ಗೆಣಸು ತಿನ್ನುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿದೆ ಗೊತ್ತಾ?
ಹಲವಾರು ಕಾಯಿಲೆಗಳಿಗೆ ಗೆಣಸು ರಾಮಬಾಣ ಎನ್ನುವುದರಿಂದ ಆಯುರ್ವೇದ ಪದ್ಧತಿಯಲ್ಲೂ ಸಹ ಇದರ ಬಗ್ಗೆ ಮಾತನಾಡುತ್ತಾರೆ. ಯಾರು ಆಗಾಗ ಸಿಹಿ ಗೆಣಸು ತಿನ್ನುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ ಅಂತಹವರಿಗೆ ಕಣ್ಣಿನ ಸಮಸ್ಯೆ, ಕರುಳಿನ ಸಮಸ್ಯೆ ಜೀವಸತ್ವಗಳು ಮತ್ತು ಫೈಬರ್ನಿಂದ ಸಮೃದ್ಧವಾಗಿರುವ ಗೆಣಸು ನಿಮ್ಮ ಚರ್ಮ, ಹೃದಯ ಮತ್ತು ಒಟ್ಟಾರೆ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಪಿಷ್ಟ, ಫೈಬರ್, ಪ್ರೋಟೀನ್, ಖನಿಜಗಳಾದ ಮ್ಯಾಂಗನೀಸ್, ತಾಮ್ರ, ಪೊಟ್ಯಾಸಿಯಮ್, ಕಬ್ಬಿಣ, ವಿಟಮಿನ್ಗಳಾದ ಬಿ ಕಾಂಪ್ಲೆಕ್ಸ್, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಎ ಗೆಣಸಿನಲ್ಲಿದೆ.
ಗೆಣಸು ಫೈಬರ್ ಭರಿತ ಆಹಾರವಾಗಿದ್ದು, ನಿಯಮಿತ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ಇದು ದೇಹಕ್ಕೆ ಬೇಕಾದ ವಿಟಮಿನ್ ಬಿ6, ಕ್ಯಾಲ್ಸಿಯಂ, ಕಬ್ಬಿಣ, ಸೋಡಿಯಂ, ಝಿಂಕ್, ಮೆಗ್ನೀಸಿಯಂ ಮೊದಲಾದ ಅಂಶಗಳನ್ನು ಒದಗಿಸುತ್ತದೆ.
ಇದರಲ್ಲಿ ಉತ್ತಮ ಪ್ರಮಾಣದ ನಾರಿನಂಶ, ವಿಟಮಿನ್ ಸಿ ಮತ್ತು ವಿಟಮಿನ್ ಎ ಅಂಶಗಳಿವೆ.
ಗೆಣಸುಗಳಲ್ಲಿ ಸ್ವಾಭಾವಿಕ ಸಕ್ಕರೆ ಅಂಶ ಇರುವುದರಿಂದ ಅದು ರಕ್ತದ ಸಕ್ಕರೆ ಅಂಶವನ್ನು ಕಡಿಮೆ ಮಾಡಿ, ಇನ್ಸುಲಿನ್ ಪ್ರಮಾಣವನ್ನು ಸ್ಥಿರವಾಗಿಡುತ್ತದೆ.
ಗೆಣಸು ಗರ್ಭಿಣಿಯರಿಗೆ ಬಹಳ ಅವಶ್ಯಕವಾದ ವಿಟಮಿನ್ ಬಿ ಸೇರಿದಂತೆ ಪೋಲಿಕ್ ಆಸಿಡ್ ಅನ್ನು ಹೊಂದಿದೆ.
ಇದರಲ್ಲಿ ವಿಟಮಿನ್, ಮಿನರಲ್ಸ್, ಪ್ರೊಟೀನ್ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಆರೋಗ್ಯಕರವಾಗಿದೆ.
ಗೆಣಸಿನ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಅಸ್ತಮಾ ಸಮಸ್ಯೆ ನಿವಾರಣೆಯಾಗುತ್ತದೆ, ಮಲಬದ್ಧತೆ ನಿವಾರಣೆಯಾಗುತ್ತದೆ.
ಸೇರಿದಂತೆ ಇನ್ನಿತರ ಹಲವಾರು ಆರೋಗ್ಯ ತೊಂದರೆಗಳು ದೂರ ಆಗುತ್ತವೆ.