ರಾಯಚೂರು: ನಮ್ಮಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ ಎಂದು ಎನ್ ಎಸ್ ಬೋಸರಾಜ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ನಲ್ಲಾಗಲಿ, ಕಾಂಗ್ರೆಸ್ ನಾಯಕರಲ್ಲಾಗಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ ಎಂದರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಶಾಸಕ ಬಿ.ಕೆ.ಹರಿಪ್ರಸಾದ್ ಅಸಮಾಧಾನಗೊಂಡಿಲ್ಲ. ಅವರ ಸಮಾಜದ ಕಾರ್ಯಕ್ರಮಕ್ಕೆ ಸಿಎಂ, ಸಚಿವರು ಹಾಗೂ ಶಾಸಕರನ್ನು ಕರೆಯಲಾಗಿದೆ. ಸಮಾರಂಭಕ್ಕೆ ಹೋಗುವುದಿಲ್ಲವೆಂದು ಹರಿಪ್ರಸಾದ್ ನುಡಿದಿರುವುದು ಅವರ ವೈಯಕ್ತಿಕ ವಿಚಾರವಾಗಿದೆ. ಅದನ್ನು ಪಕ್ಷಕ್ಕೆ ತಳಕು ಹಾಕುವ ಅಗತ್ಯವಿಲ್ಲ ಎಂದರು.
ಕಾಂಗ್ರೆಸ್ ನಾಯಕರಲ್ಲಿ ಭಿನ್ನಾಭಿಪ್ರಾಯಗಳಿಲ್ಲ: ಎನ್ ಎಸ್ ಬೋಸರಾಜ
Date: