ಕ್ಲಾಸ್ & ಮಾಸ್ ಸ್ಟಾರ್ ರಾಹುಲ್ ಬಗ್ಗೆ ನಿಮಗೆಷ್ಟು ಗೊತ್ತು?

Date:

ನಮ್ಮ ಕರಾವಳಿ ಕುವರ ಕೆ.ಎಲ್ ರಾಹುಲ್ ಸದ್ಯ ಭಾರತ ಕ್ರಿಕೆಟ್ ತಂಡದ ಆಧಾರಸ್ತಂಭ. ಟೀಮ್ ಇಂಡಿಯಾದ ಮುಂದಿನ ನಾಯಕ ಎಂದೇ ಕರೆಯಲ್ಪಡುತ್ತಿದ್ದಾರೆ. ಯಾವುದೇ ಕ್ರಮಾಂಕದಲ್ಲೂ ಬ್ಯಾಟ್ ಬೀಸಬಲ್ಲ ತಾಕತ್ತು ರಾಹುಲ್ ಅವರ ಪ್ಲಸ್ ಪಾಯಿಂಟ್. ಕೆಲವರು ಆಯಾಯ ಕ್ರಮಾಂಕಕ್ಕೆ ಒಗ್ಗಿಕೊಂಡಿರುತ್ತಾರೆ.. ಆದರೆ, ರಾಹುಲ್ ಹಾಗಲ್ಲ… ಯಾವ್ದೇ ಕ್ರಮಾಂಕದಲ್ಲೂ ಪರಿಸ್ಥಿತಿ ಹಾಗೂ ಅಗತ್ಯತೆಗೆ ತಕ್ಕಂತೆ ಬ್ಯಾಟಿಂಗ್ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಖಾಯಂ ವಿಕೆಟ್ ಕೀಪರ್ ಆಗಿಯೂ ತಂಡಕ್ಕೆ ನೆರವಾಗುತ್ತಿದ್ದಾರೆ. ಇಂತಹ ಕ್ಲಾಸ್​​ & ಮಾಸ್​ ಸ್ಟಾರ್ ಕನ್ನಡಿಗ ರಾಹುಲ್​ ಬಗ್ಗೆ ನಿಮ್ಗೆ ಗೊತ್ತಿಲ್ಲದ ಕೆಲವು ಸಂಗತಿಗಳು ಇಲ್ಲಿವೆ…

ಎಲ್ಲಾ ಮಾದರಿಯಲ್ಲಿ ಶತಕ : ರಾಹುಲ್ ಟೆಸ್ಟ್, ಏಕದಿನ ಮತ್ತು ಟಿ20 ಈ ಎಲ್ಲಾ ಫಾರ್ಮೆಟ್​ಗಳಲ್ಲಿ ಶತಕ ಬಾರಿಸಿದ್ದಾರೆ. ಮೂರೂ ಮಾದರಿಯಲ್ಲಿ ಶತಕಗಳಿಸಿದ ಭಾರತೀಯರ ಪಟ್ಟಿಯಲ್ಲಿ ರೋಹಿತ್ ಶರ್ಮಾ, ಸುರೇಶ್ ರೈನಾ ಜೊತೆ ಸ್ಥಾನ ಪಡೆದಿದ್ದಾರೆ.

IPLನಲ್ಲಿ ಅತೀವೇಗದ ಅರ್ಧ ಶತಕ : ರಾಹುಲ್​ ಕ್ಲಾಸ್​ಗೆ ಕ್ಲಾಸ್ ಮಾಸ್​ಗೆ ಮಾಸ್… ನೆಲಕಚ್ಚಿ ಆಡೋದು ಗೊತ್ತು, ಸಿಡಿಲಬ್ಬರದ ಬ್ಯಾಟಿಂಗ್ ಮಾಡೋದು ಕೂಡ ಗೊತ್ತು. ಐಪಿಎಲ್​ನಲ್ಲಿ ಕಿಂಗ್ಸ್ ಇಲೆವೆಲ್ ಪಂಜಾಬ್ ಪರ ಆಡುತ್ತಿರುವ ರಾಹುಲ್ 2018ರ ಐಪಿಎಲ್​ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್​ ವಿರುದ್ಧ ಕೇವಲ 14 ಬಾಲ್​ಗಳಲ್ಲಿ ಆರು ಬೌಂಡರಿ ಹಾಗೂ ನಾಲ್ಕು ಭರ್ಜರಿ ಸಿಕ್ಸರೊಂದಿಗೆ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದರು.

