ಅವರು ಡಾ.ಪ್ರಕಾಶ್ ಮತ್ತು ಮಂದಾಕಿನಿ ಆಮ್ಟೆ ದಂಪತಿ. ಇವರ ಮಕ್ಕಳು ಕಾಡು ಪ್ರಾಣಿಗಳು…! ನೋಡಲು ಹಳ್ಳಿ ಜನರ ರೀತಿ ಕಂಡರೂ, ಪ್ರಕಾಶ್ ವೃತ್ತಿಯಲ್ಲಿ ವೈದ್ಯರು. 45 ವರ್ಷದಿಂದ ಕಾಡುಪ್ರಾಣಿಗಳಿಗೆ ಹೇಮಲ್-ಕಾಸದ ೫೦ ಎಕರೆ ಜಮೀನು ವಾಸಸ್ಥಾನ..!
ಕಾಡು ಪ್ರಾಣಿಗಳಿಗೆ ಆಹಾರ, ನೀರು ಸೇರಿದಂತೆ ಪಾಲನೆ ಪೋಷಣೆ ಎಲ್ಲವನ್ನು ಆಮ್ಟೆ ಪರಿವಾರವೇ ನೋಡಿಕೊಳ್ಳುತ್ತದೆ. ಕಾಡು ಪ್ರಾಣಿಗಳೆಂದರೆ ಸಾಮಾನ್ಯವಾಗಿ ಜಿಂಕೆ, ಕೋತಿ, ಎಮ್ಮೆ, ನವಿಲು ಅಥವಾ ಹಸುಗಳಂತಹ ಸಾಧು ಪ್ರಾಣಿಗಳೆಂದು ಅಂದುಕೊಂಡಿದ್ರೆ ಹಾಗಾದ್ರೆ ನಿಮ್ಮ ಊಹೆ ತಪ್ಪು, ಇಲ್ಲಿ ಇರುವ ಕಾಡು ಪ್ರಾಣಿಗಳನ್ನು ನೋಡಿದರೆ ನಿಮಗೆ ಒಂದು ಕ್ಷಣ ಅಚ್ಚರಿ ಆಗೋದಂತು ಖಚಿತ.
ಇವರು ಕೇವಲ ಸಾಧು ಪ್ರಾಣಿಗಳಾದ ಜಿಂಕೆ, ಸಾರಂಗ, ನವಿಲುಗಳನ್ನು ಮಾತ್ರ ಸಾಕಿಲ್ಲ, ಕರಡಿ, ಕತ್ತೆ ಕಿರುಬ, ಮೊಸುಳೆ, ಚಿರತೆ, ಮುಳ್ಳು ಹಂದಿ, ಉಡಾ ಮತ್ತು ಎಲ್ಲಾ ರೀತಿಯ ಹಾವುಗಳನ್ನು ಸಾಕಿದ್ದಾರೆ. ಕೆಲವು ಅಧ್ಯಯನದ ಪ್ರಕಾರ ಕತ್ತೆಕಿರುಬ ಅಥವಾ ಹೈನಾ, ಮಕ್ಕಳನ್ನು ಎತ್ತಿಕೊಂಡು ಹೋಗುತ್ತವೆ, ಆದರೆ ಈ ಆಮ್ಟೆ ಪ್ರಾಣಿ ಆರ್ಕ್ ನಲ್ಲಿ ಡಾ.ಪ್ರಕಾಶ್ ರವರ ಮೊಮ್ಮಗ ಆರವ್ ಮತ್ತು ೬ ತಿಂಗಳ ಮೊಮ್ಮಗಳು ಅದರ ಜೊತೆ ಆಟವಾಡುತ್ತಾರೆ.
ಅಷ್ಟೇ ಅಲ್ಲ, ಪ್ರಕಾಶ್ ಅವರು ಸಹ ಚಿರತೆ, ಹೈನಾ, ಕರಡಿಗಳ ಜೊತೆ ಆಟವಾಡುತ್ತಿರುತ್ತಾರೆ. ಪ್ರಾಣಿಗಳು ಸಹ ಇವರನ್ನು ತಮ್ಮ ಕುಟುಂಬ ಸದಸ್ಯರ ಹಾಗೆ ಪ್ರೀತಿಸುತ್ತವೆ. ಡಾ.ಪ್ರಕಾಶ್ ರವರ ಈ ಆಮ್ಟೆ ಪ್ರಾಣಿ ಆರ್ಕ್-ನ ಇನ್ನೊಂದು ವಿಶೇಷವೇನೆಂದರೆ ಇವರಾಗಲಿ ಇವರ ಪತ್ನಿಯಾಗಲಿ ಯಾವುದೇ ಪ್ರಾಣಿಗಳಿಗೆ ತರಬೇತಿ ನೀಡಿಲ್ಲ, ಪ್ರಾಣಿಗಳು ಸ್ವತಃ ಇವರನ್ನು ತಮ್ಮವರೆಂದು ಭಾವಿಸುತ್ತವೆ.
