ಸಿಡ್ನಿ: ಭಾರತದಿಂದ ತಲೆಮರೆಸಿಕೊಂಡು ಈಕ್ವೆಡಾರ್‌ನಲ್ಲಿ ಆಶ್ರಯ ಪಡೆದಿರುವುದಾಗಿ ನಂಬಲಾಗಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ, ಇದೀಗ ತನ್ನ ದೇಶ ಕೈಲಾಸಕ್ಕೆ ಬರಲು ವೀಸಾ ಅರ್ಜಿ ಸಲ್ಲಿಸುವಂತೆ ತನ್ನ ಭಕ್ತರಲ್ಲಿ ಮನವಿ ಮಾಡಿದ್ದಾನೆ.
ನಿತ್ಯಾನಂದನ ಕೈಲಾಸಕ್ಕೆ ಹೋಗುವ ಬಗೆ ಹೇಗೆ?: ವೀಸಾ ಆಫರ್ ಕೊಟ್ಟ ಸ್ವಯಂಘೋಷಿತ ದೇವಮಾನವ!
ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ನಿತ್ಯಾನಂದ, ಕೈಲಾಸಕ್ಕೆ ಬಂದು ತಲುಪುವ ಬಗೆಯನ್ನೂ ಕೂಡ ವಿವರಿಸಿದ್ದಾನೆ. ಕೈಲಾಸದ ಮಾರ್ಗನಕ್ಷೆ ಬಿಡುಗಡೆ ಮಾಡಿರುವ ನಿತ್ಯಾನಂದ ಸೀಮಿತ ವೀಸಾಗಳನ್ನು ಮಾತ್ರ ಸ್ವೀಕರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾನೆ.
ಈಕ್ವೆಡಾರ್‌ನಲ್ಲಿ ಖಾಸಗಿ ದ್ವೀಪ ಖರೀದಿಸಿರುವ ನಿತ್ಯಾನಂದ, ಕೈಲಾಸ ಎಂಬ ಹೊಸ ದೇಶ ನಿರ್ಮಾಣ ಮಾಡಿದ್ದಾನೆ. ಅಲ್ಲದೇ ತನ್ನ ದೇಶಕ್ಕೆ ಮಾನ್ಯತೆ ನೀಡುವಂತೆ ವಿಶ್ವಸಂಸ್ಥೆಗೂ ಪತ್ರ ಬರೆದಿದ್ದಾನೆ ಎಂಬ ವರದಿಗಳು ಬಂದಿದ್ದವು.
ಆದರೆ ನಿತ್ಯಾನಂದ ಯಾವುದೇ ದ್ವೀಪ ಖರೀದಿ ಮಾಡಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿರುವ ಈಕ್ವೆಡಾರ್ ಸರ್ಕಾರ, ಆತ ಈಕ್ವೆಡಾರ್‌ನಲ್ಲಿ ಇಲ್ಲ ಎಂದು ಹೇಳಿದೆ.
ಟ್ರಿನಿಡಾಡ್ ದ್ವೀಪಗಳ ಸಮೀಪ ಖಾಸಗಿ ದ್ವೀಪ ಖರೀದಿಸಿ ಹೊಸ ದೇಶ ನಿರ್ಮಿಸಲಾಗುತ್ತಿದೆ. ಇದಕ್ಕೆ ಕೈಲಾಸ ಹಿಂದೂ ರಾಷ್ಟ್ರ ಎಂದು ನಾಮಕರಣ ಮಾಡಲಾಗಿದೆ ಎಂದು ನಿತ್ಯಾನಂದ ಸ್ವಾಮಿ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಭಾರತದಲ್ಲಿ ಅತ್ಯಾಚಾರ ಆರೋಪ ಎದುರಿಸುತ್ತಿದ್ದ ನಿತ್ಯಾನಂದ, ದೇಶದಿಂದ ತಲೆಮರೆಸಿಕೊಂಡಿದ್ದಾನೆ. ಆದರೆ ಆತ ಎಲ್ಲಿದ್ದಾನೆ ಎಂಬುದು ಇದುವರೆಗೂ ಯಾವುದೇ ಖಚಿತ ಮಾಹಿತಿ ಇಲ್ಲವಾಗಿದೆ.
2008ರ ನವೆಂಬರ್ 26ರಂದು ಮುಂಬೈನ ತಾಜ್ ಹೋಟೆಲ್ ಮೇಲೆ ನಡೆದ ಉಗ್ರರು ದಾಳಿ, ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಉಗ್ರರ ಈ ದುಷ್ಕೃತ್ಯಕ್ಕೆ ಅನೇಕರು ಬಲಿಯಾದರು. ಅದರಲ್ಲಿ ಪೊಲೀಸರು, ಸೈನಿಕರು ಕೂಡ ಇದ್ದರು. ಹಾಗೇ ಸಾವನ್ನಪ್ಪಿದವರಲ್ಲಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಕೂಡ ಒಬ್ಬರು. ಇದೀಗ ಅವರ ಜೀವನದ ಕೆಲವು ಅಂಶಗಳನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ನಟ ಮಹೇಶ್ ಬಾಬು ‘ಮೇಜರ್’ ಸಿನಿಮಾ ನಿರ್ಮಿಸಿದ್ದಾರೆ. ಅದರಲ್ಲಿ ಹೀರೋ ಆಗಿ ‘ಕ್ಷಣಂ’, ‘ಗೂಡಚಾರಿ’, ‘ಎವರು’ ಖ್ಯಾತಿಯ ಅಡಿವಿ ಶೇಷ್ ನಟಿಸಿದ್ದಾರೆ. ಇಂದು (ಡಿ.17) ಅವರ ಜನ್ಮದಿನ. ಆ ಹಿನ್ನೆಲೆಯಲ್ಲಿ ‘ಮೇಜರ್’ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ.
