ಕುಮಾರಸ್ವಾಮಿ ಒಬ್ಬ ಪರಿಣಿತ ಡ್ರಾಮಾ ಕಲಾವಿದ: ಡಿಕೆ ಸುರೇಶ್!
ಮಂಡ್ಯ:- ಕುಮಾರಸ್ವಾಮಿ ಒಬ್ಬ ಪರಿಣಿತ ಡ್ರಾಮಾ ಕಲಾವಿದ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
ಬೆಂಗಳೂರು ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತಾಡುವಾಗ ಡಿಕೆ ಶಿವಕುಮಾರ್ ಕಣ್ಣೀರು ಹಾಕಿದ್ದನ್ನು ನಾಟಕ ಎಂದಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮಾತಿಗೆ ಮಾಜಿ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಕುಮಾರಸ್ವಾಮಿಯೇ ಒಬ್ಬ ಪರಿಣಿತ ಡ್ರಾಮಾ ಕಲಾವಿದ, ಅವರು ಯಾವ್ಯಾವ ಸಂದರ್ಭದಲ್ಲಿ ಏನೆಲ್ಲ ಡ್ರಾಮಾಗಳನ್ನು ಮಾಡಿದ್ದಾರೆ, ಸಂದರ್ಭಗಳನ್ನು ಹೇಗೆಲ್ಲ ತಿರುಚಿದ್ದಾರೆ ಅಂತ ತಾನು ವ್ಯಾಖ್ಯಾನಿಸುವುದು ಸರಿಯಲ್ಲ ಎಂದು ಸುರೇಶ್ ಹೇಳಿದರು. ಕಾಲ್ತುಳಿತದಿಂದ ಸತ್ತವರ ಬಗ್ಗೆ ಅವರಿಗೆ ಅನುಕಂಪ ಇಲ್ಲ, ಈ ಸಂದರ್ಭವನ್ನು ರಾಜಕೀಯವಾಗಿ ಬಳಸಿಕೊಳ್ಳುವುದಷ್ಟೇ ಅವರಿಗೆ ಬೇಕು ಎಂದು ಸುರೇಶ್ ಹೇಳಿದರು.
ಚಿನ್ನಸ್ವಾಮಿ ಕಾಲ್ತುಳಿತ ದುರಂತ:
ಬುಧವಾರ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ ಕ್ರೀಡಾಂಗಣದ ಹೊರಗೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಈ ಸಂದರ್ಭದಲ್ಲಿ, ಕ್ರೀಡಾಂಗಣಕ್ಕೆ ಪ್ರವೇಶಿಸಲು ಪ್ರಯತ್ನಿಸುವಾಗ ಕಾಲ್ತುಳಿತ ಸಂಭವಿಸಿತು, ಇದರಲ್ಲಿ 11 ಅಭಿಮಾನಿಗಳು ಪ್ರಾಣ ಕಳೆದುಕೊಂಡರೆ, 20 ಕ್ಕೂ ಹೆಚ್ಚು ಅಭಿಮಾನಿಗಳು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.