ಒಂದೇ ಸೀಸನ್​ನಲ್ಲಿ 1000ರನ್ ಸರದಾರ : 2013ರ ರೆಡ್‌ಬುಲ್ ಕ್ಯಾಂಪಸ್ ಕ್ರಿಕೆಟ್ ಟೂರ್ನಿಯಲ್ಲಿ ಕೆ.ಎಲ್​​ ರಾಹುಲ್ ಅದ್ಭುತ ಪ್ರದರ್ಶನ ತೋರಿ ಟಾಪ್ ಸ್ಕೋರರ್ ಆಗಿದ್ದರು. ಅದೇ ವರ್ಷ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪರ ಇಂಡಿಯನ್ ಪ್ರೀಮಿಯರ್​ ಲೀಗ್ (ಐಪಿಎಲ್​)ಗೆ ಎಂಟ್ರಿಕೊಟ್ಟಿದ್ದರು. ನಂತರ ಅದೇ ವರ್ಷ ಕರ್ನಾಟಕ ರಣಜಿ ತಂಡವನ್ನು ಪ್ರತಿನಿಧಿಸಿ 1033ರನ್ ಬಾರಿಸಿದ್ದರು. ಆ ಅತ್ಯುತ್ತಮ ಪ್ರದರ್ಶನ ಟೀಮ್ ಇಂಡಿಯಾದ ಕದ ತೆರೆಯುವಂತೆ ಮಾಡಿತ್ತು.

ಕೊಹ್ಲಿ ದಾಖಲೆ ಬ್ರೇಕ್ : ರಾಹುಲ್ ಕ್ಯಾಪ್ಟನ್ ವಿರಾಟ್ ಕೊಹ್ಲಿಯ ದಾಖಲೆಯೊಂದನ್ನು ಮುರಿದಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅತೀ ಹೆಚ್ಚುರನ್ ಬಾರಿಸಿದ ರಾಹುಲ್ ಕೊಹ್ಲಿ ರೆಕಾರ್ಡ್ ಬದಿಗೊತ್ತಿದ್ದಾರೆ. ದ್ವಿಪಕ್ಷೀಯ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಬಾರಿಸಿದವರ ಪಟ್ಟಿಯಲ್ಲಿ ಕೊಹ್ಲಿ ಹೆಸರಿತ್ತು. ಇದೂಗ ರಾಹುಲ್ ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಅತಿ ಹೆಚ್ಚು ರನ್​ ಬಾರಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಅವಳಿ ಶತಕ : ದುಲೀಪ್ ಟ್ರೋಫಿಯಲ್ಲಿ ದಕ್ಷಿಣ ವಿಭಾಗವನ್ನು ಪ್ರತಿನಿಧಿಸುವ ಕೆ. ಎಲ್ ರಾಹುಲ್ 2014ರ ಫೈನಲ್ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ 185 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 130ರನ್ ಬಾರಿಸಿದ್ದರು. ಆದರೆ, ದುರದೃಷ್ಟವಶಾತ್ ಆ ಪಂದ್ಯವನ್ನು ದಕ್ಷಿಣ ವಿಭಾಗ 9ರನ್​ಗಳಿಂದ ಸೋತಿತ್ತು.

7 ಟ್ಯಾಟೂಗಳು : ಇನ್ನು ಮೈದಾನದಿಂದ ಆಚೆ ನೋಡೋದಾದ್ರೆ ರಾಹುಲ್ ಟ್ಯೂಟೂ ಪ್ರಿಯ. ಅವರ ಮೈಮೇಲೆ ಒಟ್ಟು 7 ಟ್ಯಾಟೂಗಳಿವೆ. ಆ ಎಲ್ಲಾ ಟ್ಯೂಟೂಗಳ ಹಿಂದೆ ಒಂದೊಂದು ಇಂಟ್ರೆಸ್ಟಿಂಗ್ ಕತೆಯೂ ಇದೆಯಂತೆ.

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌ ಸೇರಿ 70 ಮಂದಿಗೆ ಗೌರವ

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌...

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ ಕಲಬುರಗಿ: ಚಿತ್ತಾಪುರದಲ್ಲಿ ನವೆಂಬರ್...

ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು?: ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ

ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು?: ಡಿಸಿಎಂ...

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ ಬೆಂಗಳೂರು:...