ಡಾ.ಪ್ರಕಾಶ್ ಆಮ್ಟೆ, ಭಾರತ ಕಂಡ ದೊಡ್ಡ ಸಾಮಾಜಿಕ ಕಾರ್ಯಕರ್ತ. ಪದ್ಮ ವಿಭೂಷಣ, ಗಾಂಧಿ ಶಾಂತಿ ಪ್ರಶಸ್ತಿ, ರಾಮೋನ್ ಮ್ಯಾಗ್ಸೆಸ್ ಅವಾರ್ಡ್, ಟೆಂಪ್ಲೇಟೋನ್ ಪ್ರಶಸ್ತಿ ಮತ್ತು ಜಮ್ನಾಲಾಲ್ ಬಜಾಜ್ ಅವಾರ್ಡ್ ವಿಜೇತ ಬಾಬಾ ಆಮ್ಟೆ ಎಂದೇ ಹೆಸರುವಾಸಿಯಾದ ಮುರಳೀಧರ್ ದೇವಿದಾಸ್ ಆಮ್ಟೆಯವರ ಪುತ್ರ. ಬಡವರ ನೆರಳಾಗಿದ್ದ ಬಾಬಾ ಆಮ್ಟೆಯವರು ೨೦೦೮ ರ ಫೆಬ್ರವರಿಯಲ್ಲಿ ನಿಧನ ಹೊಂದಿದರು. ಆದರೆ ಅವರ ಸಮಾಜ ಸೇವೆ ಮಾತ್ರ ಅವರ ಮಗನ ರೂಪದಲ್ಲಿ ಮುಂದುವರೆದಿದೆ.
೧೯೭೩ ರ ಒಂದು ದಿನ ಹಳ್ಳಿಯವರು ಕೋತಿಗಳನ್ನು ಕಟ್ಟಿ ಹೊಯ್ಯುತ್ತಿದರು. ಇದನ್ನ ಕಂಡ ಪ್ರಕಾಶ್ ದಂಪತಿ ಅವರ ಮನ ಬದಲಾಯಿಸಿ, ಪ್ರಾಣಿಗಳನ್ನು ಉಳಿಸಿದರೆ ನಾವು ಹಳ್ಳಿಯ ಜನರಿಗೆ ಸಹಾಯ ಮಾಡುತ್ತೇವೆಂದು ಆಣೆ ಮಾಡಿದ್ರು. ಆ ಘಟನೆಯೇ ಇವರಿಗೆ ಸ್ಫೂರ್ತಿಯಾಯಿತು. ಪ್ರಕಾಶ್ ರವರು ನಾಗ್ಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪೂರ್ಣಗೊಂಡ ನಂತರ, ಬೇಟೆಯಾಡುವವರಿಂದ ರಕ್ಷಿಸಿದ ಅನಾಥ ಕಾಡು ಪ್ರಾಣಿಗಳಿಗಾಗಿ ಈ ಸೇವಾ ಕೇಂದ್ರ ಸ್ಥಾಪಿಸಿದರು.
ಇವರ ಸಾಮಾಜಿಕ ಸೇವೆಯನ್ನು ಗುರುತಿಸಿ ಸರ್ಕಾರ ೨೦೦೨ ರಲ್ಲಿ ಇವರಿಗೆ ಪದ್ಮವಿಭೂಷಣ ಹಾಗೂ ರಾಮೋನ್ ಮ್ಯಾಗ್ಗೆಸೇ ಅವಾರ್ಡ್ ನೀಡಿ ಗೌರವಿಸಿದೆ. ಸ್ವಂತ ತಂದೆ ತಾಯಿಗಳನ್ನೇ ಮನೆಯಿಂದ ಹೊರಗಟ್ಟುವ ಈ ಕಾಲದಲ್ಲಿ ಆಮ್ಟೆ ಕುಟುಂಬ, ಅನಾಥ ಕಾಡು ಪ್ರಾಣಿಗಳ ಈ ಸೇವೆ ನಿಜಕ್ಕೂ ತುಂಬಾ ಹೆಮ್ಮೆಯ ವಿಷಯ ಅಲ್ಲವೇ?