ಡಿಫ್ರೆಂಟ್ ಆಗಿ ಕಾಣಬೇಕಂತಾ ಇತ್ತೀಚಿನ ದಿನಗಳಲ್ಲಿ ಫ್ಯಾಶನ್ಗಾಗಿ ಗಡ್ಡ ಬೆಳೆಸುವವರ ಸಂಖ್ಯೆ ಹೆಚ್ಚಿದೆ. ಅದಕ್ಕೆ ಹಲವು ಮಂದಿ ವಿಭಿನ್ನ ಶೈಲಿಯ ಹೆರ್ಸ್ಟ್ರೈಲ್, ಗಡ್ಡ ಬೆಳೆಸುವುದನ್ನು ರೂಢಿ ಮಾಡಿಕೊಂಡಿರುತ್ತಾರೆ. ಇದೀಗ ಗಡ್ಡದಲ್ಲೂ ಹಲವು ಫ್ಯಾಶನ್ಗಳು ಬಂದಿವೆ. ಆದ್ರೆ ನಿಮ್ಗೆ ಗೊತ್ತಾ! ಗಡ್ಡ ಬಿಟ್ಟ ಪುರುಷರಿಗಿಂತ ನಾಯಿಗಳು ಹೆಚ್ಚು ಕ್ಲೀನ್ ಆಗಿರ್ತವಂತೆ ಗೊತ್ತಾ..?
ಪುರುಷರ ಗಡ್ಡಕ್ಕೆ ಸೂಕ್ಷ್ಮ ಜೀವಿಗಳು ಹರಡುತ್ತವೆಯೇ? ಎಂಬುದನ್ನು ತಿಳಿಯಲು ಒಂದು ಅಧ್ಯಯನ ನಡೆಸಲಾಯ್ತು. ಈ ಅಧ್ಯಯನವನ್ನು ಸ್ವಿಟ್ಜರ್ಲೆಂಡ್ನ ಹಿರ್ಸ್ಲ್ಯಾಂಡ್ ಕ್ಲಿನಿಕ್ನ ಪ್ರೊಫೆಸರ್ ನಡೆಸಿದ್ರು. ಅದರಲ್ಲಿ ತಿಳಿದು ಬಂದದ್ದೇನಂದರೆ ನಾಯಿಯ ತುಪ್ಪಳಗಿಂತ ಪುರುಷರ ಗಡ್ಡದಲ್ಲಿ ಹೆಚ್ಚು ಬ್ಯಾಕ್ಟೇರಿಯಾಗಳು ಇರುತ್ತವೆ ಎಂದು ಹೇಳಲಾಗಿದೆ.
ಇದಕ್ಕಾಗಿ 18 ರಿಂದ 76 ವಯಸ್ಸಿನ ಪುರುಷರನ್ನು ಹಾಗೂ 30 ವಿವಿಧ ತಳಿಯ ಶ್ವಾನಗಳಿಂದ ಕತ್ತಿನ ಸ್ವ್ಯಾಬ್ ಪರೀಕ್ಷೆ ನಡೆಸಲಾಗಿದೆ. ಅಧ್ಯಯನ ವೇಳೆ 18 ರಿಂದ 76 ವಯಸ್ಸಿನ ಎಲ್ಲ ಪುರುಷರ ಗಡ್ಡಗಳಲ್ಲಿಯೂ ಹಾನಿಕಾರಕ ಸೂಕ್ಷ್ಮಾಣು ಜೀವಿಗಳು ಪತ್ತೆಯಾಗಿವೆ. 30ರಲ್ಲಿ ಕೇವಲ 23 ಶ್ವಾನಗಳಲ್ಲಿ ಹಾನಿಕಾರಕ ಬ್ಯಾಕ್ಟಿಯರಿಯಾಗಳು ಕಂಡು ಬಂದಿವೆ. ಅಷ್ಟೇ ಅಲ್ಲ, ಶ್ವಾನಗಳ ಹೇರ್ಗಿಂತ ಪುರುಷರ ಗಡ್ಡದಲ್ಲಿ ಹೆಚ್ಚು ಬ್ಯಾಕ್ಟಿರಿಯಾಗಳು ಇರುವುದಾಗಿ ತಿಳಿದು ಬಂದಿದೆ. ಈ ಬ್ಯಾಕ್ಟಿರಿಯಾಗಳು ಅನಾರೋಗ್ಯಕ್ಕೆ ಕಾರಣವಾಗಬಲ್ಲವು ಎಂದು ತಿಳಿದು ಬಂದಿದೆ.
ಈ ಅಧ್ಯಯನ ವರದಿ ಪ್ರಕಾರ, ಗಡ್ಡವಿರುವ ಪುರುಷರಿಗೆ ಹೋಲಿಸಿದರೆ, ನಾಯಿಗಳೇ ಹೆಚ್ಚು ಕ್ಲೀನ್ ಎಂದು ಲೇಖಕ ಗಟ್ಜಟ್ ಅಭಿಪ್ರಾಯಪಟ್ಟಿದ್ದಾರೆ. ಶ್ವಾನಗಳಿಗೆ ನಡೆಸಿದ ಎಂಆರ್ಐ ಟೆಸ್ಟ್ ಬಳಿಕ ಪುರುಷರಿಗಿಂತ ಕಡಿಮೆ ಬ್ಯಾಕ್ಟಿರಿಯಾಗಳನ್ನು ಶ್ವಾನಗಳಲ್ಲಿ ವಿಜ್ಞಾನಿಗಳು ಕಂಡು ಕೊಂಡಿದ್ದಾರೆ.