ಕೊರೋನಾ ಭೀತಿಯಿಂದ ಮದುಮಗ ಎಸ್ಕೇಪ್!

Date:

ತ್ರಿಶೂರ್ : ಚೀನಾದಲ್ಲಿ ಕಂಡು ಬಂದಿರೋ ಮಹಾಮಾರಿ ಕೊರೋನಾ ಬಗ್ಗೆ ಎಲ್ಲೆಡೆ ಆತಂಕ ನಿರ್ಮಾಣವಾಗಿದೆ. ನಮ್ಮ ಪಕ್ಕದ ರಾಜ್ಯ ಕೇರಳದಲ್ಲೂ ಈಗಾಗಲೇ ಮೂರು ಕೊರೋನ್ ಪ್ರಕರಣಗಳು ಬೆಳಕಿಗೆ ಬಂದಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ಈ ರಕ್ಕಸ ಕೊರೋನ್​ಗೆ ಹೆದರಿ ಮದುಮಗ ಪರಾರಿಯಾಗಿರುವ ಘಟನೆ ಕೂಡ ಕೇರಳದಲ್ಲಿ ನಡೆದಿದೆ. 

ಯೆಸ್​ ಕೊರೋನಾ ಭೀತಿಯಲ್ಲಿ ಮದುಮಗ ಪರಾರಿಯಾಗಿ ಆತಂಕ ಸೃಷ್ಟಿಸಿದ್ದಾನೆ! ತ್ರಿಶೂರ್ ಮೂಲದ ವ್ಯಕ್ತಿ ಪ್ರಸ್ತುತ ಚೀನಾದಲ್ಲಿ ಉದ್ಯೋಗದಲ್ಲಿದ್ದಾನೆ, ಆ ಯುವಕನ ಮದುವೆ ಫಿಕ್ಸ್ ಆಗಿದೆ. ಮದುವೆಗಾಗಿ ಊರಿಗೆ ಆತ ಬಂದಿದ್ದು, ಕೊರೋನಾ ವೈರಸ್ ಶಂಕೆಯಲ್ಲಿ ಪ್ರತ್ಯೇಕವಾಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ ತಪಾಸಣೆ ನಡೆಸಲಾಗಿತ್ತು.
ಆತ ಆಸ್ಪತ್ರೆಯಲ್ಲಿದ್ದರೂ ಪೂರ್ವನಿಗದಿ ದಿನದಂದೇ ಸಂಬಂಧಿಕರನ್ನು, ಆಪ್ತರನ್ನು ರಿಸೆಪ್ಶನ್ನಿಗೆ ಆಹ್ವಾನಿಸಿದ್ದರು. ವರ ಇಲ್ಲದಿದ್ದರೂ ವಧುವಿನ ಮನೆಯವರು ರಿಸೆಪ್ಷನ್ ಮಾಡಿದ್ದರು. ಆದರೆ, ಫೆಬ್ರವರಿ ೪ಕ್ಕೆ ನಿಗದಿಯಾಗಿದ್ದ ಮದುವೆಯನ್ನು ಮುಂದೂಡಿ, ವರನ ತಪಾಸಣೆ ಮುಗಿದು, ರಿಪೋರ್ಟ್ ಬಂದ ನಂತರ ಮದುವೆಯ ಹೊಸ ದಿನಾಂಕವನ್ನು ನಿಗದಿಪಡಿಸಲು ನಿರ್ಧರಿಸಿದ್ದರು. ಆದರೆ ರಿಸೆಪ್ಶನ್ನಿಗೆ ಬರುತ್ತೇನೆಂದಿದ್ದ ಯುವಕ ಕೊರೊನಾ ಭೀತಿಯಿಂದ ಬರಲೇ ಇಲ್ಲ ಎಂದು ವರದಿಯಾಗಿದೆ.

Share post:

Subscribe

spot_imgspot_img

Popular

More like this
Related

ನಟಿ ರನ್ಯಾ ರಾವ್ ಅಪ್ಪ ಐಜಿಪಿ ರಾಮಚಂದ್ರರಾವ್ ರಾಸಲೀಲೆ ಬಹಿರಂಗ!

ನಟಿ ರನ್ಯಾ ರಾವ್ ಅಪ್ಪ ಐಜಿಪಿ ರಾಮಚಂದ್ರರಾವ್ ರಾಸಲೀಲೆ ಬಹಿರಂಗ! ಬೆಂಗಳೂರು: ಡಿಜಿಪಿ...

ಬೆಳೆ ವಿಮೆ ಯೋಜನೆ ಯಶಸ್ಸು: ಕೇಂದ್ರದಿಂದ ಕರ್ನಾಟಕ ಸರ್ಕಾರಕ್ಕೆ ಪ್ರಶಸ್ತಿ

ಬೆಳೆ ವಿಮೆ ಯೋಜನೆ ಯಶಸ್ಸು: ಕೇಂದ್ರದಿಂದ ಕರ್ನಾಟಕ ಸರ್ಕಾರಕ್ಕೆ ಪ್ರಶಸ್ತಿ ಬೆಂಗಳೂರು: ಪ್ರಧಾನಮಂತ್ರಿ...

ಸಿಬಿಐ ತನಿಖೆ ವಿಚಾರ: ಬಳ್ಳಾರಿ ಪ್ರಕರಣದಲ್ಲಿ ದ್ವಂದ್ವ ನೀತಿ – ಜನಾರ್ಧನ ರೆಡ್ಡಿ ಆರೋಪ

ಸಿಬಿಐ ತನಿಖೆ ವಿಚಾರ: ಬಳ್ಳಾರಿ ಪ್ರಕರಣದಲ್ಲಿ ದ್ವಂದ್ವ ನೀತಿ – ಜನಾರ್ಧನ...

ಉಗುರು ಕಚ್ಚುವ ಅಭ್ಯಾಸ ಇರುವವರು ಈ ವಿಷಯಗಳ ಬಗ್ಗೆ ತಿಳಿದಿರಬೇಕು!

ಉಗುರು ಕಚ್ಚುವ ಅಭ್ಯಾಸ ಇರುವವರು ಈ ವಿಷಯಗಳ ಬಗ್ಗೆ ತಿಳಿದಿರಬೇಕು! ಉಗುರು ಕಚ್ಚುವುದು...