ಕಾಂಗ್ರೆಸ್ ದುರಾಡಳಿತ ಮಿತಿ ಮೀರಿದೆ: ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

Date:

ಕಾಂಗ್ರೆಸ್ ದುರಾಡಳಿತ ಮಿತಿ ಮೀರಿದೆ: ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ದುರಾಡಳಿತ ಮಿತಿ ಮೀರಿದೆ ಎಂದು ವಿಧಾನಪರಿಷತ್‌ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್ ಎಂದರೆ ಕಮಿಷನ್, ಕರಪ್ಶನ್, ಲೂಟಿ, ದುಂಡಾವರ್ತಿ ಎಂದು ನಾವು ಹಿಂದೆಯೂ ಹೇಳುತ್ತಿದ್ದೆವು. ಈಗ ಕಾಂಗ್ರೆಸ್ ಮಾನವೀಯ ಮೌಲ್ಯಗಳನ್ನೇ ಗಾಳಿಗೆ ತೂರಿ, ಅಧಿಕಾರವೊಂದಿದ್ದರೆ ಸಾಕು; ಏನು ಬೇಕಾದರೂ ಮಾಡಬಹುದು, ಹೇಗೆ ಬೇಕಾದರೂ ವರ್ತಿಸಬಹುದು ಎಂಬ ದುರ್ನಡತೆಯನ್ನು ಅಳವಡಿಸಿಕೊಂಡಂತೆ ಕಾಣುತ್ತಿದೆ” ಎಂದು ಟೀಕಿಸಿದರು.

ಹೊರದೇಶದಿಂದ ಪ್ರವಾಸಕ್ಕಾಗಿ ಬಂದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆ ಕೇವಲ ರಾಷ್ಟ್ರೀಯ ವಿಷಯವಲ್ಲ, ಅದು ಅಂತರರಾಷ್ಟ್ರೀಯ ಮಟ್ಟದ ಗಂಭೀರ ಪ್ರಕರಣ ಎಂದು ಅವರು ಹೇಳಿದರು. “ಇಂತಹ ಭೀಕರ ಘಟನೆಯನ್ನು ಗೌರವಾನ್ವಿತ ಸಂಸದ ರಾಜಶೇಖರ ಹಿಟ್ನಾಳ್ ಅವರು ಸಣ್ಣ (ಮೈನರ್) ಘಟನೆಯಂತೆ ಮಾತನಾಡಿದ್ದಾರೆ. ಇದರಿಂದಲೇ ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಯಾವ ಮಟ್ಟದಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ” ಎಂದು ನಾರಾಯಣಸ್ವಾಮಿ ಪ್ರಶ್ನಿಸಿದರು.

“ಮಹಿಳೆಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸಣ್ಣ ವಿಷಯವೆಂದು ಯಾರೂ ಭಾವಿಸಬಾರದು. ಇಂತಹ ನೀಚ ಹೇಳಿಕೆಗಳು ಕಾಂಗ್ರೆಸ್ ನಾಯಕರ ಮನಸ್ಥಿತಿಯನ್ನು ತೋರಿಸುತ್ತವೆ. ಈ ನೀಚತನಕ್ಕೆ ಜನರು ತಕ್ಕ ಉತ್ತರ ನೀಡಬೇಕಿದೆ; ಬುದ್ಧಿ ಕಲಿಸುವ ಕೆಲಸ ಆಗಲೇಬೇಕು” ಎಂದು ಅವರು ಕಿಡಿಕಾರಿದರು.

Share post:

Subscribe

spot_imgspot_img

Popular

More like this
Related

ಗುಡ್‌ ನ್ಯೂಸ್ ಹಂಚಿಕೊಂಡ ಡಾಲಿ ಧನಂಜಯ್‌..! ಮೊದಲ ಮಗುವಿನ ನಿರೀಕ್ಷೆಯಲ್ಲಿ ದಂಪತಿ

ಗುಡ್‌ ನ್ಯೂಸ್ ಹಂಚಿಕೊಂಡ ಡಾಲಿ ಧನಂಜಯ್‌..! ಮೊದಲ ಮಗುವಿನ ನಿರೀಕ್ಷೆಯಲ್ಲಿ ದಂಪತಿ ಮೈಸೂರಿನ...

ಲಷ್ಕರ್-ಇ-ತೊಯ್ಬಾ ಸೇರಿಸಲು ಯತ್ನಿಸಿದ ಆರೋಪಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ

ಲಷ್ಕರ್-ಇ-ತೊಯ್ಬಾ ಸೇರಿಸಲು ಯತ್ನಿಸಿದ ಆರೋಪಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಉತ್ತರ...

ಹಳೆಯ ಬಟ್ಟೆಗಳಿಂದ ಮನೆ ಒರೆಸುವುದು ಅಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?

ಹಳೆಯ ಬಟ್ಟೆಗಳಿಂದ ಮನೆ ಒರೆಸುವುದು ಅಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು? ಮನೆ ಸ್ವಚ್ಛತೆಗೆ...

ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ತೀವ್ರ ಚಳಿ: ಮಂಜು ಕವಿದ ವಾತಾವರಣ

ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ತೀವ್ರ ಚಳಿ: ಮಂಜು ಕವಿದ ವಾತಾವರಣ ಬೆಂಗಳೂರು: ರಾಜ್ಯದಲ್ಲಿ...