ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಾಲು ಸಾಲು ಸಿನಿಮಾಗಳು ತೆರೆ ಕಾಣುತ್ತಿವೆ. 2017ರಲ್ಲಿ ತಾರಕ್ ಸಿನಿಮಾ ರಿಲೀಸ್ ಆಗಿತ್ತು. 2018ರಲ್ಲಿ ಡಿ.ಬಾಸ್ ನಟನೆಯ ಒಂದೂ ಸಿನಿಮಾ ಕೂಡ ತೆರೆಕಂಡಿರಲಿಲ್ಲ. ಆದರೆ ಈ ವರ್ಷದ ಆರಂಭದಿಂದಲೂ ದರ್ಶನ್ ಅವರದ್ದೇ ಕಾರುಬಾರು..!
ಮಾರ್ಚ್ನಲ್ಲಿ ಯಜಮಾನ ಸಿನಿಮಾ ರಿಲೀಸ್ ಆಯ್ತು. ಯಜಮಾನ ಸೆಂಚುರಿ ಬಾರಿಸಿ ಮುನ್ನುಗ್ಗಿದ ಸಂಭ್ರಮದ ಬೆನ್ನಲ್ಲೇ ಬಹು ನಿರೀಕ್ಷಿತ ಕುರುಕ್ಷೇತ್ರ ಸಿನಿಮಾ ಕನ್ನಡ, ತೆಲುಗು, ತಮಿಳಲ್ಲಿ ತೆರೆಕಂಡಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹಿಂದಿಯಲ್ಲೂ ಸಿನಿಮಾ ರಿಲೀಸ್ ಆಗಲಿದೆ. ದರ್ಶನ್ ಈ ಸಿನಿಮಾದಲ್ಲಿ ದುರ್ಯೋಧನನಾಗಿ ಸದ್ದು ಮಾಡುತ್ತಿದ್ದಾರೆ. ದರ್ಶನ್ ಅಭಿಮಾನಿ ಬಳಗ ಈಗ ಪರ ಭಾಷೆಗಳಲ್ಲೂ ವಿಸ್ತರಿಸೆ. 100 ಕೋಟಿ ಕಲೆಕ್ಷನ್ ದಾಟಿದ ಸಂಭ್ರಮದಲ್ಲಿ ಕುರುಕ್ಷೇತ್ರ ಟೀಮ್ ಇದೆ. ದಚ್ಚು ಅಭಿಮಾನಿಗಳ ತಂಡವೊಂದು ಇದೇ ಸಂತಸದಲ್ಲಿ ಶತಕೋಟಿ ಸರ್ದಾರ ಎನ್ನುವ ಬಿರುದನ್ನು ನೀಡಿ ಗೌರವಿಸಿದ್ದಾರೆ.
ಕುರುಕ್ಷೇತ್ರದ ಓಟದ ಬೆನ್ನಲ್ಲೇ ಇನ್ನೊಂದು ಸಿಹಿ ಸುದ್ದಿ ದರ್ಶನ್ ಕಡೆಯಿಂದ ಬಂದಿದೆ. ದರ್ಶನ್ ಅಭಿನಯದ ಮತ್ತೊಂದು ಬಹು ನಿರೀಕ್ಷಿತ ಸಿನಿಮಾ ಒಡೆಯ ತಂಡದಿಂದ ಬಂದಿರುವ ಸುದ್ದಿಯಿದು. ಒಡೆಯನ ರಿಲೀಸ್ ಗೆ ಡೇಟ್ ಫಿಕ್ಸ್ ಎಂಬ ನ್ಯೂಸ್ ಇದು..!
ದಸರಾ ಸಂಭ್ರದಲ್ಲಿ ಟೀಸರ್, ಅದರ ಬೆನ್ನಲ್ಲೇ ಟ್ರೈಲರ್ ರಿಲೀಸ್ ಮಾಡಲಿರುವ ಚಿತ್ರತಂಡ ದೀಪಾವಳಿ ಹೊತ್ತಿಗೆ, ಕನ್ನಡ ರಾಜ್ಯೋತ್ಸದ ಸಂಭ್ರಮದಲ್ಲಿ ನವೆಂಬರ್ನಲ್ಲಿ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.
ಚಿತ್ರೀಕರಣ ಬಹುತೇಕ ಕಂಪ್ಲೀಟ್ ಆಗಿದೆ. ದರ್ಶನ್ ಅವರ ಡಬ್ಬಿಂಗ್ ಕೂಡ ಮುಗಿದಿದೆ. ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಸ್ವಿಜ್ಜರ್ಲ್ಯಾಂಡ್ನಲ್ಲಿ ಚಿತ್ರೀಕರಣ ಮಾಡಲು ಡೈರೆಕ್ಟರ್ ಎಂ.ಡಿ ಶ್ರೀಧರ್ ಪ್ಲಾನ್ ಮಾಡಿಕೊಂಡಿದ್ದಾರೆ.