ಕೊನೆಯ ಟಿ20ಗೆ ಪಂತ್​ ಹೊರಗಿಟ್ಟು ರಾಹುಲ್​ ಗೆ ಸ್ಥಾನ?

Date:

ಇಂಗ್ಲೆಂಡ್​ನಲ್ಲಿ ನಡೆದ ಏಕದಿನ ವಿಶ್ವಕಪ್​ ಮುಕ್ತಾಯದ ಬೆನ್ನಲ್ಲೇ ಭಾರತ ವೆಸ್ಟ್​ ಇಂಡೀಸ್ ಪ್ರವಾಸದಲ್ಲಿದೆ. 3 ಪಂದ್ಯಗಳ ಟಿ20 ಸರಣಿಯಲ್ಲಿ ಎರಡು ಮ್ಯಾಚ್​ಗಳನ್ನು ಭಾರತ ಗೆದ್ದಿದೆ. ಭಾರತ ಎರಡೂ ಪಂದ್ಯಗಳನ್ನು ಗೆದ್ದಿದ್ದರೂ ಕೂಡ ಕೆಲವು ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಅದರಲ್ಲೂ ಬ್ಯಾಟ್ಸ್​ಮನ್​ಗಳಿಂದ ಅಂಥಾ ಆಟ ಬಂದಿಲ್ಲ. ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ನೀಡಿದ್ದ 95ರನ್​ಗಳನ್ನು ಮುಟ್ಟಲು ಹರಸಾಹಸ ಪಟ್ಟಿತ್ತು. ರೋಹಿತ್ ಶರ್ಮಾ ಮಾಡಿದ್ದ 24ರನ್ನೇ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು..! ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 164ರನ್​ಗಳನ್ನು ಮಾಡಿತು. ಇಲ್ಲಿಯೂ ರೋಹಿತ್ ಶರ್ಮಾ (67) ಮಾಡಿದ್ದೇ ಹೈಯಸ್ಟ್ ಸ್ಕೋರ್. ಅದ್ಬಿಟ್ಟರೆ ನಾಯಕ ವಿರಾಟ್ ಕೊಹ್ಲಿ ಮಾಡಿದ 28ರನ್ನೇ ಹೈಯಸ್ಟ್.

ಧೋನಿ ಅನುಪಸ್ಥಿತಿಯಲ್ಲಿ ಮೊದಲ ಆಯ್ಕೆಯ ವಿಕೆಟ್​ ಕೀಪರ್ ಆಗಿ ತಂಡದಲ್ಲಿರುವ ರಿಷಭ್ ಪಂತ್ ಸಿಕ್ಕ ಎರಡೂ ಪಂದ್ಯದಲ್ಲೂ ಸಂಪೂರ್ಣ ವಿಫಲರಾಗಿದ್ದಾರೆ. ವರ್ಲ್ಡ್​ಕಪ್​ ನಲ್ಲಿ ಸಿಕ್ಕಿದ್ದ ಅವಕಾಶವನ್ನೂ ಅವರು ಸಮರ್ಥವಾಗಿ ಬಳಸಿಕೊಂಡಿರಲಿಲ್ಲ. ಈಗ ಎರಡೂ ಪಂದ್ಯಗಳಲ್ಲೂ ಎಡವಿದ್ದಾರೆ. ಹೀಗಾಗಿ ಕನ್ನಡಿಗ ಕೆ.ಎಲ್ ರಾಹುಲ್ ಅವರು ಕೀಪಿಂಗ್ ಕೂಡ ಮಾಡಬಲ್ಲವರಾಗಿರುವುದರಿಂದ ಪಂತ್ ಬದಲಿಗೆ ರಾಹುಲ್ ಅವರನ್ನು ಆಡುವ 11ರ ಬಳಗದಲ್ಲಿ ಆಡಿಸುವ ಸಾಧ್ಯತೆ ಹೆಚ್ಚಿದೆ. ಇನ್ನೊಬ್ಬ ಕನ್ನಡಿಗ ಮನೀಷ್ ಪಾಂಡೆ ಕೂಡ ಅವಕಾಶ ಕೈ ಚೆಲ್ಲಿದ್ದಾರೆ. ಆದ್ದರಿಂದ ಅವರನ್ನು ಕೂರಿಸಿ ರಾಹುಲ್ ಆಡಿಸಿದರೆ, ಪಂತ್ ಉಳಿದು ಕೊಳ್ಳಬಹುದು.
ಇನ್ನು ಈಗಾಗಲೇ ಸರಣಿ ಗೆದ್ದಿರುವುದರಿಂದ ಬೌಲಿಂಗ್ ವಿಭಾಗದಲ್ಲಿ ರಾಹುಲ್ ಚಹಾರ್ ಮತ್ತು ದೀಪಕ್ ಚಹಾರ್​​ಗೆ ಮಣೆ ಹಾಕಬಹುದು..

Share post:

Subscribe

spot_imgspot_img

Popular

More like this
Related

ಮೋಂಥಾ ಚಂಡಮಾರುತ: ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಾದ್ಯಂತ ಭಾರೀ ಮಳೆ

ಮೋಂಥಾ ಚಂಡಮಾರುತ: ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಾದ್ಯಂತ ಭಾರೀ ಮಳೆ ಬೆಂಗಳೂರು:...

ರೆಡ್ ವೈನ್ ಕುಡಿಯುವುದು ನಿಜವಾಗಿಯೂ ಹೃದಯಕ್ಕೆ ಒಳ್ಳೆಯದೇ? ಇಲ್ಲಿದೆ ಮಾಹಿತಿ

ರೆಡ್ ವೈನ್ ಕುಡಿಯುವುದು ನಿಜವಾಗಿಯೂ ಹೃದಯಕ್ಕೆ ಒಳ್ಳೆಯದೇ? ಇಲ್ಲಿದೆ ಮಾಹಿತಿ ರೆಡ್ ವೈನ್‌...

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌ ಸೇರಿ 70 ಮಂದಿಗೆ ಗೌರವ

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌...

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ ಕಲಬುರಗಿ: ಚಿತ್ತಾಪುರದಲ್ಲಿ ನವೆಂಬರ್...