ಕ್ರೀಡಾ ಲೋಕದ ‘ಸ್ಟೈರ್ಸ್ ’ ಅನ್ನು ಹುಟ್ಟುಹಾಕಿದ್ದು ಖ್ಯಾತ ಕ್ರೀಡಾಪಟು ಸಿದ್ಧಾರ್ಥ್ ಉಪಾಧ್ಯಾಯ್. ಸಿದ್ಧಾರ್ಥ್ ಗೆ ಬದುಕಿನಲ್ಲಿ ಕ್ರೀಡೆಗೆ ಇರುವ ಮಹತ್ವದ ಬಗ್ಗೆ ಅರಿವಿದೆ. ಕ್ರೀಡೆ ಮಕ್ಕಳ ಬದುಕನ್ನು ಹೇಗೆ ಬದಲಿಸಬಲ್ಲದು ಅನ್ನುವ ಬಗ್ಗೆ ಸ್ಪಷ್ಟತೆಯನ್ನೂ ಹೊಂದಿದ್ದಾರೆ. ಕ್ರೀಡೆಯಿಂದಾಗಿ ಮಕ್ಕಳಲ್ಲಿ, ಕ್ರೀಡಾಸ್ಪೂರ್ತಿ, ಶಿಸ್ತು ಮತ್ತು ಬದುಕಲು ಬೇಕಾದ ಕಲೆಗಳು ಬೆಳೆಯುತ್ತವೆ ಎನ್ನುವುದು ಅವರ ಕನಸು.
ಇದನ್ನೇ ಉದ್ದೇಶವನ್ನಾಗಿಟ್ಟುಕೊಂಡು ಸಿದ್ಧಾರ್ಥ್ ‘ಸ್ಟೈರ್ಸ್’ ಅನ್ನುವ ಎನ್ಜಿಒ ಒಂದನ್ನು ಸ್ಥಾಪನೆ ಮಾಡಿದ್ದರು. ಕ್ರೀಡೆಯ ಮೂಲಕ ಬಡ ಮತ್ತು ಗ್ರಾಮೀಣ ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಸಿದ್ಧಾರ್ಥ್ಗೆ “ಸ್ಟೈರ್ಸ್” ಬಗೆಗಿನ ಕನಸುಗಳು ಹುಟ್ಟಿಕೊಂಡಿದ್ದು 2000ದಲ್ಲಿ.
ಜೀವನದಲ್ಲಿ ಕ್ರೀಡೆ ಅನ್ನೋದು ಒಂದು ಆ್ಯಕ್ಟಿವಿಟಿ ಅನ್ನುವುದನ್ನು 38 ವರ್ಷದ ಸಿದ್ಧಾರ್ಥ್ ಒತ್ತಿ ಹೇಳುತ್ತಾರೆ. ಯುವಕರ ಪಾಲಿಗೆ “ಸ್ಟೈರ್ಸ್” ಯಶಸ್ಸಿನ ಮೆಟ್ಟಿಲುಗಳನ್ನು ಹತ್ತಲು ಸಹಾಯ ಮಾಡುತ್ತಿದೆ. “ಸ್ಟೈರ್ಸ್” ಅನ್ನುವ ಸಂಸ್ಥೆ ಕ್ರೀಡಾಪಟುಗಳನ್ನು ಸಿದ್ಧಮಾಡುತ್ತಿದೆ. ಪ್ರತಿಭೆ ಇದ್ದರೂ ಅದನ್ನು ತೋರಿಸಲು ಅವಕಾಶವಿಲ್ಲದವರನ್ನು ಹುಡುಕಿ, ಅವರಿಗೆ ಕ್ರೀಡೆಯಲ್ಲೇ ಮುಂದೆ ಬರಲು ಸಹಾಯ ಮಾಡುತ್ತಿದೆ.
