ಕಾರಲ್ಲಿ ಓಡಾಡಲ್ಲ, ಆಟೋದಲ್ಲೇ ಓಡಾಟ – ಇವರಂಥಾ ಅಧಿಕಾರಿ ಮತ್ತೊಬ್ಬರಿಲ್ಲ..!

Date:

ಕಾರಲ್ಲಿ ಓಡಾಡಲ್ಲ, ಆಟೋದಲ್ಲೇ ಓಡಾಟ – ಇವರಂಥಾ ಅಧಿಕಾರಿ ಮತ್ತೊಬ್ಬರಿಲ್ಲ..!

ಭಾರತದಲ್ಲಿರುವ ಮೆಕ್ಸಿಕೋ ದೇಶದ ರಾಯಭಾರಿ ಮೆಲ್ಬಾ ಪ್ರಿಯಾ. ಐಷಾರಾಮಿ ಬದುಕು ನಡೆಸುವಂತಹ ಅಧಿಕಾರಿಗಳಿಗೆ ಮಾದರಿ. ಹೇಗೆ ಮಾದರಿ ಎಂದರೆ? ನವದೆಹಲಿಯಲ್ಲಿರುವ ಅವರು ತಮ್ಮ ರಾಯಭಾರ ಕಚೇರಿಗೆ ಓಡಾಡಲು ಕಾರನ್ನು ಬಳಸುವುದಿಲ್ಲ. ಬದಲಾಗಿ ಎಲ್ಲಿಗೆ ಓಡಾಡಬೇಕೆಂದರೂ ಅವರು ಆಟೋದಲ್ಲೇ ಪ್ರಯಾಣಿಸುತ್ತಾರೆ.
ಕೆಲ ವರ್ಷಗಳ ಹಿಂದಿನವರೆಗೂ ಮೆಕ್ಸಿಕೋ ಅತಿಯಾದ ವಾಯು ಮಾಲಿನ್ಯದಿಂದ ಬಳಲುತ್ತಿತ್ತು. ಆದರೆ, ಸರ್ಕಾರ ವಾಹನಗಳ ಮೇಲೆ ನಿರ್ಬಂಧ ಹೇರಿತು. ಇದರಿಂದಾಗಿ ವಾಯು ಪ್ರದೂಷಣೆಗೆ ಕೊಂಚ ಮಟ್ಟಿಗೆ ಕಡಿವಾಣ ಬಿತ್ತು. ಇದನ್ನು ಮೆಲ್ಬಾ ಪ್ರಿಯಾ ಅವರು ಚೆನ್ನಾಗಿ ಬಲ್ಲರು. ದೆಹಲಿಯಲ್ಲೂ ವಾಯುಮಾಲಿನ್ಯ ತಗ್ಗಿಸಲು ಕಾರುಗಳ ಬದಲಾಗಿ ಆಟೋ ರಿಕ್ಷಾ ಬಳಕೆಗೆ ಮುಂದಾದರು.
ಹಾಗಂತ ದೇಶವೊಂದರ ರಾಯಭಾರಿಯೊಬ್ಬರು ಹೀಗೆ ಸರ್ಕಾರ ಒದಗಿಸುವ ಐಶಾರಾಮಿ ಕಾರನ್ನು ತ್ಯಜಿಸಿ, ಆಟೋ ಏರುವುದು ಕಷ್ಟ. ಯಾಕೆಂದರೆ ಅದಕ್ಕೆ ಸರ್ಕಾರದಿಂದ ಪರ್ಮಿಶನ್ ಪಡೆಯಬೇಕು. ಜತೆಗಿದು ಅವರ ರಕ್ಷಣೆಯ ವಿಷಯವೂ ಹೌದು. ಹೀಗಾಗಿಯೇ ಮೆಕ್ಸಿಕೋದ ಹಿರಿಯ ಅಧಿಕಾರಿಗಳು ಹಾಗೂ ಭಾರತದ ಅಧಿಕಾರಿಗಳಿಂದ ಮೆಲ್ಬಾ ಆಟೋ ಏರಲು ಗ್ರೀನ್ ಸಿಗ್ನಲ್ಗಾಗಿ ಹಲವು ದಿನಗಳ ಕಾಲ ಕಾಯಬೇಕಾಯ್ತು. ಆದರೂ ಅವರು ದೃಢ ನಿರ್ಧಾರ ಮಾಡಿದ್ದರು.
ಹೌದು, ಒಮ್ಮೆ ಆಟೋವನ್ನೆ ಅಫಿಶಿಯಲ್ ವಾಹನವನ್ನಾಗಿ ಬಳಸಲು ಸಮ್ಮತಿ ಸಿಗುತ್ತಲೇ ಮೆಲ್ಬಾ ಪ್ರಿಯಾ ಅವರು ಹೊಸ ಆಟೋ ಖರೀದಿಸಿದರು. ಕಳೆದ ಫೆಬ್ರವರಿಯಲ್ಲಿ ದೆಹಲಿ ಸ್ಟ್ರೀಟ್ ಆರ್ಟ್ ಫೆಸ್ಟಿವಲ್ನಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದ್ದ ಮೆಕ್ಸಿಕೋ ಮೂಲದ ಕಲಾವಿದ ಸೆಂಕೋ ಅವರಿಂದ ಅದಕ್ಕೆ ಬಣ್ಣ ಬಳಸಿ, ಕ್ರಿಯಾತ್ಮಕವಾಗಿ ಅಲಂಕಾರ ಮಾಡಿಸಿದರು. ಜತೆಗೆ ಕೆಲವೇ ದಿನಗಳಲ್ಲಿ ರಾಯಭಾರ ಕಚೇರಿ ಅಧಿಕಾರಿಗಳ ಕಚೇರಿಗೆ ನೀಡಲಾಗುವ ವಿಶೇಷ ನಂಬರ್ನಂತೆ ಈ ಆಟೋಗೂ ನಂಬರ್ ದೊರೆಯಿತು ನೋಡಿ.


ಇನ್ನು ಆ ಆಟೋಗೆ ಭಾರತ ಹಾಗೂ ಮೆಕ್ಸಿಕೋ ದೇಶಗಳ ಫ್ಲ್ಯಾಗ್ಗಳನ್ನೂ ಹಾಕಲಾಗಿದೆ. ಈಗ ಕಳೆದ ಒಂದೂವರೆ ವರ್ಷದಿಂದ ಮೆಲ್ಬಾ ಪ್ರಿಯಾ ರಾಯಭಾರ ಕಛೇರಿಯ ಸರ್ಕಾರಿ ಆಟೋದಲ್ಲೇ ಓಡಾಡುತ್ತಿದ್ದಾರೆ. ಅಂದ್ಹಾಗೆ ಈ ಆಟೋಗೆ ‘ಮೆಕ್ಸಿಕೋ – ಇಂಡಿಯಾ ಆಟೋರಿಕ್ಷಾ’ ಎಂದೂ ನಾಮಕರಣ ಮಾಡಲಾಗಿದೆ.
ಆಟೋಗೆ ಕಲರ್ ಡಿಸೈನ್ ಹಾಗೂ ಮಜವಾದ ವಿನ್ಯಾಸ ಮೊದಲು ನೋಡುತ್ತಲೇ ಎಲ್ಲರನ್ನು ಸೆಳೆಯುತ್ತದೆ. ಇದರಲ್ಲಿ ಮೆಕ್ಸಿಕೋ ದೇಶವನ್ನು ಕಾಣಬಹುದು. ಕೆಲವೊಮ್ಮೆ ಬೇರೆ ರಿಕ್ಷಾ ಚಾಲಕರು ಈ ಆಟೋ ನೋಡಿ ನಗುತ್ತಾರೆ. ವಿಶೇಷ ಅಂದರೆ ರಾಯಭಾರ ಕಛೇರಿ ಸಿಬ್ಬಂದಿ ರಾಜೇಂದ್ರ ಕುಮಾರ್, ಮೆಕ್ಸಿಕೋ ರಾಯಭಾರಿ ಮೆಲ್ಬಾ ಪ್ರಿಯಾ ಅವರ ಈ ಆಟೋ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೆಲವೊಮ್ಮೆ ಮೆಲ್ಬಾ ಪ್ರಿಯಾ ಅವರು ಆಟೋದಲ್ಲೆ ಕಚೇರಿ ಕೆಲಸವನ್ನು ಮಾಡುತ್ತಾರೆ. ಆದರೆ ಒಂದೇ ಸಮಸ್ಯೆ, ಅದು ಅವರ ಸೆಕ್ಯುರಿಟಿ. ಆ ಕುರಿತು ಮೆಲ್ಬಾ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ದೆಹಲಿಯಲ್ಲಿರುವ ಪಾರ್ಲಿಮೆಂಟ್, ಕೆಲ 5 ಸ್ಟಾರ್ ಹೋಟೆಲ್ಗಳು ಹಾಗೂ ಕೆಲ ಕಛೇರಿಗಳಿಗೆ ಆಟೋ ಎಂಟ್ರಿ ಇಲ್ಲ. ಹೀಗಾಗಿಯೇ ಮೆಲ್ಬಾ, ಕೆಲವೊಮ್ಮೆ ಗೇಟಿನಿಂದ ಇಳಿದು ಕಛೇರಿಗೆ ನಡೆದುಕೊಂಡು ಹೋಗಿದ್ದಾರಂತೆ.
ತಮ್ಮ ಅಧಿಕಾರನ್ನು ಸ್ಟೇಟಸ್ನಂತೆ ಬಳಸದೇ, ಖುದ್ದು ಸಮಸ್ಯೆ ಎದುರಿಸಿದರೂ ಪರಿಸರ ಸ್ನೇಹಿಯಾಗಿಯೇ ಮುಂದುವರಿದಿದ್ದಾರೆ ಮೆಲ್ಬಾ. ಒಟ್ಟಿನಲ್ಲಿ ಮೆಲ್ಬಾಪ್ರಿಯಾ ದೇಶದ ಎಲ್ಲರಿಗೂ ಮಾದರಿ ಅನ್ನೋದ್ರಲ್ಲಿ ಎರಡು ಮಾತಿಲ್ಲ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...