ಸ್ಯಾಂಡಲ್ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು ಬಾಲಿವುಡ್, ಟಾಲಿವುಡ್ನಲ್ಲೂ ಬಹು ಬೇಡಿಕೆ ಗಿಟ್ಟಿಸಿಕೊಂಡಿದ್ದಾರೆ. ಚಂದನವನದ ಮಾಣಿಕ್ಯನ ನಟನೆಗೆ ಇಡೀ ಭಾರತೀಯ ಚಿತ್ರರಂಗ ಮನಸೋತಿದೆ. ಅದ್ಭುತ ನಟನೆಯ ಮೂಲಕ ಸುದೀಪ್ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇಂಥಾ ಸ್ಟಾರ್ ನಟನಿಗೆ ಪ್ರತಿಷ್ಠಿತ ಪ್ರಶಸ್ತಿ ಒಲಿದು ಬಂದಿದೆ. ಅದೇ ದಾದಾ ಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಪ್ರಶಸ್ತಿ.
ಭಾರತ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯಲ್ಲ. ಇದು ಬೇರೊಂದು ಸಂಸ್ಥೆ ದಾದಾ ಸಾಹೇಬ್ ಫಾಲ್ಕೆ ಹೆಸರಲ್ಲಿ ಕೊಡುವ ಪ್ರಶಸ್ತಿ. ಕಿಚ್ಚನಿಗೆ ಒಲಿದಿರುವುದು ಕೂಡ ಇದೇ ಫಾಲ್ಕೆ ಪ್ರಶಸ್ತಿ.
ಚಂದನವನದ ರನ್ನ ಸುದೀಪ್ ಅವರು ಸಲ್ಮಾನ್ ಖಾನ್ ಜೊತೆ ದಬಾಂಗ್ 3ನಲ್ಲಿ ನಟಿಸಿದ್ದು ಗೊತ್ತೇ ಇದೆ. ಆ ಸಿನಿಮಾದ ಅದ್ಭುತ ನಟನೆಗೆ ಪ್ರಶಸ್ತಿ ಹರಸಿ ಬಂದಿದೆ. ದಾದಾ ಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ 2020ರ ‘ಮೋಸ್ಟ್ ಪ್ರಾಮಿಸಿಂಗ್ ಆಕ್ಟರ್’ ಎಂಬ ಅವಾರ್ಡ್ ಬಂದಿದ್ದು, . ದಾದಾ ಸಾಹೇಬ್ ಮತ್ತು ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನದ ಪ್ರಯುಕ್ತ ಫೆಬ್ರವರಿ 20ರಂದು ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್ನಲ್ಲಿ ನಡೆಯಲಿರೋ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸುದೀಪ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಮಹಾರಾಷ್ಟ್ರ ಗವರ್ನರ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.