ಗಂಡು ಮಗುವಿಗೆ ಜನ್ಮ ನೀಡಿದ ರೇಣುಕಸ್ವಾಮಿ ಪತ್ನಿ ಸಹನಾ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಲಾಕ್ ಆಗಿರುವ ನಟ ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತು. ಇನ್ನೂ ರೇಣುಕಾ ಸ್ವಾಮಿ ಬರ್ಬರ ಹತ್ಯೆ ನಡೆದು ನಾಲ್ಕು ತಿಂಗಳು ಕಳೆದಿದೆ. ರೇಣುಕಾ ಸ್ವಾಮಿ ಕೊಲೆಯ ಬಳಿಕ ಇಡೀ ಕುಟುಂಬ ಕಣ್ಣೀರಲ್ಲೇ ಕೈ ತೊಳೆಯುತ್ತಾ ಬಂದಿದೆ. ಇದೀಗ ರೇಣುಕಾಸ್ವಾಮಿ ಪತ್ನಿ ಸಹನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಚಿತ್ರದುರ್ಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಹನಾಗೆ ಹೆರಿಗೆಯಾಗಿದೆ. ರೇಣುಕಾಸ್ವಾಮಿ ಹತ್ಯೆ ಘಟನೆ ವೇಳೆ 5 ತಿಂಗಳ ಗರ್ಭಿಣಿಯಾಗಿದ್ದ ಸಹನಾ, ಗಂಡನ ಸಾವಿನಿಂದ ಭಾರಿ ಆತಂಕಕ್ಕೀಡಾಗಿದ್ದರು. ರೇಣುಕಾಸ್ವಾಮಿ ಸಾವಿನ ನಂತರ ಆತನ ರೂಪದಲ್ಲಿ ಮನೆಗೆ ಗಂಡು ಮಗು ಮರಳಿ ಬರಬಹುದೆಂಬ ನಿರೀಕ್ಷೆಯಲ್ಲಿದ್ರು.
ಅಂತೆಯೇ ರೇಣುಕಾಸ್ವಾಮಿ ಕುಟುಂಬಸ್ಥರ ನಂಬಿಕೆಯಂತೆ ಗಂಡು ಮಗುವಿಗೆ ಸಹನಾ ಜನ್ಮ ನೀಡಿದ್ದಾರೆ. ಹೀಗಾಗಿ ಇದ್ದ ಓರ್ವ ಮಗನನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ರೇಣುಕಾಸ್ವಾಮಿ ಪೋಷಕರಿಗೆ ಮೊಮ್ಮಗನ ಆಗಮನದಿಂದ ಸ್ವಲ್ಪ ಸಮಾಧಾನ ತಂದಿದೆ.