ಕಾಂಗ್ರೆಸ್ನ ಕೆಲ ಅಯೋಗ್ಯರು ದೇಶವಿರೋಧಿ ಹೇಳಿಕೆ ಕೊಡುತಿದ್ದಾರೆ: ಬಿವೈ ವಿಜಯೇಂದ್ರ
ತುಮಕೂರು: ಕಾಂಗ್ರೆಸ್ನ ಕೆಲ ಅಯೋಗ್ಯರು ದೇಶವಿರೋಧಿ ಹೇಳಿಕೆ ಕೊಡುತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ತುಮಕೂರಿನಲ್ಲಿ ಆಪರೇಷನ್ ಸಿಂಧೂರ್ ಯಶಸ್ವಿ ಹಿನ್ನೆಲೆ ನಡೆಸುತ್ತಿರುವ ಬೃಹತ್ ತಿರಂಗಾಯಾತ್ರೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಧುರೀಣರಿಗೆ ಪಾಕಿಸ್ತಾನದ ಮೇಲೆ ಪ್ರೀತಿ ಎಷ್ಟಿದೆ ಎಂದು ಹಲವು ಬಾರಿ ಸಾಬೀತಾಗಿದೆ.
ಸಿಎಂ ಸಿದ್ದರಾಮಯ್ಯ ಯುದ್ಧ ಬೇಡ ಶಾಂತಿ ಬೇಕು ಎಂದಿದ್ದರು. ಹಾಗಾಗಿ ದೇಶದ್ರೋಹಿಗಳನ್ನು ಕಾಂಗ್ರೆಸ್ ಪಕ್ಷದವರು ಬೆಂಬಲ ಕೊಡುವುದು ಮಹಾಪರಾಧ. ಪಾಕಿಸ್ತಾನ ಶತ್ರು ಅಥವಾ ಮಿತ್ರ ರಾಷ್ಟ್ರ ಎನ್ನುವುದಕ್ಕಿಂತ ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ಕೊಡುವುದನ್ನು ನಿಲ್ಲಿಸಬೇಕು.
ಕೊತ್ತೂರು ಮಂಜುನಾಥ್ ಹೇಳಿಕೆಯಿಂದಾಗಿ ಯೋಧರಿಗೆ ಅಪಮಾನವಾಗಿದೆ. ಇಂಥಹ ಸಂದರ್ಭದಲ್ಲಿ ದೇಶದ ಪರ ನಿಲ್ಲಬೇಕು ಹೊರತು ದೇಶ ವಿರೋಧಿ ಹೇಳಿಕೆ ಕೊಡಬಾರದು. ಆದರೆ ಕಾಂಗ್ರೆಸ್ನ ಕೆಲ ಅಯೋಗ್ಯರು ದೇಶವಿರೋಧಿ ಹೇಳಿಕೆ ಕೊಡುತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಅಂಥವರ ಮೇಲೆ ನಿಗಾ ಇಡಬೇಕು ಎಂದು ತಿಳಿಸಿದರು.