ಬಾರಿಯ ಗ್ರ್ಯಾಂಡ್‌ಸ್ಲ್ಯಾಮ್ ಚಾಂಪಿಯನ್, ರಷ್ಯಾದ ಮರಿಯಾ ಶರಪೋವಾ ಜಂಟಿ ಜೀವನದತ್ತ ಮುಖಮಾಡಿದ್ದಾರೆ. ಬ್ರಿಟಿಷ್ ಬ್ಯುಸಿನೆಸ್‌ಮ್ಯಾನ್ ಅಲೆಕ್ಸಾಂಡರ್ ಗಿಲ್ಕೆಸ್ ಜೊತೆ ಶರಪೋವಾ ಗುರುವಾರ (ಡಿಸೆಂಬರ್ 17) ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
6.2 ಅಡಿ ಎತ್ತರದ ಚೆಲುವೆ ಮರಿಯಾ ಶರಪೋವಾಗೀಗ 33ರ ಹರೆಯ. ಇದೇ ವರ್ಷ ಫೆಬ್ರವರಿಯಲ್ಲಿ ಶರಪೋವಾ ಅಂತಾರಾಷ್ಟ್ರೀಯ ಟೆನಿಸ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದರು. ತಾನು ಲೆಕ್ಸಾಂಡರ್ ಗಿಲ್ಕೆಸ್ ಜೊತೆ ಎಂಗೇಜ್ ಆಗಿರುವ ಸಂಗತಿಯನ್ನು ಮರಿಯಾ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಅಲೆಕ್ಸಾಂಡರ್ ಜೊತೆಗಿರುವ ಒಂದಿಷ್ಟು ಫೋಟೋಗಳನ್ನು ಮರಿಯಾ ಹಂಚಿಕೊಂಡಿದ್ದಾರೆ. ‘ನಾವು ಮೊದಲು ಭೇಟಿಯಾದ ದಿನವೇ ನಾನು ಆತನಿಗೆ ಯೆಸ್ ಅಂದೆ. ಇದು ನಮ್ಮ ಸಣ್ಣ ರಹಸ್ಯವಾಗಿತ್ತು, ಅಲ್ಲವೇ?,’ ಎಂದು ಶರಪೋವಾ ಇನ್‌ಸ್ಟಾ ಪೋಸ್ಟ್ ಜೊತೆ ಬರೆದುಕೊಂಡಿದ್ದಾರೆ.
ಅಲೆಕ್ಸಾಂಡರ್ ಅವರು ಪ್ಯಾಡಲ್8 ಎನ್ನುವ ಹರಾಜು ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿದ್ದಾರೆ. ಆ ಸಂಸ್ಥೆಯೀಗ ಬಹಳ ಯಶಸ್ಸು ಕಾಣುತ್ತಿದೆ. 2018ರಲ್ಲಿ ಅಲೆಕ್ಸಾಂಡರ್ ಮತ್ತು ಶರಪೋವಾ ಸಾರ್ವಜನಿಕವಾಗಿಯೇ ರೊಮಾನ್ಸ್ ಮಾಡಿ ತಮ್ಮ ನಡುವಿನ ಸಂಬಂಧವನ್ನು ಸಾರಿ ಹೇಳಿದ್ದರು.
ನಂಗೆ ಕೋತಿ ಕಚ್ಚಿಲ್ಲ ಅಂದಿದ್ಹೇಕೆ ರೇಣುಕಾಚಾರ್ಯ?
ನನಗೆ ಕೋತಿ ಕಚ್ಚಿಲ್ಲ, ಭಯದಿಂದ ಅದನ್ನು ಸೆರೆಹಿಡಿದು ಬೇರೆ ಕಡೆ ಸ್ಥಳಾಂತರಿಸಿಲ್ಲ ಎಂದು ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಶುಕ್ರವಾರ ಮಾತನಾಡಿದ ಅವರು ಕೋತಿ ಕಚ್ಚಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದ್ದು ಎಂದರು.
ಹೊನ್ನಾಳಿ ಪಟ್ಟಣದ ಸರಕಾರಿ ಆಸ್ಪತ್ರೆ ಆವರಣದಲ್ಲಿ ಶಾಸಕ ಎಂಪಿ.ರೇಣುಕಾಚಾರ್ಯ ಇದ್ದ ಗುಂಪಿನ ಮೇಲೆ ಮುಷ್ಯವೊಂದು ದಾಳಿ ನಡೆಸಿತ್ತು. ಈ ವೇಳೆ ಶಾಸಕರು ತಪ್ಪಿಸಿಕೊಂಡರೂ ಪೌರ ಕಾರ್ಮಿಕರಿಗೆ ಕೋತಿ ದಾಳಿಯಿಂದ ಗಾಯಗಳಾಗಿದೆ.
ಈ ಹಿಂದೆ ಹೋರಿಯಿಂದ ಗುದ್ದಿಸಿಕೊಂಡಿದ್ದ ರೇಣುಕಾಚಾರ್ಯ ಇದೀಗ ಕೋತಿ ಕಾಟದಿಂದ ಸುದ್ದಿಯಲ್ಲಿದ್ದರು. ಆದರೆ ಇದಕ್ಕೆ ಸ್ಪಷ್ಟೀಕರಣ ನೀಡಿದ ರೇಣುಕಾಚಾರ್ಯ, ಎರಡು ಮುಷ್ಯಗಳು ಎರಡು ತಿಂಗಳಿಂದ ತೊಂದರೆ ಕೊಡುತ್ತಿತ್ತು. ನೂರಾರು ಜನರಿಗೆ ಕಚ್ಚಿವೆ. ಈ ಪೈಕಿ ಒಂದನ್ನು ಸೆರೆಹಿಡಿಸಿದ್ದೆವು. ಆದರೆ ಒಂದು ಅಲ್ಲಿಂದ ತಪ್ಪಿಸಿಕೊಂಡಿದೆ.
ಮೊನ್ನೆ ಪಟ್ಟಣ ಪಂಚಾಯತ್ ನೌಕರರೊಂದಿಗೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅಲ್ಲಿ ನಾನೂ ಹೋಗಿದ್ದೆ. ಅಲ್ಲಿ ಪಟ್ಟಣ ಪಂಚಾಯತ್ ಮೂರು ನೌಕರರ ಮೇಲೆ ದಾಳಿ ನಡೆಸಿತ್ತು. ಈ ಹಿಂದೆ ಈ ನೌಕರರು ಕೋತಿ ಮೇಲೆ ಹಲ್ಲೆ ನಡೆಸಿದ್ದರು. ಅದಕ್ಕಾಗಿ ಅವರನ್ನೇ ಹುಡುಕಿ ಕೋತಿ ದಾಳಿ ನಡೆಸಿದೆ.
ಆದರೆ ಮುಂಜಾಗರೂಕತಾ ಕ್ರಮವಾಗಿ ನಾನು ಆಸ್ಪತ್ರೆಯೊಳಗೆ ಉಳಿದುಕೊಂಡೆ ಅಷ್ಟೇ. ಬದಲಾಗಿ ನನ್ನ ಮೇಲೆ ಕೋತಿ ದಾಳಿ ನಡೆಲಿಲ್ಲ ಎಂದು ತಿಳಿಸಿದರು. ಒಟ್ಟಿನಲ್ಲಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೋರಿ, ಕೋತಿ ಕಾಟದಿಂದ ಪದೇ ಪದೇ ಸುದ್ದಿಯಾಗುತ್ತಿದ್ದಾರೆ.