ಕೊನೆಗೂ ಸೇಲಾದ ಅರ್ಜುನ್ ತೆಂಡೂಲ್ಕರ್

Date:

ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿ ಸಲುವಾಗಿ ಆಟಗಾರರ ಹರಾಜು ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದ್ದು, ಎಲ್ಲಾ 8 ತಂಡಗಳು ತಮ್ಮ ಲೆಕ್ಕಾಚಾರಗಳಿಗೆ ತಕ್ಕಂತೆ ಹಣದ ಹೊಳೆಯನ್ನೇ ಹರಿಸಿ ಅಗತ್ಯದ ಆಟಗಾರರನ್ನು ಖರೀದಿ ಮಾಡಿದೆ.

ಐಪಿಎಲ್‌ 2021 ಟೂರ್ನಿಯ ಆಟಗಾರರ ಹರಾಜಿನಲ್ಲಿ ಈ ಬಾರಿ ಹಲವು ಆಟಗಾರರು ಭಾರಿ ನಿರೀಕ್ಷೆ ಮೂಡಿಸಿದ್ದರು. ಆದರೆ ನಿರೀಕ್ಷೆಗೂ ಮೀರಿದಂತೆ ದಾಖಲೆಯ 16.25 ಕೋಟಿ ರೂ.ಗಳ ಭಾರಿ ಮೊತ್ತ ಪಡೆದ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್‌ ಕ್ರಿಸ್‌ ಮಾರಿಸ್‌ ರಾಜಸ್ಥಾನ್‌ ರಾಯಲ್ಸ್‌ ತಂಡದ ಪಾಲಾದರು.

ಇನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಕೂಡ ಹಣದ ಹೊಳೆ ಹರಿಸಲು ಹಿಂದೇಟಾಕಲಿಲ್ಲ. ಹಲವು ಆಟಗಾರರ ಖರೀದಿಗೆ ಬಿಡ್ಡಿಂಗ್‌ ವಾರ್‌ ನಡೆಸಿದ್ದ ಆರ್‌ಸಿಬಿ ಕೊನೆಗೆ 2 ಆಟಗಾರರ ಖರೀದಿಗೆ ಬರೋಬ್ಬರಿ 29.25 ಕೋಟಿ ರೂ. ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿತು.

ಈ ಬಾರಿಯ ಹರಾಜಿನಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ಭಾರತದ ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರ ಪುತ್ರ ಅರ್ಜುನ್ ತೆಂಡೂಲ್ಕರ್‌ ಆರಂಭದಲ್ಲಿ ಮಾರಾಟವಾಗದೇ ಉಳಿದಿದ್ದರು. ಬಳಿಕ ಹರಾಜಿನ ಅಂತ್ಯದಲ್ಲಿ ರಾಪಿಡ್‌ ಆಕ್ಷನ್ ನಡೆಸಿದ ಸಂದರ್ಭದಲ್ಲಿ ಕೊನೆಯ ಆಟಗಾರನಾಗಿ ಕಾಣಿಸಿಕೊಂಡ ಅರ್ಜುನ್ ಅವರನ್ನು ನಿರೀಕ್ಷೆಯಂತೆ ಮುಂಬೈ ಇಂಡಿಯನ್ಸ್‌ ತಂಡ ಮೂಲ ಬೆಲೆಯಾದ 20 ಲಕ್ಷ ರೂ. ನೀಡಿ ತನ್ನ ತೆಕ್ಕೆಗೆ ತೆಗೆದುಕೊಂಡಿತು.

ಈ ವರ್ಷ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ ಮುಂಬೈ ತಂಡದ ಪರ ಆಡಿದ್ದ 22 ವರ್ಷದ ಎಡಗೈ ಆಲ್‌ರೌಂಡರ್‌ 2 ವಿಕೆಟ್‌ ಕೂಡ ಪಡೆಯುವ ಮೂಲಕ ಐಪಿಎಲ್‌ ಆಟಗಾರರ ಹರಾಜಿನಲ್ಲಿ ಪಾಲ್ಗೊಳುವ ಅರ್ಹತೆ ಸಂಪಾದಿಸಿದ್ದರು. ಆದರೆ, ಹರಾಜಿನಲ್ಲಿ ಮುಂಬೈ ತಂಡದ ಹೊರತಾಗಿ ಬೇರೆ ಯಾವ ತಂಡಗಳೂ ಕೂಡ ಅರ್ಜುನ್‌ ಖರೀದಿಗೆ ಆಸಕ್ತಿ ತೋರಲಿಲ್ಲ.

ಐದು ಬಾರಿ ಐಪಿಎಲ್‌ ಟ್ರೋಫಿ ಎತ್ತಿ ಹಿಡಿದು ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ರೋಹಿತ್ ಶರ್ಮಾ ಸಾರಥ್ಯದ ಮುಂಬೈ ಇಂಡಿಯನ್ಸ್‌, ಈ ಬಾರಿ ಅತ್ಯಂತ ಲೆಕ್ಕಾಚಾರದ ಖರೀದಿ ಮಾಡಿದೆ. ಹರಾಜಿಗೂ ಮುನ್ನ 8 ಕೋಟಿ ರೂ. ವೇತನ ಪಡೆದಿದ್ದ ನೇತನ್‌ ಕೌಲ್ಟರ್‌ ನೈಲ್‌ ಅವರನ್ನು ಬಿಡುಗಡೆ ಮಾಡಿದ್ದ ಮುಂಬೈ, ಇದೀಗ 5 ಕೋಟಿಗೆ ಕೌಲ್ಟರ್‌ನೈಲ್‌ ಅವರನ್ನು ಮರಳಿ ಖರೀದಿಸಿ ಉಳಿದ ಮೊತ್ತದಲ್ಲಿ ವೇಗಿ ಆಡಮ್‌ ಮಿಲ್ನ್‌ (3.2 ಕೋಟಿ ರೂ.) ಅವರನ್ನು ಖರೀದಿ ಮಾಡಿದೆ.

ಹರಾಜಿನಲ್ಲಿ ಮುಂಬೈ ಇಂಡಿಯನ್ಸ್‌ ಖರೀದಿಸಿದ ಆಟಗಾರರು

ನೇಥನ್‌ ಕೌಲ್ಟರ್‌ ನೈಲ್ (5 ಕೋಟಿ ರೂ.) ಆಡಮ್‌ ಮಿಲ್ನ್‌ (3.2 ಕೋಟಿ ರೂ.) ಪಿಯೂಶ್‌ ಚಾವ್ಲಾ (2.4 ಕೊಟಿ ರೂ.) ಜೇಮ್ಸ್‌ ನೀಶಮ್‌ (50 ಲಕ್ಷ ರೂ.) ಮಾರ್ಕೊ ಜೆನ್ಸನ್ (20 ಲಕ್ಷ ರೂ.) ಯುಧವೀರ್‌ ಸಿಂಗ್‌ (20 ಲಕ್ಷ ರೂ.) ಮಾರ್ಕೊ ಜೆನ್ಸನ್ (20 ಲಕ್ಷ ರೂ.) ಅರ್ಜುನ್ ತೆಂಡೂಲ್ಕರ್‌ (20 ಲಕ್ಷ ರೂ.)

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...