ಕೃಷಿ ದೇಶದ ಬೆನ್ನೆಲುಬು; ಲಾಕ್‌ಡೌನ್ ನಂತರ ಬೆನ್ನೆಲುಬು ಮುರಿದು ಹೋಗದಿರಲಿ.

Date:

ಸಮಸ್ಯೆ, ಸಂಕಷ್ಟಗಳು ಈ ಜಗತ್ತಿಗೆ ಹೊಸದೇನಲ್ಲ. ಪ್ರತಿಯೊಂದು ಜೀವಿಯೂ ತನ್ನ ಬದುಕಿಗಾಗಿ ತನ್ನದೇ ವ್ಯಾಪ್ತಿಯಲ್ಲಿ ಹೋರಾಟ ನಡೆಸುತ್ತಿರುತ್ತದೆ. ಇದು ಪ್ರಕೃತಿ ನಿಯಮ‌. ಆದರೆ ಆಧುನಿಕತೆಯತ್ತ ದಾಪುಗಾಲಿಡುತ್ತ, ತನ್ನನ್ನು ನಿಲ್ಲಿಸುವವರು ಇಲ್ಲವೆಂದು ಬೀಗುತ್ತಿದ್ದ ಮನುಷ್ಯನಿಗೀಗ ಅನಿರೀಕ್ಷಿತ ಸಂಕಷ್ಟವೊಂದು ಎದುರಾಗಿದೆ. ಈ ಸಮಸ್ಯೆಯನ್ನು ಮಾನವನೇ ಸೃಷ್ಟಿಸಿಕೊಂಡಿದ್ದೋ, ಪ್ರಕೃತಿ ಸೃಷ್ಟಿಸಿದ್ದೋ ಎಂಬ ಚರ್ಚೆಯನ್ನು ಬದಿಗಿರಿಸಿ ಇದರಿಂದಾದ ತೊಂದರೆಯನ್ನು ಗಮನಿಸುವುದಾದರೆ ಸದ್ಯಕ್ಕೆ ಮಾನವ ಸಂಕುಲ ಈ ಸಮಸ್ಯೆಯಿಂದ ಕಂಗಾಲಾಗಿರುವುದು ಸತ್ಯ.
ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕಂಡುಬಂದ ಕೋವಿಡ್ – 19 ವೈರಾಣು ಪ್ರಸ್ತುತ ಪ್ರಾಂತ್ಯ, ದೇಶ, ಖಂಡಗಳ ಎಲ್ಲೆ ಮೀರಿ ಹಬ್ಬಿದೆ. ಜಗತ್ತಿನ ಅತ್ಯಂತ ಮುಂದುವರಿದ ದೇಶಗಳು ಕೂಡ ಕೋವಿಡ್ – 19 ವೈರಾಣುವನ್ನು ನಿಯಂತ್ರಿಸುವಲ್ಲಿ, ಸಾವು – ನೋವುಗಳನ್ನು ತಡೆಗಟ್ಟುವಲ್ಲಿ ವಿಫಲವಾಗಿವೆ. ಕೆಲ ದೇಶಗಳು ತಮ್ಮ ಆರ್ಥಿಕತೆಯನ್ನು ಕಾಪಾಡಲು ಜನರ ಜೀವವನ್ನೇ ಒತ್ತೆ ಇಟ್ಟಿವೆ ಎಂಬ ಟೀಕೆಯೂ ಕೇಳಿಬರುತ್ತಿದೆ. ಹಾಗೆ ನೋಡಿದರೆ ಭಾರತದ ಜನಸಂಖ್ಯಾ ಸಾಂದ್ರತೆ, ಇಲ್ಲಿನ ಜೀವನ ಶೈಲಿ, ವೈದ್ಯಕೀಯ ಸೌಲಭ್ಯ ಅತ್ಯುತ್ತಮ ಎಂಬ ಸ್ಥಿತಿಯಲ್ಲಿರದಿದ್ದರೂ ಇಲ್ಲಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆಗೆದುಕೊಂಡ ಲಾಕ್‌ಡೌನ್‌ನಂತಹ ಕಠಿಣ ನಿರ್ಧಾರ ಆರ್ಥಿಕತೆಗೆ ಪ್ರಬಲ ಹೊಡೆತ ನೀಡಿದರೂ ಜನರ ಜೀವ ಉಳಿಸುವಲ್ಲಿ, ಸೋಂಕು