ಶಿವಮೊಗ್ಗ : ಕಾಂಗ್ರೆಸ್ ನಿಂದ ಟ್ವಿಟರ್ ಪೋಸ್ಟ್ ವಿಚಾರವಾಗಿ ನಗರದಲ್ಲಿ ಕೆ ಎಸ್ ಈಶ್ವರಪ್ಪ ಪ್ರತಿಕ್ರಿಯೆ ನೀಡಿದರು.. ಸಂತೋಷ್ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ ಅಂತ ಬಂದಿದೆ. ಕೋರ್ಟ್ ಬಗ್ಗೆ ಇವರಿಗೆ ಗೌರವ ಇಲ್ಲ. ನನ್ನ ಬಳಿ ಬರಲಿ ನಾನು ತೋರಿಸುತ್ತೇನೆ. ಕೋರ್ಟ್ ಆದೇಶವನ್ನೇ ಮೀರಿ ಸಿಎಂ ಸಿದ್ದರಾಮಯ್ಯ ಹಿಜಾಬ್ ಬಗ್ಗೆ ಮಾತನಾಡಿದರು ಎಂದು ತಿರುಗೇಟು ನೀಡಿದರು. ಅದಲ್ಲದೆ ಕಾಂಗ್ರೆಸ್ ಕಾರ್ಯಕರ್ತರು ಮುಗ್ದರು. ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕುಟುಕಿದರು.
ಕಾಂಗ್ರೆಸ್ ನಿಂದ ಟ್ವಿಟರ್ ಪೋಸ್ಟ್ ವಿಚಾರ: ಕೆ. ಎಸ್ ಈಶ್ವರಪ್ಪ ಹೇಳಿದ್ದೇನು
Date: