ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿಂದಲೂ ಗಲಭೆ ಪ್ರಕರಣಗಳು ಹೆಚ್ಚಾಗಿವೆ: ಮಾಜಿ ಸಂಸದ ಮುನಿಸ್ವಾಮಿ
ಕೋಲಾರ: ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿಂದಲೂ ಗಲಭೆ ಪ್ರಕರಣಗಳು ಹೆಚ್ಚಾಗಿವೆ ಎಂದು ಮಾಜಿ ಸಂಸದ ಮುನಿಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿಂದಲೂ ಗಲಭೆ ಪ್ರಕರಣಗಳು ಹೆಚ್ಚಾಗಿವೆ.
ಮೈಸೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ತಪ್ಪಿತಸ್ಥರನ್ನು ನಮಗೆ ಒಪ್ಪಿಸಿ ಶಿಕ್ಷೆ ನೀಡುತ್ತೇವೆ ಎಂದು ಹೇಳುತ್ತಾನೆ. ರಾಜ್ಯದಲ್ಲಿ ಏನಾದರೂ ಶರಿಯಾ ಕಾನೂನು ಇದೆಯಾ? ಆ ರೀತಿ ಮಾಡುವುದಾದರೆ ಪಾಕಿಸ್ತಾನಕ್ಕೆ ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಅವಧಿಯಲ್ಲಿ ಅಭಿವೃದ್ಧಿ, ರೈಲ್ವೇ ಸೇತುವೆಗಳ ನಿರ್ಮಾಣ ಮಾಡಿದ್ದೇವೆ. ಅಂತರಾಜ್ಯ ಸಂಪರ್ಕಕ್ಕೆ ಆದ್ಯತೆ ನೀಡಿದ್ದೇವೆ. ಬೆಂಗಳೂರು ಚೆನ್ನೈ ಎಕ್ಸ್ ಪ್ರೆಸ್ ಹೈವೇ ನಮ್ಮಭಾಗದಲ್ಲಿ ಪೂರ್ಣಗೊಳಿಸಲಾಗಿದೆ. ಕೋವಿಡ್ ಸಮಯದಲ್ಲೂ ಅಭಿವೃದ್ಧಿ ಮಾಡಲಾಗಿದೆ. ಕೆಆರ್‌ಪುರಂನಿಂದ ನಂಗಲಿವರೆಗೆ 6 ಪಥದ ರಸ್ತೆ, ಪ್ರತಿ ಹಳ್ಳಿ ಬಳಿಯೂ ಸುರಕ್ಷತೆ ಕ್ರಮವಹಿಸಿದ್ದೇವೆ ಎಂದರು.