ಹರಡುವಿಕೆಯ ವೇಗ ತಗ್ಗಿಸುವಲ್ಲಿ ಪರಿಣಾಮಕಾರಿಯಾಗಿದೆ. ಆದರೂ ಹೆಚ್ಚಿನ ಪ್ರಕರಣಗಳಲ್ಲಿ ಜನರ ನಿರ್ಲ್ಯಕ್ಷದಿಂದಲೇ ಸೋಂಕು ಹಬ್ಬಿರುವುದರಿಂದ ಅದನ್ನೀಗ ನಿವಾರಿಸುವುದು ಸವಾಲಾಗಿದೆ. ಅದೇನೇ ಇದ್ದರೂ ಭಾರತದ ಮಟ್ಟಿಗೆ ಸದ್ಯಕ್ಕೆ ತಲೆನೋವಾಗಿರುವುದು ಲಾಕ್‌ಡೌನ್ ಕಾರಣದಿಂದ ಉಂಟಾಗಿರುವ ಆರ್ಥಿಕ ನಷ್ಟ. ಲಾಕ್‌ಡೌನ್ ತೆರವಿನ ನಂತರ ಮುಂದಿನ ದಿನಗಳಲ್ಲಿ ಜನರ ಬದುಕನ್ನು ಸರಿದಾರಿಗೆ ತರುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸುವುದು ನಿಶ್ಚಿತ. ಇನ್ನೊಂದೆಡೆ ದೇಶದ ಎಲ್ಲಾ ಔದ್ಯೋಗಿಕ ವಲಯಗಳೂ ಬಹುದೊಡ್ಡ ನಷ್ಟವನ್ನು ಎದುರಿಸಿರುವುದರಿಂದ ಮುಂದೆ ನಿರುದ್ಯೋಗ ಸಮಸ್ಯೆಯೂ ತಲೆದೋರುವ ಸಾಧ್ಯತೆ ಇದೆ. ಆದ್ದರಿಂದ ಹೊಸದಾಗಿ ಉದ್ಯೋಗ ಸೃಷ್ಟಿಸುವ ಸವಾಲು, ಪರದೇಶಗಳನ್ನು ಅವಲಂಬಿಸದೆ ಸ್ವಾವಲಂಬಿ ಸಮಾಜ ಕಟ್ಟುವ ಗುರಿ ಸರ್ಕಾರಗಳ ಮುಂದಿದೆ. ಇಷ್ಟು ವರ್ಷಗಳ ಕಾಲ ಬಹುತೇಕ ಕಡೆಗಣನೆಗೆ ಒಳಗಾಗಿಯೇ ಇದ್ದ ಕೃಷಿ ಕ್ಷೇತ್ರಕ್ಕೆ ಮುಂದಿನ ದಿನಗಳು ಸಂಕಷ್ಟದಾಯಕವಾಗದಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯವಾದದ್ದು. ಕೈಗಾರಿಕೆಗಳನ್ನು ಬೆಳೆಸುವ ಭರದಲ್ಲಿ ಕೃಷಿ ಭೂಮಿಗಳನ್ನು ಒತ್ತುವರಿ‌ ಮಾಡುವಂತಹ ನಿರ್ಧಾರ ಕೈಗೊಂಡಿದ್ದೇ ಆದಲ್ಲಿ ಅದು ದೇಶದ ಬೆನ್ನೆಲುಬನ್ನು ಶಾಶ್ವತವಾಗಿ ಮುರಿಯುವ ನಿರ್ಧಾರ ಆಗುತ್ತದೆ. ಆದ್ದರಿಂದ ಸರ್ಕಾರ ಈ ಸಂದರ್ಭದಲ್ಲಿ ಅತ್ಯಂತ ಜಾಗರೂಕತೆಯಿಂದ ನಿರ್ಧಾರಗಳನ್ನು ಕೈಗೊಂಡು ದೇಶವನ್ನು ಮತ್ತೆ ಸುಸ್ಥಿತಿಗೆ ತರಬೇಕಿದೆ.

– ಸ್ಕಂದ ಆಗುಂಬೆ.

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...