ಕೊವಿಡ್ ಲಸಿಕೆಯಿಂದ ಹೃದಯಾಘಾತ ಅಲ್ಲ: ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ
ಬೆಂಗಳೂರು: ಕೋವಿಡ್ ಲಸಿಕೆಯಿಂದ ಹೃದಯಾಘಾತ ಸಂಭವಿಸುತ್ತಿದೆ ಎಂಬ ಆರೋಪವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ತಳ್ಳಿ ಹಾಕಿದ್ದಾರೆ. ತಜ್ಞರ ಸಮಿತಿಯಿಂದ ಸಲ್ಲಿಕವಾದ ವರದಿಯನ್ನು ಪರಿಶೀಲಿಸಿದ ಬಳಿಕ, ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. “ಹೃದಯಾಘಾತಕ್ಕೆ ಲಸಿಕೆ ನೇರ ಕಾರಣವಲ್ಲ. ಮಧುಮೇಹ, ರಕ್ತದೊತ್ತಡ, ದಪ್ಪತನ ಹಾಗೂ ದೈಹಿಕ ಚಟುವಟಿಕೆ ಕೊರತೆಯಂತಹ ಅಂಶಗಳೇ ಮುಖ್ಯ ಕಾರಣಗಳು” ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅವರು, ಎಂಆರ್ಎನ್ಎ ಲಸಿಕೆ ಬಗ್ಗೆ ಕೆಲವು ಅನುಮಾನಗಳಿದ್ದರೂ, ಭಾರತದಲ್ಲಿ ಈ ಲಸಿಕೆಯನ್ನು ಬಳಸಿಲ್ಲ. ಈ ಕುರಿತು ವಿಶ್ವ ಮಟ್ಟದಲ್ಲಿ ಅಧ್ಯಯನಗಳಾಗಿದೆ, ಆದರೆ ನಮ್ಮ ದೇಶದಲ್ಲಿ ಹೀಗೇನೂ ದೃಢಪಟ್ಟಿಲ್ಲ ಎಂದರು. ಹೃದಯಾಘಾತದಿಂದ ಉಂಟಾಗುವ ಸಡನ್ ಡೆತ್ ಪ್ರಕರಣಗಳಿಗೆ ಹೆಚ್ಚಿನ ತಪಾಸಣೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಂದಿನ ಶಿಕ್ಷಣ ವರ್ಷದಿಂದ ಹೃದಯಾಘಾತ ಕುರಿತ ಪಾಠ್ಯಕ್ರಮವನ್ನು ಶಾಲಾ ಪಠ್ಯದಲ್ಲಿ ಸೇರಿಸಲಾಗುತ್ತದೆ ಎಂದೂ ತಿಳಿಸಿದರು.