸ್ಎಂಎಸ್ ಮೂಲಕವೂ ಕಾರ್ಯಾಚರಣೆ ಮಾಡುತ್ತಿದೆ.

ಸದ್ಯ ಬನ್ಯನ್ ಸಂಸ್ಥೆ ಚಿಕ್ಕ ಮಟ್ಟದಲ್ಲಿ ಕಾರ್ಯಾರಂಭಿಸಿದೆ. ಮುಂದಿನ ದಿನಗಳಲ್ಲಿ ಸುಮಾರು 15000 ಕ್ಕೂ ಅಧಿಕ ಅರೆಕಾಲೀಕ ಕೆಲಸಗಾರರನ್ನು ನೇಮಿಸಿಕೊಳ್ಳುವ ಯೋಜನೆಯಲ್ಲಿದೆ. ಒಟ್ಟಿನಲ್ಲಿ ಕೈ ತುಂಬಾ ಬರೋ ಸಂಬಳದ ಲೆಕ್ಕವನ್ನು ಬದಿಗಿಟ್ಟು ಸಮಾಜಕ್ಕೆ ಉಪಯೋಗವಾಗುವ ಮತ್ತು ಲಾಭದಾಯಕ ಉದ್ಯೋಗವನ್ನು ಸೃಷ್ಟಿಸಿದ ಮಣಿ ಮತ್ತು ರಾಜ್ಗೆ ನಮ್ಮದೊಂದು ಸಲಾಂ.

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...