ಕೈಯಲ್ಲಿ ಗನ್ ಹಿಡಿದು, ಕಮಾಂಡೋ ಗೆಟಪ್‌ನಲ್ಲಿ ನಟ ಅಡಿವಿ ಶೇಷ್ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಸಖತ್ ಆಗಿಯೇ ಮಿಂಚಿದ್ದಾರೆ. ಶಶಿಕಿರಣ್ ತಿಕ್ಕಾ ಇದರ ನಿರ್ದೇಶನ ಮಾಡಿದ್ದಾರೆ. ಇನ್ನು, ನಿರ್ಮಾಪಕ ಮಹೇಶ್ ಬಾಬು, ಈ ಸಿನಿಮಾದ ಫಸ್ಟ್ ಲುಕ್ ಶೇರ್ ಮಾಡಿಕೊಂಡು, ಅಡಿವಿ ಶೇಷ್‌ಗೆ ಜನ್ಮದಿನ ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್ನು, ಈ ಸಿನಿಮಾಗೆ ಮಹೇಶ್ ಜೊತೆ ಸೋನಿ ಪಿಕ್ಚರ್ಸ್ ಪ್ರೊಡಕ್ಷನ್ಸ್ ಸಂಸ್ಥೆ ಕೂಡ ಹಣ ಹಾಕಿದೆ. ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ಸಿದ್ಧಗೊಳ್ಳಲಿರುವ ಈ ಸಿನಿಮಾದ ಶೇ.50ರಷ್ಟು ಚಿತ್ರೀಕರಣ ಲಾಕ್‌ಡೌನ್‌ಗಿಂತ ಮೊದಲೇ ಕಂಪ್ಲೀಟ್ ಆಗಿತ್ತು.
ಸಂದೀಪ್ ಉನ್ನಿಕೃಷ್ಣನ್ ಅವರ ಪಾತ್ರವನ್ನು ಮಾಡುವುದಕ್ಕಾಗಿ ಅಡಿವಿ ಶೇಷ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿರುವ ಸಂದೀಪ್ ಅವರ ಪೋಷಕರನ್ನು ಭೇಟಿ ಮಾಡಿದ್ದರಂತೆ ಅವರು. ಸಂದೀಪ್ ಅವರ ಬದುಕಿನ ಮತ್ತೊಂದು ಆಯಾಮವನ್ನು ಈ ಸಿನಿಮಾ ಮೂಲಕ ತೋರಿಸುವುದಾಗಿ ತಂಡ ಹೇಳಿಕೊಂಡಿದೆ. ಶೋಭಿತಾ ಧುಲಿಪಲಾ, ಸಾಯಿ ಮಂಜ್ರೇಕರ್ ಕೂಡ ‘ಮೇಜರ್’ನಲ್ಲಿ ಬಣ್ಣ ಹಚ್ಚಿದ್ದಾರೆ.
ಈ ಬಗ್ಗೆ ಅಡಿವಿ ಶೇಷ್ ಹಿಂದೊಮ್ಮೆ ಹೀಗೆ ಹೇಳಿಕೊಂಡಿದ್ದರು. ‘2008ರ ನವೆಂಬರ್ 27ರಂದು ಮೊದಲ ಬಾರಿಗೆ ಅವರ ಫೋಟೋ ಟಿವಿ ಚಾನಲ್‌ಗಳಲ್ಲಿ ಬಿತ್ತರವಾದಾಗ ನಾನು ಸ್ಯಾನ್ ಫ್ರಾನ್ಸಿಸ್ಕೋನಲ್ಲಿದ್ದೆ. ಅವರನ್ನು ನೋಡಿದಾಗ ನಮ್ಮ ಕುಟುಂಬದ ಒಬ್ಬ ಸದಸ್ಯರೇನೋ ಎನಿಸಿತು. ಆ ಪಾಸ್‌ಪೋರ್ಟ್ ಸೈಜ್ ಫೋಟೋದಲ್ಲಿ ಅವರ ಕಣ್ಣುಗಳನ್ನು ಗಮನಿಸಿದರೆ ಅವರಲ್ಲಿ ಒಂದು ಮ್ಯಾಡ್‌ನೆಸ್, ಪ್ಯಾಷನ್ ಮತ್ತು ಸ್ಪಿರಿಟ್ ಕಾಣಿಸಿತು. ಆಗಲೇ ನನಗೆ ಅವರ ಬಗ್ಗೆ ತಿಳಿದುಕೊಳ್ಳಬೇಕು ಎನಿಸಿತು’ ಎಂದು ಮಾಹಿತಿ ನೀಡಿದ್ದರು ಅಡಿವಿ ಶೇಷ್.
Happy to present the first look of #Major!! Wishing you a very happy birthday @AdiviSesh. I'm sure Major will go down as one of your best performances. Good luck and happiness always! ???? pic.twitter.com/q5BLRj8ewn
— Mahesh Babu (@urstrulyMahesh) December 17, 2020