ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು: ನಿಖಿಲ್ ಕುಮಾರಸ್ವಾಮಿ

Date:

ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು: ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಉಪಮುಖ್ಯಮಂತ್ರಿಗಳೇ ಕಸ ಗುಡಿಸುವ ಯಂತ್ರಗಳ ಬಗ್ಗೆ ನಾನು ಒಬ್ಬ ಸಾಮಾನ್ಯ ಪ್ರಜೆಯಾಗಿ ಪ್ರಶ್ನೆ ಮಾಡಿದ್ದೇನೆ.ನಿಮಗೆ ಪ್ರಶ್ನೆ ಮಾಡಿದ್ದಲ್ಲ,ನೀವು ಕುಳಿತಿರುವ ಹುದ್ದೆ ಬೆಂಗಳೂರು ಉಸ್ತುವಾರಿಯವರಿಗೆ ಕೇಳಿದ್ದು ಎಂದು ಡಿ.ಕೆ ಶಿವಕುಮಾರ್ ಹೇಳಿಕೆ ಟಾಂಗ್ ನೀಡಿದರು.
ಹುಬ್ಬಳ್ಳಿ ಧಾರವಾಡದಲ್ಲಿ ಇದೇ ಸರ್ಕಾರ ಕಸ ಗುಡಿಸುವ ಮಷಿನ್ ನನ್ನ, 01 ಕೋಟಿ 45 ಲಕ್ಷಕ್ಕೆ 2 ಮಷಿನ್ ಖರೀದಿ ಮಾಡಿದ್ರು, ಯಾಕೆ ಬೇಕಾ ಬಿಟ್ಟಯಾಗಿ 613 ಕೋಟಿ ರೂ ವೆಚ್ಚ ವನ್ನ ಖರ್ಚು ಮಾಡಿ ಬಾಡಿಗೆ ತಗೋತೀರಾ.? ಸ್ವಂತಕ್ಕೆ ಖರೀದಿ ಮಾಡಬಹುದೆಂದು ವರದಿ ನೀಡಿದೆ. ಇದಕ್ಕೆ ಉತ್ತರ ಕೊಡಿ ಲೋಕಯುಕ್ತಗೆ ಯಾಕೆ ಹೋಗ್ಬೇಕು.? ನಿಮಗೆ ಪರಿಜ್ಞಾನ ಇಲ್ವಾ.? ಎಂದು ಡಿಕೆ ಶಿವಕುಮಾರ್ ವಿರುದ್ಧ ನಿಖಿಲ್ ಅವರು ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ 2028 ಚುನಾವಣೆ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷವಾಗಿ ಉಳಿಯೋದಿಲ್ಲ. ಬಿಹಾರದ ಚುನಾವಣೆಯಲ್ಲಿ NDA ಮೈತ್ರಿಯನ್ನ ಒಪ್ಪಿಕೊಂಡಿದ್ದಾರೆ. ಇದು ಕಾಂಗ್ರೆಸ್ ಪತನದ ದಿನಗಳು ಅಂತ ಜನರು ಸಂದೇಶ ಕೊಟ್ಟಿದ್ದಾರೆ. ಈ‌ ಸಂದೇಶ ಕಾಂಗ್ರೆಸ್ ನಾಯಕರಿಗೆ ‌ನಿದ್ದೆಗೆಡಿಸಿದೆ ಎಂದು ಹೇಳಿದರು.
JDS ಪಕ್ಷದ ಬಗ್ಗೆ ವಿಧಾನಸಭೆಯಲ್ಲಿ ಕಾಂಗ್ರೆಸ್ ನಾಯಕರು ಮಾತಾಡಿದ್ರು. 18 ಇದೆ ಒಂದಂಕಿಗೆ ಬಂದು ಜೆಡಿಎಸ್ ನಿಲ್ಲುತ್ತದೆ ಎಂದು ಲೇವಡಿ ಮಾಡಿದ್ರು. ಈಗ ಒಂದಂಕಿಗೆ ಕಾಂಗ್ರೆಸ್ ಬಂದು ನಿಂತಿದೆ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷದ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು. ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷವಾಗಿ ಉಳಿಯೋದಿಲ್ಲ.
ಈಗಲಾದರೂ ಕಾಂಗ್ರೆಸ್‌ನವರು ಎಚ್ಚೆತ್ತುಕೊಳ್ಳಬೇಕು. ಇನ್ನೊಂದು ಪಕ್ಷವನ್ನು ಲಘುವಾಗಿ ತಗೊಳ್ಳೋದು, ಅವಹೇಳನ ಮಾಡೋದು ಬಿಡಬೇಕು. ಜನತೆ ಅಧಿಕಾರ ಕೊಟ್ಟಾಗ ಕಾಂಗ್ರೆಸ್ ಅವರು ತಗ್ಗಿ ಬಗ್ಗಿ ಅಧಿಕಾರ ನಡೆಸಬೇಕು ಅಂತ ಪರೋಕ್ಷವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

Share post:

Subscribe

spot_imgspot_img

Popular

More like this
Related

ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮನದಾಳದ ಮಾತು…

ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮನದಾಳದ ಮಾತು…. ಬೆಂಗಳೂರು: ಅರವಿಂದ ವೆಂಕಟೇಶ ರೆಡ್ಡಿ...

10ನೇ ಬಾರಿಗೆ ಬಿಹಾರ CM ಆಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕಾರ!

10ನೇ ಬಾರಿಗೆ ಬಿಹಾರ CM ಆಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕಾರ! ಬಿಹಾರ:...

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಟಿಪ್ಸ್‌ ಫಾಲೋ ಮಾಡಿ..!

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಟಿಪ್ಸ್‌ ಫಾಲೋ ಮಾಡಿ..! ಚಳಿಗಾಲ (Winter)...

ಉತ್ತರ ಒಳನಾಡಿನ ಹಲವೆಡೆ ಗುಡುಗು-ಮಿಂಚಿನೊಂದಿಗೆ ಮಳೆ: ಹವಾಮಾನ ಇಲಾಖೆ

ಉತ್ತರ ಒಳನಾಡಿನ ಹಲವೆಡೆ ಗುಡುಗು-ಮಿಂಚಿನೊಂದಿಗೆ ಮಳೆ: ಹವಾಮಾನ ಇಲಾಖೆ ಬೆಂಗಳೂರು: ರಾಜ್ಯದ ಹೆಚ್ಚಿನ...