ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಶಂಕಿತ ಉಗ್ರ ಅರೆಸ್ಟ್!

Date:

ಬೆಂಗಳೂರು:- ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಂಕಿತ ಉಗ್ರನನ್ನು ಅರೆಸ್ಟ್ ಮಾಡಲಾಗಿದೆ. ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಶಂಕಿತ ಉಗ್ರನನ್ನು ಬಂಧಿಸಿದ್ದಾರೆ.

ಅಜೀಜ್ ಅಹ್ಮದ್ ಬಂಧಿತ ಶಂಕಿತ ಉಗ್ರ ಎನ್ನಲಾಗಿದೆ. ಹಿಜ್ಬ್ ಉಲ್ ತಹ್ರೀರ್ ಭಯೋತ್ಪಾದಕ ಸಂಘಟನೆಯ ಅಜೀಜ್​ ಅಹ್ಮದ್​ ಶುಕ್ರವಾರ ಬೆಳಗ್ಗೆ ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಸೌದಿಯ ಜಿದ್ದಾಗೆ ಪಾರಾರಿಯಾಗುತ್ತಿದ್ದನು. ಈ ಮಾಹಿತಿಯನ್ನು ಇಮಿಗ್ರೇಷನ್ ಅಧಿಕಾರಿಗಳು ಎನ್​ಐಎಗೆ ನೀಡಿದ್ದಾರೆ. ಮಾಹಿತಿ ಆಧರಿಸಿ ಕೂಡಲೆ ಸ್ಥಳಕ್ಕೆ ತೆರಳಿದ ಎನ್ಐಎ ಅಧಿಕಾರಿಗಳು ಶಂಕಿತ ಉಗ್ರ ಅಜೀಜ್​ ಅಹ್ಮದ್​​ನನ್ನು ಬಂಧಿಸಿದ್ದಾರೆ.

ಇತ್ತೀಚಿಗೆ ಎನ್​ಐಎ ಅಧಿಕಾರಿಗಳು ನೌಕಾನೆಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ ಮೂವರನ್ನು ವಶಕ್ಕೆ ಪಡೆದಿದ್ದರು. ಆರೋಪಿಗಳು ಹನಿಟ್ರ್ಯಾಪ್​​ಗೆ ಒಳಗಾಗಿ, ಹಣಕ್ಕಾಗಿ ಸೀಬರ್ಡ್ ನೌಕಾನೆಲೆ ಫೋಟೋ, ಇತರೆ ಮಾಹಿತಿಯನ್ನು ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ನೀಡಿದ್ದರು. ಈ ಮಾಹಿತಿ ಆಧಾರದ ಮೇಲೆ ಎನ್​ಐಎ ಅಧಿಕಾರಿಗಳು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು ಎನ್ನಲಾಗಿದೆ.

Share post:

Subscribe

spot_imgspot_img

Popular

More like this
Related

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಜಾಮೀನು ಅರ್ಜಿ ಹೈಕೋರ್ಟ್ ವಜಾ

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಜಾಮೀನು ಅರ್ಜಿ ಹೈಕೋರ್ಟ್...

ಸಂಬಂಧಿಯಿಂದಲೇ ನಟಿ ಕಾವ್ಯಾಗೆ ಬಂತು ರೇಪ್ ಬೆದರಿಕೆ

ಸಂಬಂಧಿಯಿಂದಲೇ ನಟಿ ಕಾವ್ಯಾಗೆ ಬಂತು ರೇಪ್ ಬೆದರಿಕೆ; ಪತಿಯ ಮೇಲೆ ಹಲ್ಲೆ‘ಗಾಂಧಾರಿ’...

ನರೇಗಾ ಪುನರ್ ಸ್ಥಾಪನೆ ಆಗುವವರೆಗೆ ಹೋರಾಟ: ಸಿಎಂ ಸಿದ್ದರಾಮಯ್ಯ

ನರೇಗಾ ಪುನರ್ ಸ್ಥಾಪನೆ ಆಗುವವರೆಗೆ ಹೋರಾಟ: ಸಿಎಂ ಸಿದ್ದರಾಮಯ್ಯ ಬೆಂಗಳೂರು: ಕೇಂದ್ರ ಸರ್ಕಾರದ...

ಎಟಿಎಂಗೆ ಹಾಕಬೇಕಿದ್ದ ₹1 ಕೋಟಿಗೂ ಅಧಿಕ ನಗದು ದೋಚಿ ಸಿಬ್ಬಂದಿ ಪರಾರಿ

ಎಟಿಎಂಗೆ ಹಾಕಬೇಕಿದ್ದ ₹1 ಕೋಟಿಗೂ ಅಧಿಕ ನಗದು ದೋಚಿ ಸಿಬ್ಬಂದಿ ಪರಾರಿ ಬೆಂಗಳೂರು:...