ಡ್ರೈಫ್ರೂಟ್ಸ್ ಸೇವನೆ ಆರೋಗ್ಯಕರ. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಖರ್ಜೂರ ಸೇವನೆಯಿಂದ ಎಷ್ಟೆಲ್ಲಾ ಉಪಯೋಗವಿದೆ ಎಂದು ಕೇಳಿದರೆ ನಿಮಗೆ ಅಚ್ಚರಿಯಾಗೋದು ಖಂಡಿತ. ಖರ್ಜೂರ ಸೇವನೆಯ ಲಾಭಗಳು ಇಲ್ಲಿವೆ ನೋಡಿ.
ಖರ್ಜೂರದಲ್ಲಿ ಪೊಟ್ಯಾಶಿಯಂ ಸಮೃದ್ಧವಾಗಿದ್ದು, ಖನಿಜವು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ಖರ್ಜೂರ ಸುಮಾರು 167 ಮಿಗ್ರಾಂ ಪೊಟ್ಯಾಶಿಯಂ ಹೊಂದಿರುತ್ತದೆ. ಖರ್ಜೂರದಲ್ಲಿರುವ ಮೆಗ್ನೀಶಿಯಮ್ ನಿಮ್ಮ ಹೃದಯ ಮತ್ತು ರಕ್ತನಾಳಗಳಲ್ಲಿನ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಇದರ ಪರಿಣಾಮವಾಗಿ ರಕ್ತದೊತ್ತಡ ಕಡಿಮೆಯಾಗುತ್ತದೆ.
ಖರ್ಜೂರದಲ್ಲಿ ಐಸೊಫ್ಲೇವನ್ ಇರುತ್ತದೆ. ಇದು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಯುಕೆ ಅಧ್ಯಯನದ ಪ್ರಕಾರ ಖರ್ಜೂರ ನಿಯಮಿತವಾಗಿ ಸೇವಿಸುವುದರಿಂದ ಪರಿಧಮನಿಯ ಹೃದಯ ಕಾಯಿಲೆ ಬರದಂತೆ ತಡೆಗಟ್ಟಬಹುದು.
ಇಸ್ರೇಲ್ ಅಧ್ಯಯನದ ಪ್ರಕಾರ ಆರೋಗ್ಯಕರ ವ್ಯಕ್ತಿಗಳು ಸಹ ಖರ್ಜೂರ ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟ ಮತ್ತು ಆಕ್ಸಿಡೇಟಿವ್ ಒತ್ತಡದ ಮೇಲೆ ಪ್ರಯೋಜನಕಾರಿ ಪರಿಣಾಮಗಳನ್ನು ಬೀರುತ್ತದೆ. ಖರ್ಜೂರದಲ್ಲಿ ಯಾವುದೇ ಕೊಲೆಸ್ಟ್ರಾಲ್ ಇರುವುದಿಲ್ಲ. ಅವು ಕಬ್ಬಿಣದಿಂದ ಕೂಡಿದ್ದು, ಬಾಳೆಹಣ್ಣಿಗಿಂತ ಹೆಚ್ಚು ಫೈಬರ್ ಹೊಂದಿರುತ್ತವೆ.
ಖರ್ಜೂರದಲ್ಲಿ ತಾಮ್ರ, ಮೆಗ್ನೀಶಿಯಂ, ಸೆಲೆನಿಯಮ್ , ಮ್ಯಾಂಗನೀಸ್ ಸಮೃದ್ಧವಾಗಿದೆ. ಇವೆಲ್ಲವೂ ನಮ್ಮ ಎಲುಬುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಖರ್ಜೂರ ಮೂಳೆಗಳಿಗೆ ಆರೋಗ್ಯಕರವಾದ ಬೋರಾನ್ ಸಹ ಒಳಗೊಂಡಿದೆ.
ಖರ್ಜೂರದ ಹಣ್ಣು ನಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುವ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲೂಕೋಸ್‌ನಂತಹ ನೈಸರ್ಗಿಕ ಸಕ್ಕರೆಗಳನ್ನು ಸಹ ಒಳಗೊಂಡಿದೆ.
