ಬಾಗಲಕೋಟೆ: ಕುಂಭಮೇಳಕ್ಕೆ ತೆರಳಿದ್ದ ಬಾಗಲಕೋಟೆ ಜಿಲ್ಲೆಯ 44 ವರ್ಷದ ವ್ಯಕ್ತಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸತೀಶ್ ಜೋಶಿ (44) ಮೃತ ವ್ಯಕ್ತಿ. ಕುಂಭಮೇಳದಲ್ಲಿ ಭಾಗಿಯಾಗಿದ್ದ ಸತೀಶ್, ಬಳಿಕ ಕಾಶಿಗೆ ತೆರಳಿದ್ದರು. ಬಾಗಲಕೋಟೆ ಜಿಲ್ಲಾ ಪಂಚಾಯತ್ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಇನ್ನು ಮೃತ ಸತೀಶ್ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಕುಂಭಮೇಳದಲ್ಲಿ ಭಾಗಿಯಾದ ಬಳಿಕ ಸತೀಶ್ ಹಾಗೂ ಕುಟುಂಬಸ್ಥರು ಅಲ್ಲಿಂದ ಕಾಶಿಗೆ ತೆರಳಿದ್ದರು. 35 ಜನ ಸೇರಿ ಪ್ರವಾಸಿ ಬಸ್‌ನಲ್ಲಿ ತೆರಳಿದ್ದರು. ಇಂದು ಬೆಳಗಿನ ಜಾವ ಕಾಶಿಯಲ್ಲಿ ನದಿಸ್ನಾನ ಮಾಡುವ ವೇಳೆ ನದಿಯಲ್ಲಿ ಮುಳುಗಿದ್ದ ಸತೀಶ್ ಶವವಾಗಿ ಹೊರಬಂದಿದ್ದಾರೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.
ಕುಂಭಮೇಳಕ್ಕೆ ತೆರಳಿದ್ದ ಬಾಗಲಕೋಟೆ ಮೂಲದ ವ್ಯಕ್ತಿ ಸಾವು!
Date: