No menu items!
7.8 C
Munich
Thursday, April 30, 2026

ಇಂತಹ ಲಕ್ಷಣ ಕಂಡಲ್ಲಿ ಹುಷಾರ್…!

Must read

ಪ್ರವಾಹದಿಂದ‌ ತತ್ತರಿಸಿದ ಕೇರಳದಲ್ಲಿ ಇಲಿಜ್ವರದಿಂದ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ವರದಿ ಬೆನ್ನಲ್ಲೇ ಕರ್ನಾಟಕದಲ್ಲೂ ಇಲಿ ಜ್ವರದ ಭೀತಿ ಎದುರಾಗಿದೆ.
ಕಳೆದ ಜನವರಿಯಿಂದ ಇಲ್ಲಿಯವರೆಗೆ ಒಟ್ಟಾರೆ‌ 136 ಇಲಿಜ್ವರ ಪ್ರಕರಣಗಳು ಪತ್ತೆಯಾಗಿವೆ. ಈ ಬಗ್ಗೆ ಆರೋಗ್ಯ ಇಲಾಖೆ ಖಚಿತ ಮಾಹಿತಿ ನೀಡಿದೆ.

ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬಂದಿವೆ. ಈ ಜ್ವರ ಮಳೆಗಾಲದಲ್ಲಿ ಬರುವ ಕಾಯಿಲೆ. ಕಳೆದ ವರ್ಷ ಈ ಅವಧಿಯಲ್ಲಿ 187 ಇಲಿ ಜ್ವರ ಪ್ರಕರಣಗಳು ವರದಿಯಾಗಿದ್ದವು. ಈ ವರ್ಷ ಇದರ ಪ್ರಮಾಣ ಕಡಮೆ ಆಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಾ. ಬಿ.ಜಿ ಪ್ರಕಾಶ್‌ಕುಮಾರ್ ತಿಳಿಸಿದ್ದಾರೆ.

ಜ್ವರ, ಮೈ ಕೈ ನೋವು, ತಲೆ ನೋವು, ರಕ್ತಸ್ರಾವ, ಜಾಂಡೀಸ್, ಉಸಿರಾಟದ ತೊಂದರೆ ಈ ರೋಗದ ಲಕ್ಷಣಗಳು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article