ಕೊಪ್ಪಳ: ಹೃದಯಾಘಾತದಿಂದ ರಂಗಭೂಮಿ ಕಲಾವಿದ ಸಾವು..!
ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಹೃದಯಾಘಾತದ ಮರಣ ಮೃದಂಗ ಆವರಿಸಿದ್ದು, ಹೃದಯಾಘಾತದಿಂದ ರಂಗಭೂಮಿ ಕಲಾವಿದ ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ನಡೆದಿದೆ.
ರಂಗಭೂಮಿ ಕಲಾವಿದ ನಿಂಗನಗೌಡ (65 ) ಮೃತ ದುರ್ಧೈವಿಯಾಗಿದ್ದು, ಗ್ರಾಮದಲ್ಲಿ ಓಡಾಡುವಾಗ ನಿಂಗನಗೌಡಗೆ ಎದೆ ನೋವು ಕಾಣಿಸಿಕೊಂಡಿದೆ.
ರಸ್ತೆ ಪಕ್ಕ ಮಲಗಿ ಸುಧಾರಿಸಿಕೊಂಡು ಮನೆಗೆ ತೆರಳುತ್ತಿದ್ದಂತಯೇ ಕುಸಿದ ಬಿದ್ದು ಸಾವನ್ನಪ್ಪದ್ದಾರೆ. ಎದೆ ನೋವಿನಿಂದ ಪರದಾಡಿದ ನಿಂಗನಗೌಡ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.