ಗುಡ್‌ ನ್ಯೂಸ್: ಭಾರೀ ಇಳಿಕೆ ಕಂಡ ಬಂಗಾರ! ಬೆಂಗಳೂರಿನಲ್ಲಿ ಇಂದಿನ ಚಿನ್ನ -‌ ಬೆಳ್ಳಿ ಬೆಲೆ ಎಷ್ಟಿದೆ?

Date:

ಗುಡ್‌ ನ್ಯೂಸ್: ಭಾರೀ ಇಳಿಕೆ ಕಂಡ ಬಂಗಾರ! ಬೆಂಗಳೂರಿನಲ್ಲಿ ಇಂದಿನ ಚಿನ್ನ -‌ ಬೆಳ್ಳಿ ಬೆಲೆ ಎಷ್ಟಿದೆ?

ಬೆಂಗಳೂರು: ಶುಭ ಕಾರ್ಯಗಳಿಗೆ ಚಿನ್ನ ಮತ್ತು ಬೆಳ್ಳಿ ಖರೀದಿಸುವ ಯೋಚನೆ ಮಾಡುತ್ತಿದ್ದವರಿಗೆ ಇದೀಗ ಸುವರ್ಣಾವಕಾಶ ಸಿಕ್ಕಂತಾಗಿದೆ. ಚಿನ್ನಾಭರಣಗಳ ದರದಲ್ಲಿ ಗಣನೀಯ ಇಳಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಗ್ರಾಹಕರು ಖರೀದಿಗೆ ಮುಂದಾಗುತ್ತಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಗ್ಯಾಸ್ ಸಿಲಿಂಡರ್ ದರ ಏರಿಕೆಯಾದರೂ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗುವ ಸಾಧ್ಯತೆಗಳ ನಡುವೆಯೂ ಚಿನ್ನದ ದರ ಇಳಿಕೆಯಾಗಿರುವುದು ಗ್ರಾಹಕರಿಗೆ ಸಂತಸ ತಂದಿದೆ.

ದೇಶದಾದ್ಯಂತ ಚಿನ್ನ ಮತ್ತು ಬೆಳ್ಳಿ ಬೆಲೆ ಕುಸಿದಿದ್ದು, ಬೆಂಗಳೂರು ಮಾರುಕಟ್ಟೆಯಲ್ಲಿಯೂ ಇದರ ಪರಿಣಾಮ ಸ್ಪಷ್ಟವಾಗಿದೆ. ಎಂಸಿಎಕ್ಸ್ ಆರಂಭಿಕ ವಹಿವಾಟಿನಲ್ಲಿ ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿದ್ದು, ದಿನದಂತ್ಯದವರೆಗೆ ಇನ್ನಷ್ಟು ಕುಸಿತವಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಬೆಲೆಯಲ್ಲಿ ಏರಿಳಿತ ಮುಂದುವರಿಯುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರ ಇಂದು ಪ್ರತಿ ಗ್ರಾಂ ₹14,002ಕ್ಕೆ ಇಳಿಕೆಯಾಗಿದ್ದು, ನಿನ್ನೆ ₹14,597 ಇದ್ದ ಬೆಲೆಯೊಂದಿಗೆ ಹೋಲಿಸಿದರೆ ₹595 ಕುಸಿತ ಕಂಡಿದೆ. ಇದೇ ರೀತಿ, 10 ಗ್ರಾಂ ಚಿನ್ನದ ಬೆಲೆ ₹1,40,020 ಆಗಿದ್ದು, ನಿನ್ನೆಗಿನ ₹1,45,970ರಿಂದ ₹5,950 ಇಳಿಕೆಯಾಗಿದೆ.

22 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ ಬೆಲೆ ₹12,835 ಆಗಿದ್ದು, ನಿನ್ನೆಗಿನ ₹13,380ರಿಂದ ₹545 ಇಳಿಕೆಯಾಗಿದೆ. 10 ಗ್ರಾಂಗೆ ₹1,28,350 ಆಗಿದ್ದು, ₹5,450 ಕುಸಿತ ದಾಖಲಾಗಿದೆ.

18 ಕ್ಯಾರೆಟ್ ಚಿನ್ನದ ದರದಲ್ಲೂ ಇಳಿಕೆ ಕಂಡುಬಂದಿದ್ದು, ಪ್ರತಿ ಗ್ರಾಂ ₹10,948 ಹಾಗೂ 10 ಗ್ರಾಂಗೆ ₹1,05,020 ದಾಖಲಾಗಿದೆ. ಇದರಿಂದ ₹4,460ರಷ್ಟು ಕುಸಿತವಾಗಿದೆ. ಕಳೆದ ಒಂದು ವಾರದಿಂದ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ ಕಂಡುಬರುತ್ತಿದೆ. ಮಾರ್ಚ್ 17ರಂದು ಸ್ವಲ್ಪ ಏರಿಕೆ ಕಂಡಿದ್ದರೂ, ಬಳಿಕದಿಂದ ದರದಲ್ಲಿ ಗಣನೀಯ ಕುಸಿತ ದಾಖಲಾಗುತ್ತಿದೆ.

Share post:

Subscribe

spot_imgspot_img

Popular

More like this
Related

ಹೋಟೆಲ್ ಮಾಲೀಕರಿಗೆ ಗುಡ್ ನ್ಯೂಸ್: ಹೆಚ್ಚುವರಿಯಾಗಿ 1 ಸಾವಿರ ಕಮರ್ಷಿಯಲ್ ಸಿಲಿಂಡರ್ ಪೂರೈಕೆ – ಕೆ.ಹೆಚ್. ಮುನಿಯಪ್ಪ

ಹೋಟೆಲ್ ಮಾಲೀಕರಿಗೆ ಗುಡ್ ನ್ಯೂಸ್: ಹೆಚ್ಚುವರಿಯಾಗಿ 1 ಸಾವಿರ ಕಮರ್ಷಿಯಲ್ ಸಿಲಿಂಡರ್...

ಡಿಕೆ ಶಿವಕುಮಾರ್ ಆಪ್ತ ಕರಿಯಣ್ಣ ಸಂಗಟಿ ನಿಧನ

ಡಿಕೆ ಶಿವಕುಮಾರ್ ಆಪ್ತ ಕರಿಯಣ್ಣ ಸಂಗಟಿ ನಿಧನ ಕೊಪ್ಪಳ: ಉಪ ಮುಖ್ಯಮಂತ್ರಿ ಡಿ.ಕೆ....

ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ

ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಬಾಗಲಕೋಟೆ, ಮಾ. 22: ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್...

ಡಿಆರ್‌ಐ ಭರ್ಜರಿ ಕಾರ್ಯಾಚರಣೆ: ಕೋಟ್ಯಾಂತರ ಮೌಲ್ಯದ ಡ್ರಗ್ಸ್ ವಶ

ಡಿಆರ್‌ಐ ಭರ್ಜರಿ ಕಾರ್ಯಾಚರಣೆ: ಕೋಟ್ಯಾಂತರ ಮೌಲ್ಯದ ಡ್ರಗ್ಸ್ ವಶ ಬೆಂಗಳೂರು, ಮಾ. 22:...