ಕಾಲುಂಗರದಿಂದ ಕೆಲವು ಕಾಯಿಲೆಗಳನ್ನು ತಡೆಗಟ್ಟಬಹದಾ?

Date:

ಭಾರತೀಯ ಹಿಂದೂ ಸಂಪ್ರದಾಯದಲ್ಲಿ ಕಾಲುಂಗುರಕ್ಕೆ ಹೆಚ್ಚಿನ ಮಹತ್ವ ಇದೆ. ಮದುವೆಯಾದ ಮಹಿಳೆ ಧರಿಸಲೇಬೇಕಾದ ಒಂದು ಮುಖ್ಯವಾದ ಮಂಗಳಕರ ವಸ್ತು ಕಾಲುಂಗರ. ಆದ್ರೆ ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಗಾಗಿ, ಡೆಕೋರೇಟಿವ್ ಜ್ಯುವೆಲ್ಲರಿ ಆಗಿ ಇದನ್ನು ಧರಿಸುತ್ತಾರೆ. ಕಾಲುಂಗುರ ಎಂಬುದು ಮುತ್ತೈದೆಯ ಬಹು ಮುಖ್ಯ ಆಭರಣ. ಇದು ಕೇವಲ ಸಂಪ್ರಾದಾಯ ಮಾತ್ರವಾಗಿಲ್ಲ ಇದು ಆರೋಗ್ಯಕ್ಕೂ ಉತ್ತಮ ಗೊತ್ತಾ..? ಕಾಲುಂಗರ ತೊಡೋದ್ರಿಂದ ಕಾಯಿಲೆಯನ್ನು ದೂರು ಮಾಡಬಹುದು ಗೊತ್ತಾ?.. ಅದು ಯಾವುದು ಅಂತಾ ಮುಂದೆ ಓದಿ..
ಹೌದು.. ಭೂಮಿಯಿಂದ ಧ್ರುವೀಯ ಶಕ್ತಿಯನ್ನು ಹೀರಿಕೊಂಡು ದೇಹದಲ್ಲಿ ಹಾದು ಹೋಗಲು ಬೆಳ್ಳಿ ನೆರವಾಗುತ್ತದೆ. ದೇಹದಲ್ಲಿ ಇದು ಅನೇಕ ಬದಲಾವಣೆಗಳನ್ನು ತರುತ್ತಂತೆ. ಕಾಲುಂಗುರ ಹಾಕುವ ಎರಡನೇ ಬೆರಳಿನಲ್ಲಿ ಪ್ರೆಷರ್ ಪಾಯಿಂಟ್ ಇದ್ದು ಈ ಬೆರಳಿಗೆ ಬೆಳ್ಳಿ ಕಾಲುಂಗುರವನ್ನು ಧರಿಸುವುದರಿಂದ ಮಹಿಳೆಯರ ಋತು ಚಕ್ರ ಸಮಸ್ಯೆ ತಡೆಯಬಹುದು. ಇದರಿಂದ ಪಿರಿಯಡ್ಸ್ ಸರಿಯಾಗಿ ಆಗುತ್ತದಂತೆ. ಕಾಲುಂಗುರ ಹಾಕುವುದರಿಂದ ರಕ್ತ ಸಂಚಾರ ಸಮಪರ್ಕಗೊಂಡು, ಗರ್ಭಕೋಶವನ್ನು ಆರೋಗ್ಯವಾಗಿಡಬಹುದು. ಕಾಲಿನ ಕೆಲವು ನರಗಳು ಉತ್ತೇಜನಗೊಳ್ಳುತ್ತದೆ. ಇದರಿಂದ ಸಂತಾನೋತ್ಪತ್ತಿಯೂ ಚೆನ್ನಾಗಿರುತ್ತದೆ. ಕಾಲುಂಗುರದಿಂದ ಬೆರಳಿನ ಮೇಲೆ ಒತ್ತಡ ಉಂಟಾಗುತ್ತೆ. ಇದರಿಂದ ಅಲ್ಲಿರುವ ನರದ ಮೇಲೆ ಪ್ರೆಷರ್ ಬಿದ್ದು, ದೇಹಕ್ಕೆ ಮಸಾಜ್ ಸಿಕ್ಕಿಂತಾಗುತ್ತದೆ. ಇದು ಹಲವು ಸ್ತ್ರೀ ಸಂಬಂಧಿ ರೋಗಗಳಿಗೂ ರಾಮಬಾಣ. ದೇಹದ ಎಲ್ಲಾ ಅಂಗಾಗಳನ್ನೂ ರಿಫ್ರೆಶ್ ಆಗಲು ಕಾಲುಂಗುರ ಧರಿಸುವುದು ಉತ್ತಮ. ಕಾಲುಂಗುರ ಧರಿಸುವುದರಿಂದ ಮಹಿಳೆಯ ಹೊಟ್ಟೆಯಲ್ಲಿರುವ ಮಗುವೂ ಆರೋಗ್ಯವಾಗಿ ಬೆಳವಣಿಗೆಯಾಗುತ್ತದೆ. ಕಾಲುಂಗುರ ನಕರಾತ್ಮಕತೆ ನಿವಾರಿಸುತ್ತದೆ. ಇದು ಗರ್ಭಿಣಿಯರು ಮಾನಸಿಕವಾಗಿ ಆರೋಗ್ಯದಿಂದಿರಲು ಸಹಕರಿಸುತ್ತೆ. ಬೆಳ್ಳಿ ವಸ್ತು ದೇಹವನ್ನು ತಂಪಾಗಿರಿಸುತ್ತವೆ. ಇದನ್ನು ಧರಿಸುವುದರಿಂದ ಪೊಸಿಟಿವ್ ಎನರ್ಜಿ ದೇಹದಲ್ಲಿ ಸಂಚಾರವಾಗುತ್ತದೆ. ಬ್ಲಡ್ ಪ್ರೆಶರ್ ಸಮಸ್ಯೆ ನಿರಾಳವಾಗಲು ಬೆಳ್ಳಿ ಕಾಲುಂಗುರ ನೆರವಾಗುತ್ತದೆ. ಇವಿಷ್ಟೂ ಕಾಲುಂಗರ ತೊಡುವುದರಿಂದ ಇಷ್ಟೇಲ್ಲಾ ಉಪಯೋಗವಾಗುತ್ತದಂತೆ.

Share post:

Subscribe

spot_imgspot_img

Popular

More like this
Related

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...