ಕೊಹ್ಲಿ ವಿಕೆಟ್​ ಪಡೆದು ದಾಖಲೆ ಬರೆದ ಸೌಥಿ..!

Date:

ನ್ಯೂಜಿಲೆಂಡ್​ ವಿರುದ್ಧ 5 ಮ್ಯಾಚ್​ಗಳ ಟಿ20 ಸರಣಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿ, ಸರಣಿ ಕ್ಲೀನ್ ಸ್ವೀಪ್ ಮಾಡಿ ಇತಿಹಾಸ ಬರೆದಿರುವ ಟೀಮ್ ಇಂಡಿಯಾ ಏಕದಿನ ಪಂದ್ಯದಲ್ಲಿ ಎಡವಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿರುವ ವಿರಾಟ್ ಕೊಹ್ಲಿ ಪಡೆ, ಈಗಾಗಲೇ ಎರಡು ಪಂದ್ಯವನ್ನು ಸೋತು ಸರಣಿ ಕಳೆದುಕೊಂಡಿದೆ. ಉಳಿದಿರುವ ಒಂದು ಪಂದ್ಯದಲ್ಲಿ ಗೆದ್ದು ಮುಖಭಂಗ ಕಮ್ಮಿ ಮಾಡಿಕೊಳ್ಳಲೇ ಬೇಕಾದ ಒತ್ತಡದಲ್ಲಿದೆ.
ಈ ನಡುವೆ ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ಮಹತ್ವದ ದಾಖಲೆಯೊಂದನ್ನು ಬರೆದಿದ್ದಾರೆ. ನಿನ್ನೆ ನಡೆದ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿಯ ವಿಕೆಟ್ ಪಡೆದ ಸೌಥಿ, ಇದುವರೆಗೆ 9ಬಾರಿ ಕೊಹ್ಲಿ ವಿಕೆಟ್ ಕಿತ್ತ ಸಾಧನೆ ಮಾಡಿದ್ರು. ಟೀಮ್ ಇಂಡಿಯಾದ ನಾಯಕನ ವಿಕೆಟ್​ ಅನ್ನು ಎಲ್ಲಾ ಮಾದರಿಯಲ್ಲೂ ಅತೀ ಹೆಚ್ಚುಬಾರಿ ಕಿತ್ತ ಸಾಧನೆ ಮಾಡಿದರು. ಇಂಗ್ಲೆಂಡ್‌ನ ಜೇಮ್ಸ್ ಆಂಡರ್ಸನ್‌ ಮತ್ತು ಗ್ರೇಮ್ ಸ್ವಾನ್ ವಿರಾಟ್ ಕೊಹ್ಲಿಯನ್ನು 8 ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಮಾರ್ನೆ ಮಾರ್ಕೆಲ್, ನಥನ್ ಲಯನ್, ಝಂಪಾ ಮತ್ತು ರಾಂಪಾಲ್ ವಿರಾಟ್ ಕೊಹ್ಲಿ ವಿಕೆಟನ್ನು 7 ಬಾರಿ ಪಡೆದುಕೊಂಡ ಆಟಗಾರರಾಗಿದ್ದಾರೆ.

ಎರಡನೇ ಪಂದ್ಯದಲ್ಲಿ ಕೊಹ್ಲಿ 15 ರನ್ ಮಾತ್ರ ಮಾಡಿದ್ರಯ. ನ್ಯೂಜಿಲೆಂಡ್​ ನೀಡಿದ 274 ರನ್‌ಗಳ ಗುರಿ ಬೆನ್ನತ್ತಿದ ಕೊಹ್ಲಿ ಪಡೆ 251 ರನ್‌ಗಳಿಗೆ ಪತನವಾಗಿ ಸರಣಿ ಒಪ್ಪಿಸಿತು.

Share post:

Subscribe

spot_imgspot_img

Popular

More like this
Related

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....

ಬ್ರಹ್ಮಚಾರಿಣಿಯ ಪೂಜಾ ವಿಧಾನ !

ನವರಾತ್ರಿಯ ಎರಡನೇ ದಿನದಲ್ಲಿ ಬ್ರಹ್ಮಚಾರಿಣಿ ದೇವಿಯನ್ನು ಆರಾಧಿಸಲಾಗುತ್ತದೆ.ಇವರು ತಪಸ್ಸು, ಧೈರ್ಯ, ಶ್ರದ್ಧೆ...

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ ಬೆಂಗಳೂರು:-...