ಕೋಮು ಗಲಭೆಗಳನ್ನು ಬೆಂಬಲಿಸುವ ರಾಜಕಾರಣ ದೇಶಕ್ಕೆ ಅತ್ಯಂತ ಅಪಾಯಕಾರಿ:
ಬೆಂಗಳೂರು: ಕೋಮು ಗಲಭೆಗಳನ್ನು ಬೆಂಬಲಿಸುವ ರಾಜಕಾರಣ ದೇಶಕ್ಕೆ ಅತ್ಯಂತ ಅಪಾಯಕಾರಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ. ಹುಬ್ಬಳ್ಳಿ ಪೊಲೀಸ್ ಠಾಣೆ ದಾಳಿ ಪ್ರಕರಣದ ಆರೋಪಿಗಳ ಮೇಲಿನ ಕೇಸ್ ವಾಪಸ್ ಪಡೆಯುವ ವಿಚಾರಕ್ಕೆ ನಗರದಲ್ಲಿ ಮಾತನಾಡಿದ ಅವರು,
ಕೇವಲ ರಾಜಕೀಯ ಲಾಭಕ್ಕಾಗಿ ಕೋಮು ಗಲಭೆಗಳನ್ನು ಬೆಂಬಲಿಸುವ ರಾಜಕಾರಣ ದೇಶಕ್ಕೆ ಅತ್ಯಂತ ಅಪಾಯಕಾರಿಯಾಗಿದೆ. ಕಾಂಗ್ರೆಸ್ ಇದನ್ನೇ ಮಾಡುತ್ತಿದೆ. ಹುಬ್ಬಳ್ಳಿ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದವರು ದೇಶಪ್ರೇಮಿಗಳೇ? ರೈತರೇ? ಅಥವಾ ಕನ್ನಡ ಪ್ರೇಮಿಗಳೇ? ಅವರು ಮತಾಂಧರು ಎಂದು ಆಕ್ರೋಶ ಹೊರಹಾಕಿದ್ದಾರೆ.
ತಮ್ಮ ಮತೀಯ ವಿಚಾರಗಳಿಗಾಗಿ ಸಣ್ಣ ಸಣ್ಣ ವಿಷಯಗಳನ್ನು ದೊಡ್ಡದು ಮಾಡಿ ಕೋಮುಗಲಭೆ ಸೃಷ್ಟಿಸುವ ಕ್ರಿಮಿನಲ್‌ಗಳು ಅವರು. ಪೊಲೀಸ್ ಠಾಣೆಗಳ ಮೇಲೆ ಬೆಂಕಿ ಹಾಕುತ್ತಾರೆ, ದಾಳಿ ಮಾಡುತ್ತಾರೆ. ಇಂತಹವರ ಮೇಲಿನ ಕೇಸ್ ವಾಪಸ್ ಪಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಕಿಡಿಕಾರಿದರು.