ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ: ಚಿಕಿತ್ಸೆ ಫಲಕಾರಿಯಾಗದೆ ಸಾವು..!
ಬೆಂಗಳೂರು: ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ, ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು ಆತನ ಸಾವಿಗೆ ಕಾರಣವಾಗಿರುವ ಘಟನೆ ನಡೆದಿದೆ. ಖಾಸಗಿ ಕಂಪನಿಯ ಕಾರು ಚಾಲಕ ಅರುಣ್ ಕುಮಾರ್ ಮೃತ ದುರ್ದೈವಿ. ಲಗ್ಗೇರಿಯ ಜ್ಞಾನ ವರ್ಧಕ ಶಾಲೆಯ ಬಳಿ ಅರುಣ್ ಕುಮಾರ್ ತನ್ನ ಸ್ನೇಹಿತನ ಜೊತೆ ಪಾನಿಪುರಿ ತಿನ್ನಲು ಬಂದಿದ್ದಾಗ
ಶಂಶಾಕ್, ದರ್ಶನ್, ಸಾಗರ್ ಇನ್ನಿತರು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದಿದ್ದರು. ಬಳಿಕ ಅರುಣ್ ಕುಮಾರ್ ಹಾಗೂ ಆತನ ಸ್ನೇಹಿತರ ಮೇಲೆ ದೊಣ್ಣೆ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು.
ಕಣ್ಣು, ಕಿವಿ, ಎದೆ ಭಾಗದ ಹಲ್ಲೆಯಾಗಿದ್ದ ಅರುನ್ ಕುಮಾರ್ ತೀವ್ರವಾಗಿ ರಕ್ತಸ್ರಾವವಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅರುಣ್ ಕುಮಾರ್ ಮೃತಪಟ್ಟಿದ್ದಾನೆ. ರಾಜಗೋಪಾಲ್ ನಗರ ಠಾಣೆಯಲ್ಲಿ ಐದು ಜನರ ವಿರುದ್ಧ ದೂರು ದಾಖಲಾಗಿದೆ.