ಕೇಂದ್ರ ಸಚಿವಗೆ ಟಾಂಗ್ ಕೊಟ್ಟ ವಿಹಾರಿ

Date:

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ ಸ್ಮರಣೀಯ ಡ್ರಾ ಸಾಧಿಸುವಲ್ಲಿ ನೆರವಾಗಿದ್ದ ಹೀರೋಗಳಲ್ಲಿ ಹನುಮ ವಿಹಾರಿ ಕೂಡ ಒಬ್ಬರು. 5ನೇ ದಿನ ಹ್ಯಾಮ್‌ಸ್ಟ್ರಿಂಗ್‌ ಇಂಜೂರಿ ನಡುವೆಯೂ ಸತತ ಮೂರು ಗಂಟೆಗಳ ಆಸ್ಟ್ರೇಲಿಯಾ ಮಾರಕ ದಾಳಿಯನ್ನು ಮೆಟ್ಟಿ ನಿಂತು ತಂಡವನ್ನು ಸೋಲಿನಿಂದ ಪಾರು ಮಾಡುವಲ್ಲಿ ವಿಹಾರಿ ಯಶಸ್ವಿಯಾಗಿದ್ದರು.

407 ರನ್‌ ಗಳ ಗುರಿ ಬೆನ್ನತ್ತಿದ ಭಾರತ ತಂಡ ಒಂದು ಹಂತದಲ್ಲಿ 250 ರನ್‌ಗಳಿಗೆ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಆರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಹನುಮ ವಿಹಾರಿ ಮೇಲೆ ಸಾಕಷ್ಟು ಒತ್ತಡವಿತ್ತು. ಪ್ರವಾಸಿ ತಂಡ ಪ್ರತಿ ಹೋರಾಟ ನಡೆಸಿ ಪಂದ್ಯ ಉಳಿಸಿಕೊಳ್ಳುತ್ತದೆಯೆಂದು ಯಾರೂ ನಿರೀಕ್ಷಿಸಿರಲಿಲ್ಲ. ಇನಿಂಗ್ಸ್ ಆರಂಭದಲ್ಲಿಯೇ ವಿಹಾರಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು ಹಾಗೂ ಒಂದು ರನ್‌ಗೂ ಓಡಲಾಗದ ಸ್ಥಿತಿಯಲ್ಲಿದ್ದರು.

ಗಾಯದ ಹೊರತಾಗಿಯೂ ವಿಹಾರಿ, ಆಸ್ಟ್ರೇಲಿಯಾ ದಾಳಿಯ ಎದುರು ರಕ್ಷಣಾತ್ಮಕ ಆಟವಾಡಿದರು ಹಾಗೂ ಆರ್ ಅಶ್ವಿನ್‌ ಜತೆ ಮುರಿಯದ ಆರನೇ ವಿಕೆಟ್‌ಗೆ 62 ರನ್‌ ಕಲೆ ಹಾಕಿದರು. ಸುಮಾರು 161 ಎಸೆತಗಳನ್ನು ಎದುರಿಸಿದ್ದ ಹನುಮ ವಿಹಾರಿ ಗಳಿಸಿದ್ದು, ಕೇವಲ 23 ರನ್‌ ಮಾತ್ರ. ಆದರೆ, ಪಂದ್ಯ ಭಾರತದ ಕೈನಿಂದ ಜಾರದಂತೆ ಅವರು ಮುತುವರ್ಜಿ ವಹಿಸಿದ್ದು ವಿಶೇಷ.

ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಹನುಮ ವಿಹಾರಿ ಆಮೆಗತಿಯ ಆಟಕ್ಕೆ ಕೇಂದ್ರ ಸಚಿವ ಬಾಬುಲ್‌ ಸುರ್ಪಿಯೊ ಟೀಕಿಸಿದ್ದಾರೆ. “107 ಎಸೆತಗಳಲ್ಲಿ 7 ರನ್‌! ಭಾರತ ತಂಡದ ಐತಿಹಾಸಿಕ ಗೆಲುವು ಸಾಧಿಸುವ ಅವಕಾಶವನ್ನು ಮಾತ್ರ ಹನುಮ ಬಿಹಾರಿ ಕೊಂದಿಲ್ಲ, ಆದರೆ ಒಟ್ಟಾರೆ ಕ್ರಿಕೆಟ್ ಅನ್ನೇ ಕೊಲೆ ಮಾಡಿದ್ದಾರೆ. ಗೆಲ್ಲಬೇಕೆಂಬ ಆಯ್ಕೆಯನ್ನೇ ಅವರು ಇಟ್ಟುಕೊಂಡಿಲ್ಲ,” ಎಂದು ಟ್ವೀಟ್‌ ಮಾಡಿದ್ದರು.

ಕೇಂದ್ರ ಸಚಿವರ ಟ್ವೀಟ್‌ಗೆ ಬುಧವಾರ ಎರಡು ಪದಗಳಲ್ಲಿ ಪ್ರತಿಕ್ರಿಯಿಸಿದ ಹನುಮ ವಿಹಾರಿ, ಹೆಸರಿನಲ್ಲಿರುವ ತಪ್ಪನ್ನು ತಿದ್ದಿದರು. “ಹನುಮ ವಿಹಾರಿ,” ಎಂದು ಸುರ್ಪಿಯೊಗೆ ರೀಪ್ಲೆ ಮಾಡಿದರು. ಹನುಮ ವಿಹಾರಿ ಮಾಡಿದ ಟ್ವೀಟ್‌ ಕೆಲವೇ ನಿಮಿಷಗಳಲ್ಲಿ ಫುಲ್‌ ವೈರಲ್‌ ಆಯಿತು. ಸಹ ಆಟಗಾರ ಆರ್‌ ಅಶ್ವಿನ್‌ ಕೂಡ, ವಿಹಾರಿ ಪ್ರತಿಕ್ರಿಯೆಯ ಟ್ವೀಟ್‌ ಸ್ಕ್ರೀನ್‌ ಶಾಟ್‌ ಶೇರ್ ಮಾಡಿದರು. ಟೀಮ್‌ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವಿರೇಂದ್ರ ಸೆಹ್ವಾಗ್‌, “ಅಪ್ನಾ ವಿಹಾರಿ, ಸನ್‌ ಪಾರ್‌ ಭಾರಿ,” ಎಂದು ಟ್ವೀಟ್‌ ಮಾಡಿದರು.

ಸ್ನಾಯುಸೆಳೆತಕ್ಕೆ ಒಳಗಾಗಿರುವ ಹನುಮ ವಿಹಾರಿ ಜ. 15 ರಿಂದ ಬ್ರಿಸ್ಬೇನ್‌ ಗಬ್ಬಾದಲ್ಲಿ ಆರಂಭವಾಗಲಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಯಾಂಕ್‌ ಅಗರ್ವಾಲ್‌ ಅಥವಾ ಪೃಥ್ವಿ ಶಾ ಅವರಲ್ಲಿ ಒಬ್ಬರು ವಿಹಾರಿ ಸ್ಥಾನ ತುಂಬಲಿದ್ದಾರೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...