ಕುಮಾರಸ್ವಾಮಿ ಅವರ ಯೋಜನೆ ಮತ್ತೆ ಜಾರಿಗೆ ತಂದ ಸಿಎಂ ಬೊಮ್ಮಾಯಿ

admin
1 Min Read

ಮುಖ್ಯಮಂತ್ರಿಯಾದ ತಕ್ಷಣ ಜೆಡಿಎಸ್ ನಾಯಕರನ್ನು ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ್ದು ಬಿಜೆಪಿಯಲ್ಲಿ ವಿರೋಧಕ್ಕೆ ಕಾರಣವಾಗಿತ್ತು. ಇದೇ ವಿಚಾರ ಮುಂದಿಟ್ಟುಕೊಂಡು ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಅವರು ಮಾತನಾಡಿದ್ದರು. ಜೊತೆಗೆ ಬಿಜೆಪಿಯ ಇನ್ನಿತರ ಕೆಲ ನಾಯಕರೂ ಆ ಬಗ್ಗೆ ಮಾತನಾಡಿದ್ದರು. ಆ ಬೆಳವಣಿಗೆ ಬಿಜೆಪಿ ಹೈಕಮಾಂಡ್ ಕಂಗೆಣ್ಣಿಗೂ ಗುರಿಯಾಗಿತ್ತು ಎಂಬ ಮಾಹಿತಿಯಿದೆ.

ಇದೇ ಸಂದರ್ಭದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಜನಪ್ರೀಯ ಗ್ರಾಮ ವಾಸ್ತವ್ಯ ಪರಿಕಲ್ಪನೆಯನ್ನು ಸಿಎಂ ಬೊಮ್ಮಾಯಿ ಅನುಕರಣೆ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಬೇಕು ಎಂದು ಸೂಚಿಸಿದ್ದರು. ಅದೇ ಮಾದರಿಯಲ್ಲಿ ಸಿಎಂ ಬೊಮ್ಮಾಯಿ ‘ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

Share This Article
Leave a Comment