ಲೋಕಸಭಾ ಚುನಾವಣೆ ಎಲ್ಲಾ ಕಡೆ ಮತದಾನ ಚಲಾಯಿಸಲು ಸಾರ್ವಜನಿಕರು ಹಾಗೂ ಗಣ್ಯರು ಆಗಮಿಸಿ ಮತ ಚಲಾಯಿಸುತ್ತಿದ್ದಾರೆ .
ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಕುಟುಂಬ ಸಮೇತರಾಗಿ ತಮ್ಮ ಹಕ್ಕನ್ನು ಚಲಾಯಿಸಲು ಇಂದು ಬೆಂಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ರಾಮನಗರ ತಾಲ್ಲೂಕಿನ ಕೇತಿಗಾನಹಳ್ಳಿ ಮತಗಟ್ಟೆ ಗೆ ಬಂದು ಸಂಖ್ಯೆ 235 ರಲ್ಲಿ ಮತ ಚಲಾಯಿಸಿದರು.
ಮುಖ್ಯಮಂತ್ರಿಗಳ ಪತ್ನಿ ಹಾಗೂ ಶಾಸಕರಾದ ಶ್ರೀಮತಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ, ಸಿಎಂ ಕುಟುಂಬದವರೊಡನೆ ಸಂಸದ ಡಿ.ಕೆ. ಸುರೇಶ್ ಸಹ ಮತಚಲಾಯಿಸಿದರು.