ತುಮಕೂರು :ಕಂಡಕ್ಟರ್ ಒಬ್ಬ ಕೇವಲ ಒಂದೇ ಒಂದು ರೂಪಾಯಿಗೆ ಪ್ರಯಾಣಿಕನ ಮೇಲೆ ಹಲ್ಲೆ ಮಾಡಿ, ತಲೆ ಒಡೆದಿದ್ದಾನೆ. ಈ ಘಟನೆ ನಡೆದಿರುವುದು ತುಮಕೂರು ಜಿಲ್ಲೆಯಲ್ಲಿ.
ಒಂದು ರೂಪಾಯಿ ಚಿಲ್ಲರೆಗಾಗಿ ಬಸ್ ಕಂಡಕ್ಟರ್ ಪ್ರಯಾಣಿಕನ ತಲೆ ಒಡೆದಿರುವ ಘಟನೆ ಬೆಂಗಳೂರು – ಕೊರಟಗೆರೆ ಹೆದ್ದಾರಿಯ ಚಿಕ್ಕಪಾಲನಹಳ್ಳಿ ಬಳಿ ನಡೆದಿದ್ದು, ಸಾರ್ವಜನಿಕರು ಕಂಡೆಕ್ಟರ್ ವಿರುದ್ಧ ಸಿಡಿದಿದ್ದಾರೆ.
ಪಾವಗಡದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸಲ್ಲಿ ಈ ಘಟನೆ ಸಂಭವಿಸಿದೆ. ಕಂಬಯ್ಯ ಎಂಬ ಪ್ರಯಾಣಿಕ ನಾಗೇನಗಳ್ಳಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿದ್ದರು. ಮಾಕಳಿಗೆ ಟಿಕೆಟ್ ಪಡೆಯಲು ಹಣ ನೀಡಿದ್ದ ಕಂಬಯ್ಯ ಹಣ ನೀಡಿದ್ದಾರೆ. ಆಗ ಒಂದು ರೂ ಕಡಿಮೆ ಇದೆ ಎಂಬ ವಿಚಾರಕ್ಕೆ ಕಂಡಕ್ಟರ್ ಮತ್ತು ಕಂಬಯ್ಯ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಕಂಡಕ್ಟರ್ ಟಿಕೆಟ್ ಮಷಿನ್ನಿಂದ ಕಂಬಯ್ಯನ ತಲೆಗೆ ಹೊಡೆದಿದ್ದು, ತಲೆ ಒಡೆದು ರಕ್ತ ಚಿಮ್ಮಿದೆ. ಗಾಯಾಳು ಕಂಬಯ್ಯನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೇವಲ ಒಂದೇ ಒಂದು ರೂ ಗೆ ಪ್ರಯಾಣಿಕನ ತಲೆ ಒಡೆದ ಕಂಡಕ್ಟರ್!
Date: