ಕೊರೋನಾ ಮಹಾಮಾರಿ ಇಡೀ ವಿಶ್ವವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಕೊರೋನಾ ಕೋಲಾಹಲಕ್ಕೆ ಜನ ನಲುಗಿದ್ದಾರೆ. ರಾಜ್ಯದಲ್ಲೂ ಕೊರೋನಾ ಆತಂಕ ಸೃಷ್ಠಿಸಿದೆ. ಕೊರೋನಾ ಭಯದಿಂದ ಕರ್ನಾಟಕ ಸೇರಿದಂತೆ ದೇಶ ಮತ್ತು ರಾಜ್ಯದ ನಾನಾ ಕಡೆಗಳಲ್ಲಿ ಸಾರ್ವಜನಿಕ ಸಂಪರ್ಕಕ್ಕೆ ಕಡಿವಾಣ ಹಾಕಲಾಗಿದೆ. ಶಾಲಾ -ಕಾಲೇಜುಗಳಿಗೆ ರಜೆ ನೀಡಲಾಗಿದೆ, ಅನೇಕ ಕಂಪನಿಗಳು ವರ್ಕ್ಫ್ರಂ ಹೋಮ್ ಮೊರೆ ಹೋಗಿವೆ. ಜನ ಸ್ವಯಂ ಪ್ರೇರಿತವಾಗಿ ಗೃಹಬಂಧನ ವಿಧಿಸಿಕೊಂಡಿದ್ದಾರೆ.
ಕ್ರಿಕೆಟ್ ಸೇರಿದಂತೆ ನಾನಾ ಕ್ರೀಡಾ ಟೂರ್ನಿಗಳಿಗೂ ಕೊರೋನಾ ಅಡ್ಡಿಯಾಗಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿ ರದ್ದಾಗಿದೆ. ಮಾರ್ಚ್ 29ರಿಂದ ಆರಂಭವಾಗಬೇಕಿದ್ದ ಐಪಿಎಲ್ ಏಪ್ರಿಲ್ 15ಕ್ಕೆ ಮುಂದೂಡಲ್ಪಟ್ಟಿದೆ. ಅಷ್ಟೇ ಅಲ್ಲೆ ಸಾರ್ವಜನಿಕ ಸಭೆ, ಸಮಾರಂಭ, ಜಾತ್ರೆ ಮೊದಲಾದವುಗಳಿಗೂ ತಾತ್ಕಾಲಿಕ ಬ್ರೇಕ್ ಬಿದ್ದಿದೆ.
ಕೊರೋನಾ ಬಗ್ಗೆ ಸಾಕಷ್ಟು ಮುಂಜಾಗೃತ ಕ್ರಮಗಳನ್ನು, ಜಾಗೃತಿಯನ್ನುವಹಿಸಲಾಗುತ್ತಿದೆ. ಕ್ರಿಕೆಟಿಗ, ಕನ್ನಡಿಗ ಕೆ.ಎಲ್ ರಾಹುಲ್ ಕೂಡ ಜನರಿಗೆ ಕೊರೋನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆ್ಯಕ್ಟಿವ್ ಆಗಿರುವ ರಾಹುಲ್ ಟ್ವೀಟ್ ಮೂಲಕ ಜಾಗೃತಿ ಮೂಡಿಸಿದ್ದಾರೆ.
`` ಪರೀಕ್ಷಾ ಸಮಯದಲ್ಲಿ ನಾವು ಸ್ಟ್ರಾಂಗ್ ಆಗಿರ್ಬೇಕು. ಪರಸ್ಪರ ಕಾಳಜಿವಹಿಸೋಣ. ಪ್ರತಿಯೊಬ್ಬರು ಆರೋಗ್ಯ ತಜ್ಞರು ನೀಡಿದ ಸೂಚನೆಗಳನ್ನು ಅನುಸರಿಸಿ ಮತ್ತು ಸುರಕ್ಷಿತವಾಗಿರೋಣ” ಎಂಬ ಸಂದೇಶವನ್ನು ನೀಡಿದ್ದಾರೆ.
In these testing times let's stay strong and care for each other. Urging everyone to follow the instructions given by health experts and stay safe #coronavirus.
— K L Rahul (@klrahul) March 14, 2020
ಹೀಗೆ ಸ್ಟಾರ್ಗಳು ಇಂಥಾ ಸಮಾಜಮುಖಿ ಪೋಸ್ಟ್ಗಳನ್ನು ಮಾಡುವುದರಿಂದ ಜನ ಕೂಡ ಅದಕ್ಕೆ ಸ್ಪಂದಿಸುತ್ತಾರೆ. ಹಾಗೂ ಕಡಿಮೆ ಅವಧಿಯಲ್ಲಿ ಹೆಚ್ಚು ಜನರನ್ನು ತಲುಪುತ್ತದೆ.