“ಸ್ಟೈರ್ಸ್” ಸದ್ಯಕ್ಕೆ ದೇಶದ 6 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಮತ್ತಿತರ ಕಡೆ ಹೊಸ ಸೆಂಟರ್ ಗಳನ್ನು ಆರಂಭಿಸುವ ಯೋಜನೆ ಕೂಡ ನಡೆಯುತ್ತಿದೆ. ಕೋಚ್ ಗಳು ಮತ್ತು ಸ್ಥಳೀಯ ಸ್ವಯಂ ಸೇವಕರು ಸ್ಟೈರ್ಸ್ ಅಂದುಕೊಂಡಿದ್ದನ್ನು ಸಾಧಿಸಲು ನೆರವು ನೀಡುತ್ತಿದ್ದಾರೆ.
“ಸ್ಟೈರ್ಸ್” ತನ್ನಂತೆಯೇ ಕೆಲಸ ಮಾಡುವ ಸಂಸ್ಥೆಗಳೊಂದಿಗೆ ಕೈಜೋಡಿಸುತ್ತಿದೆ. ಯುಫ್ಲೆಕ್ಸ್, ಖೇಲೋ ಡೆಲ್ಲಿ ಅನ್ನುವ ಪ್ರಾಜೆಕ್ಟ್ ಗೆ “ಸ್ಟೈರ್ಸ್” ಜೊತೆಗೆ ಕೈ ಜೋಡಿಸಿದೆ. ಯುಫ್ಲೆಕ್ಸ್ ಭಾರತದ ಅತೀ ದೊಡ್ಡ ಪ್ಯಾಕೇಜಿಂಗ್ ಕಂಪನಿ ಅನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. “ಸ್ಟೈರ್ಸ್” ಕ್ರೀಡಾಪಟುಗಳಿಗೆ ಕ್ರೀಡಾ ಸಾಮಾಗ್ರಿಗಳನ್ನು ಮತ್ತು ಬೇಸಿಕ್ ಗಳನ್ನು ಉಚಿತವಾಗಿ ನೀಡುತ್ತಿದೆ.
ಸದ್ಯಕ್ಕೆ ದೆಹಲಿಯಲ್ಲಿರುವ 29 ಯುಫ್ಲೆಕ್ಸ್ ಸ್ಟೈರ್ಸ್ ಸೆಂಟರ್ಗಳಲ್ಲಿ ಸುಮಾರು 5000ಕ್ಕೂ ಅಧಿಕ ಕ್ರೀಡಾಪಟುಗಳು ತರಬೇತಿ ಪಡೆಯುತ್ತಿದ್ದಾರೆ. ಇದರಲ್ಲಿ ಫುಟ್ಬಾಲ್ ಅತೀ ದೊಡ್ಡ ಆಟದ ಭಾಗವಾಗಿದೆ. 7000 ಗ್ರಾಮಗಳ ಸುಮಾರು 3ಲಕ್ಷ ಮಕ್ಕಳು “ಸ್ಟೈರ್ಸ್”ನ ಈ ಪ್ರೋಗ್ರಾಂನಲ್ಲಿ ಭಾಗವಹಿಸಲು ಹೆಸರು ನೊಂದಾಯಿಸಿದ್ದಾರೆ.
ದೇಶದಾದ್ಯಂತ ಸುಮಾರು ಒಂದೂವರೆ ಲಕ್ಷ ಪ್ರತಿಭೆಗಳು “ಸ್ಟೈರ್ಸ್ನ” ವಿವಿಧ ಸೆಂಟರ್ ಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈ ಪೈಕಿ 50 ಸಾವಿರ ಪ್ರತಿಭೆಗಳನ್ನು 2013ರಲ್ಲೇ ಪತ್ತೆ ಮಾಡಲಾಗಿದೆ. “ಸ್ಟೈರ್ಸ್” ಸುಮಾರು 200 ರಾಷ್ಟ್ರೀಯ ಕ್ರೀಡಾಪಟುಗಳನ್ನು ತಯಾರು ಮಾಡಿದ ಹೆಗ್ಗಳಿಕೆಯನ್ನು ಹೊಂದಿದೆ.
ಒಟ್ಟಿನಲ್ಲಿ “ಸ್ಟೈರ್ಸ್” ಭಾರತದ ಕ್ರೀಡಾಪಟುಗಳ ಜೀವನಕ್ಕೆ ತಿರುವು ನೀಡಬಲ್ಲ ಕೆಲಸವನ್ನು ಮಾಡುತ್ತಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ.