ಕೇಸರಿಯನ್ನು ಆಹಾರದಲ್ಲಿ ಬಳಸುವುದು ಆರೋಗ್ಯಕ್ಕೂ ಒಳ್ಳೆಯದು.! ಪ್ರಯೋಜನಗಳು ಇಲ್ಲಿದೆ
ಕೇಸರಿಯನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಹಿಂದಿನ ಕಾಲದಲ್ಲಿ ರಾಣಿಯರು ಕೇಸರಿಯನ್ನು ಬಳಸಿಕೊಂಡು ತಮ್ಮ ಸೌಂದರ್ಯವರ್ಧಿಸಿ ಕೊಳ್ಳುತ್ತಿದ್ದರು. ಇಂದು ಕೂಡ ಕೆಲವೊಂದು ಸೌಂದರ್ಯವರ್ಧಕಗಳಲ್ಲಿ ಕೇಸರಿ ಬಳಕೆ ಮಾಡುವರು. ನೇರವಾಗಿ ಕೇಸರಿ ಖರೀದಿ ಮಾಡುವುದು ತುಂಬಾ ದುಬಾರಿ. ಹೀಗಾಗಿ ಕೆಲವೊಂದು ಗಿಡಮೂಲಿಕೆ ಕ್ರೀಂ ಹಾಗೂ ಲೋಷನ್ ಗಳಲ್ಲಿ ಇದನ್ನು ಬಳಕೆ ಮಾಡಿರುವರು. ಇದನ್ನು ನೀವು ಬಳಸಬಹುದು.
ಕೇಸರಿ ಖಿನ್ನತೆ, ಒತ್ತಡ ಶಮನಕಾರಿ ಗುಣಗಳನ್ನು ಹೊಂದಿದ್ದು, ಒಂದು ಕಪ್ ಹಾಲಿಗೆ ಬೇರೆಸಿ ಕುಡಿಯುವುದರಿಂದ ದೂರವಾಗುತ್ತವೆ.
ಮಹಿಳೆಯರಿಗೆ ಮುಟ್ಟಿನ ನೋವಿನಿಂದ ಉತ್ತಮ ಪರಿಹಾರವನ್ನು ನೀಡುತ್ತದೆ. ಆದ್ದರಿಂದ ಮುಟ್ಟಿನ ಸಮಯದಲ್ಲಿ ಒಂದು ಕಪ್ ಬಿಸಿ ಕೇಸರಿ ಚಹಾವು ನೋವನ್ನು ನಿವಾಸುವುದರೊಂದಿಗೆ ದೇಹವನ್ನು ಬಲಪಡಿಸುತ್ತದೆ.
ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ರಕ್ತನಾಳಗಳನ್ನು ಆರೋಗ್ಯ ವಾಗಿಡಲು ಸಹಾಯ ಮಾಡುತ್ತದೆ. ಇದು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.
ಹಾಲಿನಲ್ಲಿ ಒಂದು ಚಿಟಿಕೆ ಕೇಸರಿ ಕುಡಿಯುವುದರಿಂದ ನರಮಂಡಲವನ್ನು ಬಲಪಡಿಸುತ್ತದೆ,
ನಿಯಮಿತವಾಗಿ ಸೇವಿಸಿದಾಗ, ಕೇಸರಿಯು ಮೂಡ್ ಸ್ವಿಂಗ್ಸ್, ಒತ್ತಡವನ್ನು ಕಡಿಮೆ ಮಾಡುತ್ತದೆ. ವಿಶೇಷವಾಗಿ ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ ಅಥವಾ PMS ಅನುಭವಿಸುವ ಮಹಿಳೆಯರು ಕೇಸರಿ ಸೇವಿಸಿದರೆ ಉತ್ತಮ.