ರಾಕಿಂಗ್ ಸ್ಟಾರ್ ಯಶ್ ಅವರ ಸ್ಟಾರ್ ಗಿರಿ ಮತ್ತು ಮಾರ್ಕೆಟ್ ಕೆಜಿಎಫ್ ಚಿತ್ರದ ನಂತರ ಬದಲಾಗಿಹೋಗಿದೆ. ಹೌದು ಯಶ್ ಅವರು ಇದೀಗ ನ್ಯಾಷನಲ್ ಸ್ಟಾರ್, ಕೆಜಿಎಫ್ ಮೂಲಕ ದೇಶದಾದ್ಯಂತ ಹೆಸರುಮಾಡಿರುವ ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್2 ನಂತರ ಯಾವ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಅಪಾರ ಅಭಿಮಾನಿಗಳು ಕಾಯುತ್ತಿದ್ದಾರೆ.
ಇನ್ನು ಯಶ್ ಇದುವರೆಗೂ ಸಹ ಈ ಕುರಿತು ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಮಫ್ತಿ ಖ್ಯಾತಿಯ ನರ್ತನ್ ಅವರ ಜೊತೆ ಪ್ಯಾನ್ ಇಂಡಿಯಾ ಸಿನಿಮಾವನ್ನ ಯಶ್ ಅವರು ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಕುರಿತು ಅಧಿಕೃತವಾಗಿ ಯಾವುದೇ ಮಾಹಿತಿ ಸಹ ಹೊರಬಂದಿಲ್ಲ.
ಇಂದು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಟ್ವಿಟರ್ ನಲ್ಲಿ ಅಭಿಮಾನಿಗಳು ಕೇಳಿದ ಕೆಲವೊಂದಿಷ್ಟು ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದಾರೆ. ಈ ವೇಳೆ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಯೊಬ್ಬರು ಸರ್ ನೀವು ಮತ್ತೆ ಯಶ್ ಅವರಿಗೆ ಸಿನಿಮಾ ಮಾಡಿ, ಅದು ಕೂಡ ಪ್ಯಾನ್ ಇಂಡಿಯಾ ಸಿನಿಮಾ ಕಥೆ ಮಾಡಿ ಎಂದು ಸಂತೋಷ್ ಆನಂದ್ ರಾಮ್ ಅವರಿಗೆ ಪ್ರಶ್ನೆಯನ್ನು ಹಾಕಿದರು.
ಇನ್ನು ಯಶ್ ಅಭಿಮಾನಿಯ ಈ ಒಂದು ಪ್ರಶ್ನೆಗೆ ಉತ್ತರಿಸಿರುವ ಸಂತೋಷ್ ಆನಂದ್ ರಾಮ್ ಅವರು ಖಂಡಿತವಾಗಿಯೂ ಯಶ್ ಅವರಿಗೆ ಪ್ಯಾನ್ ಇಂಡಿಯಾ ಸಿನಿಮಾವನ್ನ ಮಾಡುತ್ತೇನೆ ಎಂದು ಉತ್ತರಿಸಿದ್ದಾರೆ. ಈ ಮೂಲಕ ಯಶ್ ಅವರು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಜೊತೆ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ನಂತರ ಮತ್ತೊಮ್ಮೆ ಕೈಜೋಡಿಸಲಿದ್ದಾರೆ ಎಂಬುದು ಕನ್ಫರ್ಮ್ ಆಯ್ತು.