ಕಾಮನ ಬಿಲ್ಲಿನ ಹಳ್ಳಿಯನ್ನು ನೋಡಿದ್ದೀರಾ?

Date:

ಪ್ರತಿಯೊಬ್ಬರೂ ಇಷ್ಟಪಡುವ ಕಾಮನಬಿಲ್ಲಿನ ಏಳು ಬಣ್ಣಗಳಿಂದ ಕಂಗೊಳಿಸೋ ಈ ಗ್ರಾಮವನ್ನೊಮ್ಮೆ ನೋಡಿ. ಇಂಡೊನೇಷ್ಯಾದ ಈ ಸಣ್ಣ ಗ್ರಾಮ, ‘ಸೆಮರೆಂಗ್ ’. ಇಂಟರ್‌ನೆಟ್‌ನಲ್ಲಿ ಭಾರೀ ಸೆನ್ಸೇಶನ್. ಪ್ರತಿಯೊಬ್ಬರು ಈಗ ಈ ಗ್ರಾಮದ ಬಗ್ಗೆ ತಿಳಿದು ಕೊಳ್ಳಲು ಬಯಸುತ್ತಿದ್ದಾರೆ. ಪರ್ವತ ಪ್ರದೇಶಗಳಲ್ಲಿರುವ ಈ ಗ್ರಾಮ ವಿದೇಶಿ ಪ್ರವಾಸಿಗರನ್ನು ವಿಶೇಷವಾಗಿ ಆಕರ್ಷಿಸುತ್ತೆ.
ಇಲ್ಲಿನ ವೈಶಿಷ್ಟವೇ ಕಣ್ಣಿಗೆ ತಂಪು, ಮನಸ್ಸಿಗೆ ಹಿತಾನುಭವ. ಈ ಪುಟ್ಟ ಗ್ರಾಮ ‘ಸೆಮರೆಂಗ್’ನಲ್ಲಿ ಸುಮಾರು 200 ಮನೆಗಳಿವೆ. ಇಲ್ಲಿ ಎಲ್ಲವನ್ನೂ ಬೇರೆ ಬೇರೆ ಬಣ್ಣಗಳಿಂದ ಅಲಂಕೃತಗೊಳಿಸಲಾಗಿದೆ. ಆದ್ದರಿಂದ ಈ ಗ್ರಾಮವನ್ನು ರೇನ್‌ಬೊ ಅಂದ್ರೆ ಕಾಮನಬಿಲ್ಲು ಗ್ರಾಮ ಎಂದು ಕೂಡ ಕರೆಯಲಾಗುತ್ತೆ. ಈ ರಂಗು ರಂಗಿನ ಮನೆಗಳು ಚರ್ಚೆಯಲ್ಲಿವೆ.

ಇನ್ನು ಸೆಮರೆಂಗ್‌ ಗ್ರಾಮದ ವೊನೊಸಾರಿ ಸಮುದಾಯ ತಮ್ಮ ವರಮಾನ ಹೆಚ್ಚಿಸಲಿಕ್ಕಾಗಿ ಮತ್ತು ಜೀವನೋಪಾಯಕ್ಕಾಗಿ ಈ ಉಪಾಯವನ್ನು ಹುಡುಕಿದೆ ಅನ್ನೋದೆ ವಿಶೇಷ. ಈ ಗ್ರಾಮದ ಎಲ್ಲ ಮನೆಗಳ ಗೋಡೆಗಳಿಗೆಲ್ಲಾ ಬಣ್ಣ ಹಚ್ಚಲು ಬರೋಬ್ಬರಿ ಒಂದು ತಿಂಗಳು ಸಾಕಾಯಿತಂತೆ.
ಈ ಬಣ್ಣ ಬಣ್ಣದ ಊರನ್ನು ನೋಡುವುದೇ ಒಂದು ರೀತಿ ಹಬ್ಬ ! ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ಈ ಗ್ರಾಮದ ಫೋಟೊಗಳು ಎಲ್ಲೆಡೆ ವೈರಲ್ ಆಗುತ್ತಿವೆ. ದೇಶ-ವಿದೇಶಗಳ ಜನರು ಈ ಗ್ರಾಮದ ಬಗ್ಗೆ ಕುತೂಹಲ ಹೊಂದಿದ್ದಾರೆ. ಅಷ್ಟೇ ಅಲ್ಲ, ಈಗ ವಿದೇಶಿ ಪ್ರವಾಸಿಗರು ಈ ಊರಿನ ಬಣ್ಣ ಬಣ್ಣದ ಮನೆಗಳನ್ನು ನೋಡಲು ಬರುತ್ತಿದ್ದಾರೆ.
ಇಂಡೊನೇಶಿಯದ ‘ಸೆಮರೆಂಗ್ ’ ಈ ಗ್ರಾಮದ ಮನೆಗಳ ಅಲಂಕಾರಕ್ಕೆ ಸರಕಾರ ಮತ್ತು ಇತರ ಕಂಪೆನಿಗಳು ಕೂಡ ಸಹಾಯ ಮಾಡಿವೆ. ಗ್ರಾಮವನ್ನು ಬದಲಾಯಿಸಿದ್ದರ ಉದ್ದೇಶ ಜನರ ಆದಾಯವನ್ನು ಹೆಚ್ಚಿಸುವುದು. ಏಕೆಂದರೆ ಈ ರೀತಿಯ ಹೊಸ ಮನೆಗಳನ್ನು ನೋಡಲು ವಿದೇಶಿ ಪ್ರವಾಸಿಗರು ಬರುತ್ತಾರೆ. ಪ್ರವಾಸೋದ್ಯಮ ಅಭಿವೃದ್ಧಿ ಆಗುತ್ತದೆ. ಈ ಮೂಲಕ ಜನಾಕರ್ಷಣೆ ಒಳಗಾಗುತ್ತದೆ ಎಂದು.
ಈ ಗ್ರಾಮದ ಬಣ್ಣದ ಸವಿಯ ಸವಿಯಲು ಬರುವ ಟೂರಿಸ್ಟ್‌ಗಳು ಇಲ್ಲಿನ ಮನೆ, ಮಹಲ್, ರಸ್ತೆ, ಗಲ್ಲಿಗಳ ಫೋಟೊ ಸೆರೆ ಹಿಡಿದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಅದೀಗ ವೈರಲ್ ಅಗಿವೆ. ಒಟ್ಟಾರೆ, ಕಾಮನಬಿಲ್ಲಿನ ಈ ಗ್ರಾಮ ಇಡೀ ವಿಶ್ವಕ್ಕೆ ಮಾದರಿ ಅಲ್ಲವೇ?

Share post:

Subscribe

spot_imgspot_img

Popular

More like this
Related

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....

ಬ್ರಹ್ಮಚಾರಿಣಿಯ ಪೂಜಾ ವಿಧಾನ !

ನವರಾತ್ರಿಯ ಎರಡನೇ ದಿನದಲ್ಲಿ ಬ್ರಹ್ಮಚಾರಿಣಿ ದೇವಿಯನ್ನು ಆರಾಧಿಸಲಾಗುತ್ತದೆ.ಇವರು ತಪಸ್ಸು, ಧೈರ್ಯ, ಶ್ರದ್ಧೆ...

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ ಬೆಂಗಳೂರು:-...