ಭಾರತೀಯ ಅಧ್ಯಯನದ ಪ್ರಕಾರ ಪುರುಷ ಫಲವತ್ತತೆ ಹೆಚ್ಚಲು ಖರ್ಜೂರ ಬಳಸಲಾಗುತ್ತದೆ. ಕೆಲವು ವರದಿಗಳ ಪ್ರಕಾರ ಖರ್ಜೂರ ಸೇವಿಸುವುದರಿಂದ ಅತಿಸಾರ ಗುಣವಾಗುತ್ತದೆ. ಖರ್ಜೂರ ಸೇವಿಸುವುದರಿಂದ ಕೊಲೊರೆಕ್ಟಲ್ ಕ್ಯಾನ್ಸರ್ ಬೆಳವಣಿಗೆ ಕಡಿಮೆ ಮಾಡಬಹುದು. ಖರ್ಜೂರ ಸೇವನೆಯು ಕರುಳಿನಲ್ಲಿ ಪ್ರಯೋಜನಕಾರಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಇದು ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ.
ಅಧ್ಯಯನದ ಪ್ರಕಾರ ಖರ್ಜೂರವು ಮಲಬದ್ಧತೆ ಆಗದಂತೆ ಸಹಾಯ ಮಾಡುತ್ತದೆ. ಫೈಬರ್ ಅಸಮರ್ಪಕ ಸೇವನೆಯು ಮಲಬದ್ಧತೆಗೆ ಕಾರಣವಾಗಬಹುದು. ಆದರೆ ಖರ್ಜೂರ ನಾರಿನ ಉತ್ತಮ ಮೂಲ ವಾಗಿರುವುದರಿಂದ ಈ ಸಮಸ್ಯೆಯನ್ನು ಪರಿಹರಿಸಬಹುದು.
ಖರ್ಜೂರ ಸೇವಿಸುವುದರಿಂದ ಗರ್ಭಧಾರಣೆಯ ಸಮಯದಲ್ಲಿ ಉಂಟಾಗುವ ಮೂಲವ್ಯಾಧಿಯನ್ನು ತಡೆಯುತ್ತದೆ. ಗರ್ಭಧಾರಣೆಯ ಕೊನೆಯ ತಿಂಗಳುಗಳಲ್ಲಿ ಗರ್ಭಾಶಯದ ಸ್ನಾಯುಗಳನ್ನು ಬಲಪಡಿಸಲು ಖರ್ಜೂರ ಸಹಾಯ ಮಾಡುತ್ತದೆ.
ಖರ್ಜೂರವನ್ನು ಸಾಮಾನ್ಯವಾಗಿ ಕಿರಿದಾದ ಪೆಟ್ಟಿಗೆಗಳಲ್ಲಿ, ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಲಾಗುತ್ತದೆ. ಆದರೆ ನೀವು ಖರೀದಿಸುವಾಗ ತಾಜಾ, ಹೊಳಪುಳ್ಳ, ಮೃದುವಾಗಿರುವ, ಕೊಬ್ಬಿದ ತೇವಾಂಶ ಮತ್ತು ಒಡೆದ ಹಣ್ಣುಗಳನ್ನು ತೆಗೆದುಕೊಳ್ಳಿ. ಖರ್ಜೂರ ಬಹಳ ಗಟ್ಟಿಯಾಗಿರಬಾರದು, ಅದರ ಮೇಲೆ ಹರಳು ಹರಳಾದ ಸಕ್ಕರೆ ಇರಬಾರದು. ಹೀಗೆ ಸಂಗ್ರಹಿಸಿ ತಾಜಾ ಖರ್ಜೂರಗಳನ್ನು ರೆಫ್ರಿಜರೇಟರ್ ನಲ್ಲಿ, ಗಾಳಿಯಾಡದ ಪಾತ್ರೆಯಲ್ಲಿ ಇರಿಸಿದಾಗ 6 ತಿಂಗಳವರೆಗೆ ಸಂಗ್ರಹಿಸಬಹುದು. ಒಣಗಿದ ಖರ್ಜೂರಗಳು, ದೀರ್ಘಾವಧಿ ಬಾಳಿಕೆ ಬರುತ್ತವೆ. ಒಂದು ವರ್ಷದವರೆಗೆ ಅದೇ ರೀತಿಯಲ್ಲಿ ಸಂಗ್ರಹಿಸಬಹುದು.