ಬೆಂಗಳೂರು: ಗೃಹಜ್ಯೋತಿ ಸರಾಸರಿ ಪ್ರಮಾಣದಲ್ಲಿ ಶೇ.10 ಹೆಚ್ಚುವರಿ ವಿದ್ಯುತ್ ನೀಡುವ ಮಾನದಂಡವನ್ನು 10 ಯೂನಿಟ್ ಆಗಿ ಬದಲಾಯಿಸಲು ಸಂಪುಟ ಸಮ್ಮತಿ ನೀಡಿದೆ. ಹೌದು ಈ ಬಗ್ಗೆ ನಗರದಲ್ಲಿ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್ ಅವರು, 48 ಯುನಿಟ್‌ಗಿಂತ ಕಡಿಮೆ ಬಳಸಿದವರಿಗೆ ಶೇ.10 ಯುನಿಟ್ ಫ್ರೀ ವಿದ್ಯುತ್ ಕೊಡುತ್ತಿದ್ದೆವು. ಆದರೆ ಇದೀಗ ಶೇ.10 ಬದಲು 10 ಯುನಿಟ್ ನೀಡಲು ಸಂಪುಟದಲ್ಲಿ ನಿರ್ಧರಿಸಿದ್ದೇವೆ ಎಂದು ಹೇಳಿದರು.
ಕೆಲವರು 48 ಯುನಿಟ್ ಕೊಟ್ಟರೂ ಕಡಿಮೆ ಬಳಕೆ ಮಾಡುತ್ತಿದ್ದರು. ಕೇವಲ 20-25 ಯುನಿಟ್ ಬಳಸಿದರೆ ಶೇ.2ರಷ್ಟು ಯುನಿಟ್ ನೀಡುತ್ತಿದ್ದೆವು. ಆದರೆ ಸಂಪುಟ ನಿರ್ಧಾರದಿಂದ 48 ಇರುವುದು 58 ಯುನಿಟ್ ಆಗುತ್ತದೆ. ಮುಂದಿನ ಬಿಲ್ಲಿಂಗ್‌ನಲ್ಲಿ ಇದು ಸೇರ್ಪಡೆಯಾಗುತ್ತದೆ ಎಂದು ಹೇಳಿದ್ದಾರೆ.
ಇದರಿಂದ ಸರ್ಕಾರಕ್ಕೆ ಹೊರೆ ಆಗುತ್ತೆ, ಆದರೆ ಬಡವರಿಗೆ ಅನುಕೂಲವಾಗುತ್ತೆ. ಎಷ್ಟೋ ಗ್ರಾಹಕರಿಗೆ ಶೂನ್ಯ ಬಿಲ್ ಬರುತ್ತಿರಲಿಲ್ಲ. ಇವರಿಗೆ ಅನುಕೂಲ ಆಗಲಿ ಅಂತಾ ಸಿಎಂ ಸಿದ್ದರಾಮಯ್ಯ ತೀರ್ಮಾನ ಕೈಗೊಂಡಿದ್ದಾರೆ. ಇದರಿಂದ ವಾರ್ಷಿಕವಾಗಿ 500-600 ಕೋಟಿ ರೂ. ಹೆಚ್ಚುವರಿ ಹೊರೆ ಆಗುತ್ತದೆ ಎಂದು ಹೇಳಿದ್ದಾರೆ.
ಗೃಹಜ್ಯೋತಿ ಯೋಜನೆಯಲ್ಲಿ ಬದಲಾವಣೆ: ಸಚಿವ ಕೆ.ಜೆ.ಜಾರ್ಜ್ ಹೇಳಿದ್ದೇನು..?
Date: