ಕೋರಮಂಗಲದಲ್ಲಿ ಡಾ. ಸಿ.ಜೆ. ರಾಯ್ ಅಂತಿಮ ದರ್ಶನ: ಕಾಸಾಗ್ರ್ಯಾಂಡ್ ನಲ್ಲಿ ಅಂತ್ಯಕ್ರಿಯೆ

tnit editors
1 Min Read

ಕೋರಮಂಗಲದಲ್ಲಿ ಡಾ. ಸಿ.ಜೆ. ರಾಯ್ ಅಂತಿಮ ದರ್ಶನ: ಕಾಸಾಗ್ರ್ಯಾಂಡ್ ನಲ್ಲಿ ಅಂತ್ಯಕ್ರಿಯೆ

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ನ ಮುಖ್ಯಸ್ಥ ಡಾ. ಸಿ.ಜೆ. ರಾಯ್ ಅವರ ಅಂತ್ಯಕ್ರಿಯೆ ಇಂದು (ಜ.31) ಸಂಜೆ ಬನ್ನೇರುಘಟ್ಟದ ಕಾಸಾಗ್ರ್ಯಾಂಡ್ನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ.
ಡಾ. ಸಿ.ಜೆ. ರಾಯ್ ಅವರು ತಮ್ಮ ಆಪ್ತರ ಬಳಿ ಈ ಹಿಂದೆ ವ್ಯಕ್ತಪಡಿಸಿದ್ದ ಇಚ್ಛೆಯಂತೆ, ಬನ್ನೇರುಘಟ್ಟದ ಕಾಸಾಗ್ರ್ಯಾಂಡ್ನಲ್ಲೇ ಅಂತ್ಯಸಂಸ್ಕಾರ ನೆರವೇರಲಿದೆ. ಮೃತ ರಾಯ್ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಕೋರಮಂಗಲದ ವೈಟ್ ಹೌಸ್ನಲ್ಲಿ ಇಡಲಾಗುವುದು. ಈ ವೈಟ್ ಹೌಸ್ ವೈಟ್ ಗೋಲ್ಡ್ ಸಂಸ್ಥೆಯ ಮಾಲೀಕ ಹಾಗೂ ಡಾ. ರಾಯ್ ಅವರ ಸಹೋದರ ಬಾಬು ಜೋಸೆಫ್ ಅವರ ಒಡೆತನದಲ್ಲಿದೆ.
ಇಂದು ಸಂಜೆ ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ರಾಜ್ಯದ ಪ್ರಮುಖ ಉದ್ಯಮಿಗಳು, ಸಿನಿಮಾ ತಾರೆಯರು ಹಾಗೂ ರಾಜಕೀಯ ಮುಖಂಡರು ಭಾಗವಹಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

Share This Article